ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ

ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಧನ್ಯಶ್ರೀ ತಂದೆ ಯಾದವ ಸುವರ್ಣ ಅವರಿಗೆ ಕೆಲವರು ಒತ್ತಡ ಹೇರಿ ಪೊಲೀಸರಿಗೆ ತಪ್ಪು ಮಾಹಿತಿ ನೀಡುವಂತೆ ಮಾಡಿರುವುದು ಗೊತ್ತಾಗಿದೆ. ತಪ್ಪು ಮಾಹಿತಿ ನೀಡುವಂತೆ ಮಾಡಿದ ಕೆಲ ಸಂಘಟನೆಗಳ ಯುವಕರನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇಲ್ಲಿ ತಿಳಿಸಿದ್ದಾರೆ.

ಯಾದವ ಸುವರ್ಣ ನೀಡಿರುವ ದೂರಿನಲ್ಲಿರುವ ಅಂಶ, ಪೊಲೀಸರಿಗೆ ಸಿಕ್ಕಿರುವ ಮರಣ ಪತ್ರದಲ್ಲಿನ (ಡೆತ್‌ನೋಟ್‌) ಸಂಗತಿ ಭಿನ್ನವಾಗಿದೆ. ಸುಳ್ಳು ಮಾಹಿತಿ ಕೊಡಿಸಿ ತನಿಖೆ ದಾರಿ ತಪ್ಪಿಸಲು ಯತ್ನಿಸಿದ್ದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗಿವೆ.

ಧನ್ಯಶ್ರೀ ತಂದೆಯಿಂದ ತಪ್ಪಾಗಿ ದೂರು ನೀಡಿಸಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾಕೆಂದರೆ ಧನ್ಯಶ್ರೀ ತಂದೆ ನೀಡಿದ್ದ ದೂರಿಗೂ, ಸಿಕ್ಕ ದಾಖಲೆಗಳು, ಡೆತ್‍ನೋಟ್‍ಗೂ ಹೋಲಿಕೆಯೆ ಆಗುತ್ತಿಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ.

ಸಂಘಟನೆಗಳ ಕೆಲವರು ಪೊಲೀಸ್ ಇಲಾಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ನಾವು ಖಾಕಿ ಬಟ್ಟೆ ಹಾಕಿದ ಮೇಲೆ ನಮಗೆ ಎಲ್ಲರೂ ಒಂದೇ. ಎಲ್ಲಾ ಧರ್ಮವೂ ಒಂದೇ. ನನ್ನ ಸಬ್ ಇನ್ಸ್ ಪೆಕ್ಟರ್ ನನ್ನ ಅಣತಿಯಂತೆ ಕೆಲಸ ಮಾಡಿದ್ದಾರೆ.

ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿರುವವರ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೆ ದೊಡ್ಡ ವ್ಯಕ್ತಿಗಳೇ ಬರಲಿ, ಎಷ್ಟೆ ಒತ್ತಡ ಬಂದರು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಜ.7ರಂದು ಧನ್ಯಶ್ರೀ ತಾಯಿ ಸರಸ್ವತಿ ಅವರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ದೂರು ಪ್ರತಿಯನ್ನು ಸರಸ್ವತಿ ಅವರಿಗೆ ಪೊಲೀಸರು ಓದಿ ಹೇಳಿದ್ದಾರೆ. ಇದನ್ನು ವಿಡಿಯೋ ಮಾಡಲಾಗಿದೆ. ತಾಯಿ ದೂರು ಪಡೆದಿರುವುದಕ್ಕೆ ಸಂಬಂಧಿಸಿದಂತೆ ಕೆಲ ಸಂಘಟನೆಗಳವರು ಪಿಎಸ್ಐ ವಿರುದ್ಧ ವೃಥಾ ಆರೋಪ ಮಾಡಿದ್ದಾರೆ.

ಕೆಲ ಸಂಘಟನೆಗಳ ನಾಯಕರು ಚಾನೆಲ್‌ಗಳಲ್ಲಿ ಹೇಳಿಕೆ ನೀಡಿದ್ದಾರೆ. ಧನ್ಯಶ್ರೀ ಮನೆಗೆ ಹೋಗಿ, ಮಾತುಕತೆ ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ಅವರು ಒಪ್ಪಿಕೊಂಡಂತಾಗಿದೆ. ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವವರು ಮಾಧ್ಯಮಗಳ ಮುಂದೆ ಏನೇನೂ ಹೇಳಿಕೆ ನೀಡಬಾರದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವಾಹಿನಿಗಳಿಗೂ ನೋಟಿಸ್‌ ನೀಡಲಾಗುವುದು’ ಎಂದು ಹೇಳಿದರು.

ಪ್ರಕರಣದಲ್ಲಿ ಪಿಎಸ್‌ಐಯವರು ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸಂಘಟನೆಯ ನಾಯಕರೊಬ್ಬರು ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಾಕಿದ್ದಾರೆ. ಪಿಎಸ್‌ಐ ಅವರ ಧರ್ಮದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಂಘಟನೆ ನಾಯಕನ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

‘ಸರಸ್ವತಿ ನೀಡಿರುವ ದೂರಿನ ಅನ್ವಯ ಐಪಿಸಿ 306( ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಲಾಗಿತ್ತು. ಈ ದೂರಿಗೆ ಐಪಿಸಿ 153–ಎ(ಸಾಮರಸ್ಯ ಹಾಳು ಮಾಡುವುದು) ಪ್ರಕರಣ ಸೇರ್ಪಡೆ ಮಾಡುತ್ತೇವೆ’ ಎಂದರು.

‘ಮೂಡಿಗೆರೆಯ ಬಜರಂಗದಳದವರು ಎಂದು ಹೇಳಿಕೊಂಡು ‘ಹಿಂದೂ ಹುಡುಗಿಯರಿಗೆ ಎಚ್ಚರಿಕೆ’ ಎಂಬ ಸಂದೇಶವೊಂದನ್ನು ವಾಟ್ಸಾಪ್‌ನಲ್ಲಿ ವೈರಲ್‌ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಗುರುತಿಸಲಾಗಿದೆ. ಅವರೆಲ್ಲರೂ ಮೂಡಿಗೆರೆಯವರು. ಈ ಬಗ್ಗೆಯೂ ಪ್ರಕರಣ ದಾಖಲಿಸುತ್ತೇವೆ’ ಎಂದರು.

ವಿದ್ಯಾರ್ಥಿನಿ ಧನ್ಯಶ್ರೀ  ಜತೆ ತುಳು ಭಾಷೆಯಲ್ಲಿ ವಾಟ್ಸಾಪ್‌ನಲ್ಲಿ ಚಾಟ್‌ ಮಾಡಿರುವುದು ಸಂತೋಷ್‌ ಅಲ್ಲ. ಅವರ ಜತೆ ಚಾಟ್‌ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಆರೋಪಿಯ ಶೋಧಕ್ಕೆ ವಿಶೇಷ ತಂಡ ನೇಮಿಸಲಾಗಿದೆ ಎಂದರು. ಮೂಡಿಗೆರೆಯಲ್ಲಿ ಗಿರಿವಾಹಿನಿ ಪತ್ರಿಕೆಯ ನಯನ ಎಂಬುವರು ಧನ್ಯಶ್ರೀ ಅವರ ತಾಯಿ ಜತೆ ವಿಚಾರಣೆ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ನಯನ ಅವರಿಗೆ ನೋಟಿಸ್‌ ನೀಡಲಾಗುವುದು ಎಂದರು.

ಜ.5ರಂದು ಬೆಳಿಗ್ಗೆ ಕೆಲ ಯುವಕರು ಏಕಾಏಕಿ ಧನ್ಯಶ್ರೀ ಮನೆಗೆ ಹೋಗಿ ಅವರ ತಾಯಿಯನ್ನು ಬೈಯ್ದಿದ್ದಾರೆ. ಈ ಸಂದರ್ಭದಲ್ಲಿ ಧನ್ಯಶ್ರಿ ಮನೆಯಲ್ಲಿ ಇರಲಿಲ್ಲ. ಧನ್ಯಶ್ರೀ ಮನೆಯಲ್ಲಿದ್ದಾಗ ಯುವಕರು ಸಂಜೆ ಹೋಗಿ ಮತ್ತೆ ಬೈಯ್ದಿದ್ದಾರೆ. ಧನ್ಯಶ್ರೀ ಅವರು ಎರಡು ದಿನ ಊಟ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ’ ಎಂಬುದು ಗೊತ್ತಾಗಿದೆ.

ಧನ್ಯಶ್ರೀ ಮನೆಗೆ ತೆರಳಿದ ಯುವಕರು ಯಾರು ಎಂಬುದನ್ನು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಬೆಳಗಾವಿ, ಕಲಬುರ್ಗಿ ಕಡೆಗಳಿಗೆ ತಂಡಗಳನ್ನು ಕಳಿಸಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದರು.

ಇದನ್ನೂ ಓದಿ:
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ:
http://bit.ly/2CKV9uN
►►ಸಂಘ ಪರಿವಾರದ ಧಮ್ಕಿಗೆ ಆತ್ಮಹತ್ಯೆ: ದೇಶಾದ್ಯಂತ ಸುದ್ದಿಯಾಗುತ್ತಿದೆ ಧನ್ಯಾ ಸಾವು: http://bit.ly/2Eq55KC
►►ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಸೆರೆ: http://bit.ly/2CS310P
►►ಲವ್ ಜಿಹಾದ್ ಪುಕಾರು. ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ: ವಿದ್ಯಾರ್ಥಿನಿ ಆತ್ಮಹತ್ಯೆ: http://bit.ly/2CQeGy5

ಇಂದು ಹೆಚ್ಚು ಓದಿದ ಸುದ್ದಿ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ:
http://bit.ly/2CKV9uN
►►ಭೂಗತ ಲೋಕದ ಸಂಪರ್ಕವಿದೆ ಎಂದು ಬೆದರಿಕೆ: ತಿಂಗಳೆ ವಿರುದ್ಧ ಬಿಜೆಪಿ ನಾಯಕನ ಆರೋಪ: http://bit.ly/2D0BDOm
►►ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ: http://bit.ly/2CZlQ3d
►►ಕೇಂದ್ರದ ಅನುದಾನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ: ಅಮಿತ್ ಷಾ ಆರೋಪ: http://bit.ly/2Fo2ZvU
►►ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2qQr0bS
►►ಮೂರು ದಿನಗಳ ಕಾಲ ಚಳಿಯಲ್ಲಿ ಬಳಲಿದ ಯುವಕ: ನೆರವಾಯಿತು ‘ನಾಗರಿಕ ವೇದಿಕೆ’: http://bit.ly/2ALkL8W
►►ಹೆಣ ಬಿದ್ದರೆ ರಣಹದ್ದುಗಳಂತೆ ಎಗರಾಡುವ ಬಿಜೆಪಿ: ಫೇಸ್‌ಬುಕ್‌ನಲ್ಲಿ ಅನುಪಮಾ ಶೆಣೈ: http://bit.ly/2CMWJw2
►►ಮುಸ್ಲಿಮರ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ: ದಲಿತ ಮಹಿಳೆಯ ಮನೆಗೆ ನುಗ್ಗಿದ ಬಜರಂಗಿಗಳ ಬಂಧನ: http://bit.ly/2CLc2FK
►►ಸರ್ಕಾರಿ ಜಾಗದಲ್ಲಿದ್ದ ಭೂ ಹೀನರ ಮನೆ ತೆರವು. ಹಲವರ ಬಂಧನ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2AM2iJA
►►ಹಿಂಜಾವೇ ನಾಯಕನ ಮೇಲೆ ಹಲ್ಲೆಯ ಕಟ್ಟುಕತೆ ಬಯಲು ಮಾಡಿದ ಪೊಲೀಸರು: http://bit.ly/2AJPfYV

Related Tags: Dhanyashree Suicide, Moodigere, S. P. Annamalai, Bajrang Dal, BJP Yuva Morcha, Chikmagaluru Police, Love Jehad, Social Media
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ