ಭೂಗತ ಲೋಕದ ಸಂಪರ್ಕವಿದೆ ಎಂದು ಬೆದರಿಕೆ: ತಿಂಗಳೆ ವಿರುದ್ಧ ಬಿಜೆಪಿ ನಾಯಕನ ಆರೋಪ

ಕರಾವಳಿ ಕರ್ನಾಟಕ ವರದಿ

ಕಾರವಾರ:
ಭೂಗತ ಲೋಕದ ಸಂಪರ್ಕವಿದೆ ಎಂದು ಹೇಳಿಕೊಂಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲೆಯ ಬಿಜೆಪಿ ಪ್ರಭಾರಿ ಉಸ್ತುವಾರಿಗಳೂ ಆಗಿರುವ ವಿಕ್ರಮಾರ್ಜುನ ತಿಂಗಳೆ ತಮ್ಮ ಹಿತಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರೋರ್ವರಿಗೆ ಜೀವ ಬೆದರಿಕೆ ಹಾಕುವ ಮೂಲಕ ಪಕ್ಷದಲ್ಲಿಯೇ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಪ್ರಸಾದ್ ಕಾರವಾರಕರ್ ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ವಿಕ್ರಮಾರ್ಜುನ ತಿಂಗಳೆಯವರು ತಾನು ಭೂಗತ ಲೋಕದ ಸಂಪರ್ಕ ಇರುವಂತಹ ಶರತ್ ಶೆಟ್ಟಿಯ ಅಳಿಯ. ನಿನಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. ನಾನು 4-5 ಗನ್‌ಗಳನ್ನು ಇಟ್ಟುಕೊಂಡು ತಿರುಗುವಂತಹವನು. ಆದ್ದರಿಂದ ನನ್ನ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ನಾಗರಾಜ ಜೋಶಿಗೆ ಬೆದರಿಕೆ ಹಾಕಿದ್ದು ಇದು ಜಿಲ್ಲಾ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಎಂದು ಹೇಳಿದರು.

ವಿಕ್ರಮಾರ್ಜುನ ತಿಂಗಳೆ ಅವರು ಆಡಿದ ಮಾತುಗಳನ್ನು ಗಮನಿಸಿದರೆ ಭೂಗತ ಲೋಕದ ಜೊತೆಗೆ ಇವರೂ ಕೂಡ ಸಂಪರ್ಕ ಹೊಂದಿರುವುದು ಸ್ಪಷ್ಟವಾಗುತ್ತದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉದ್ಯಮಿಯೊಬ್ಬರಿಗೆ ಟಿಕೇಟ್ ಕೋಡಿಸುವುದಕ್ಕೊಸ್ಕರ ಸ್ಥಳೀಯ ನಾಯಕರಿಗೆ ಈ ರೀತಿ ಬೇದರಿಕೆ ನೀಡುತ್ತಿದ್ದು ಗನ್ ಪಾಯಿಂಟ್ ತೋರಿಸಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ವಿಕ್ರಮಾರ್ಜುನ ತಿಂಗಳೆ ಐಶಾರಾಮಿ ಸಂಸ್ಕೃತಿ ಹೊಂದಿದವರಾಗಿದ್ದಾರೆ. ಅವರು ಪಕ್ಷದ ಸಿದ್ದಾಂತವನ್ನು ಎಂದೂ ಪಾಲಿಸಿದವರಲ್ಲ. ಕಳೆದ ಬಾರಿ ಪ್ರಚಾರಕ್ಕೆಂದು ಜಿಲ್ಲೆಯ ಆಯಾ ಕ್ಷೇತ್ರದ ಮನೆಗಳಿಗೆ ತೆರಳಿದಾಗ ಆ ಕ್ಷೇತ್ರದ ಮನೆಗಳಲ್ಲಿಯೇ ವಾಸಮಾಡಬೇಕು ಎಂದು ಪಕ್ಷದಿಂದ ಸೂಚನೆ ನೀಡಲಾಗಿತ್ತು.

ಆದರೆ ತಿಂಗಳೆ ಅವರು ಎಲ್ಲಿಯೂ ವಾಸ್ತವ್ಯ ಹೂಡದೇ ರೇಸಾರ್ಟ್ ಸಂಸ್ಕೃತಿಗೆ ಮಾರು ಹೋಗಿದ್ದರು. ಇಂತಹವರು ಇದೀಗ ಸ್ವ-ಹಿತಕ್ಕಾಗಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದರು.

ಭೂಗತ ಲೋಕದ ಸಂಪರ್ಕ ಹೊಂದಿರುವ ಬಗ್ಗೆ ಅವರ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಇವರಿಗೆ ಭೂಗತ ನಂಟು ಇರುವ ಸಂಶಯ ಇರುವುದರಿಂದ ಅವರನ್ನು ರಾಷ್ಟ್ರೀಯ ಭದ್ರತಾ ದಳದವರು ಬಂಧಿಸಿ ತನಿಖೆ ನಡೆಸಬೇಕು. ಅಲ್ಲದೆ ಬೆದರಿಕೆಗೆ ಒಳಗಾಗಿರುವ ನಾಗರಾಜ ಜೋಶಿ ಸೇರಿದಂತೆ ಇನ್ನಿತರರಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಜಿಲ್ಲಾ ವಕ್ತಾರ ನಾಗರಾಜ್ ಜೋಶಿ ಮಾತನಾಡಿ ಕಳೆದ ಶನಿವಾರ ವಿಕ್ರಮಾರ್ಜುನ ತಿಂಗಳೆ ಪಕ್ಷದ ಸಭೆ ಕರೆದಿದ್ದರು.

ಅದರಲ್ಲಿ ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೋಳಂಕರ್ ಗೈರಾಗಿದ್ದರಿಂದ ವಿಕ್ರಮಾರ್ಜುನ್ ತಿಂಗಳೆ ಅವರು ಗ್ರಾಮೀಣ ಘಟಕದ ಅಧ್ಯಕ್ಷರನ್ನು ವಜಾ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಅಂದು  ಗ್ರಾಮೀಣ ಘಟಕದ ಅಧ್ಯಕ್ಷರು ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರೆ ಕೇಳುವ ತಾಳ್ಮೆ ಇಲ್ಲದೆ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಉಮಾಕಾಂತ ಹರಿಕಂತ್ರ, ನಾರಾಯಣ ಅಂಕೋಲೆಕರ್, ಸತೀಶ್, ಪೂರ್ಣಿಮಾ ಮುಂತಾದವರು ಇದ್ದರು.

ಇಂದು ಹೆಚ್ಚು ಓದಿದ ಸುದ್ದಿ
►►ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ:
http://bit.ly/2CZlQ3d
►►ಕೇಂದ್ರದ ಅನುದಾನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ: ಅಮಿತ್ ಷಾ ಆರೋಪ: http://bit.ly/2Fo2ZvU
►►ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2qQr0bS
►►ಮೂರು ದಿನಗಳ ಕಾಲ ಚಳಿಯಲ್ಲಿ ಬಳಲಿದ ಯುವಕ: ನೆರವಾಯಿತು ‘ನಾಗರಿಕ ವೇದಿಕೆ’: http://bit.ly/2ALkL8W
►►ಹೆಣ ಬಿದ್ದರೆ ರಣಹದ್ದುಗಳಂತೆ ಎಗರಾಡುವ ಬಿಜೆಪಿ: ಫೇಸ್‌ಬುಕ್‌ನಲ್ಲಿ ಅನುಪಮಾ ಶೆಣೈ: http://bit.ly/2CMWJw2
►►ಮುಸ್ಲಿಮರ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ: ದಲಿತ ಮಹಿಳೆಯ ಮನೆಗೆ ನುಗ್ಗಿದ ಬಜರಂಗಿಗಳ ಬಂಧನ: http://bit.ly/2CLc2FK
►►ಸರ್ಕಾರಿ ಜಾಗದಲ್ಲಿದ್ದ ಭೂ ಹೀನರ ಮನೆ ತೆರವು. ಹಲವರ ಬಂಧನ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2AM2iJA
►►ಹಿಂಜಾವೇ ನಾಯಕನ ಮೇಲೆ ಹಲ್ಲೆಯ ಕಟ್ಟುಕತೆ ಬಯಲು ಮಾಡಿದ ಪೊಲೀಸರು: http://bit.ly/2AJPfYV

Related Tags: Karwar News, Vikramarjun Tingale, Prasad Karwarkar, Bjp Pressmeet, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ