ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ನಡೆಸಿದ ಹಂತಕರು ಕೃತ್ಯಕ್ಕೆ ಬಳಸಿದ ಮೊಬೈಲ್ ಹಾಗೂ ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಕೊಲೆ ಮಾಡಲು ಬಳಸಿದ ಮಾರಕಾಸ್ತ್ರಗಳ ಪತ್ತೆಗಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳಾದ ಪಿ.ಕೆ.ಶ್ರೀಜಿತ್, ಧನುಷ್ ಪೂಜಾರಿ, ಕಿಶನ್ ಪೂಜಾರಿ ‌ಮತ್ತು ಸಂದೇಶ್ ಕೋಟ್ಯಾ‌ನ್ ಅವರನ್ನು ಸ್ಥಳಕ್ಕೆ ಕರೆದೊಯ್ದ ಸಿಸಿಆರ್ ಬಿ ಎಸಿಪಿ‌ ವೆಲೆಂಟೈನ್ ಡಿಸೋಜ ನೇತೃತ್ವದ ತನಿಖಾ ತಂಡ ಮುಳುಗು‌ ತಜ್ಞರ ಸಹಾಯದಿಂದ ಶೋಧ ನಡೆಸುತ್ತಿದೆ.

ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಅಮಾಯಕ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣದ ಬಳಿಕ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್‌ಫುಡ್ ಉದ್ಯಮ ನಡೆಸಿಕೊಂಡಿದ್ದ ಬಶೀರ್ ಮೇಲೆ ಜನವರಿ 3ರಂದು ರಾತ್ರಿ 9.20ರ ವೇಳೆ ಹಲ್ಲೆ ನಡೆದಿತ್ತು. ಬಜರಂಗದಳದ ಕಾರ್ಯಕರ್ತರು ಎನ್ನಲಾದ ನಾಲ್ಕು ಮಂದಿ ಬಶೀರ್ ಅವರ ಮೇಲೆ 17 ಬಾರಿ ಇರಿದು ಬರ್ಬರವಾಗಿ ಹಲ್ಲೆ ಮಾಡಿದ್ದರು.

ಎ. ಜೆ. ಆಸ್ಪತ್ರೆಗೆ ದಾಖಲಾಗಿದ್ದ 47 ವರ್ಷ ಪ್ರಾಯದ ಬಶೀರ್ ಅವರು ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಬಶೀರ್ 26 ವರ್ಷಗಳ ಕಾಲ ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದರು, ಇತ್ತೀಚೆಗಷ್ಟೆ ಅವರು ನಗರದಲ್ಲಿ ವ್ಯವಹಾರ ಆರಂಭಿಸಿದ್ದರು. ಮಾರಕ ಇರಿತಗಳಿಂದಾಗಿ ಬಶೀರ್ ಅವರ ಯಕೃತ್ತು, ಮೂತ್ರಪಿಂಡ ,ಮುಂತಾದ ಪ್ರಮುಖ ಅಂಗಾಂಗಗಳು ತೀವ್ರ ಹಾನಿಗೆ ಈಡಾಗಿದ್ದವು. ಆಸ್ಪತ್ರೆಗೆ ಸೇರಿದ ಬಳಿಕ ಅವರನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ನಡೆದಿತ್ತು. ಸರ್ಕಾರದಿಂದಲೇ ಅವರ ಚಿಕಿತ್ಸೆಗೆ ನೆರವು ನೀಡುವ ಪ್ರಸ್ತಾಪವನ್ನೂ ಮಾಡಲಾಗಿತ್ತು.

ಬಶೀರ್ ಅವರ ಕೊಲೆ ಆರೋಪಿಗಳ ಪೈಕಿ ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ನಾಲ್ವರೂ ಬಜರಂಗದಳದ ಕಾರ್ಯಕರ್ತರು ಎನ್ನಲಾಗಿದ್ದು ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

ಸಂಬಂಧಿತ ಸುದ್ದಿಗಳ ಲಿಂಕ್ ಇಲ್ಲಿದೆ
►►ಬಜರಂಗಿಗಳಿಂದ ಪ್ರತೀಕಾರದ ಹಲ್ಲೆ. ಕೊನೆಗೂ ಬದುಕಲಿಲ್ಲ ಅಮಾಯಕ ಬಶೀರ್:
http://bit.ly/2D1z3VR
►►ದೀಪಕ್ ಕೊಲೆಗೆ ಪ್ರತೀಕಾರಕ್ಕಾಗಿ ಬಶೀರ್ ಮೇಲೆ ಹಲ್ಲೆ: ನಾಲ್ವರ ಬಂಧನ: http://bit.ly/2qAP7LQ
►►ಅಂತಃಕರಣಕ್ಕೆ ಧರ್ಮವಿಲ್ಲ: ದೀಪಕ್ ತಾಯಿಯ ಜೊತೆ ಕಣ್ಣೀರಾದ ಮಜೀದ್ ಪತ್ನಿ. ಫೋಟೊ ವೈರಲ್: http://bit.ly/2m5nypg
►►ಸಾವು ಬದುಕಿನ ನಡುವೆ ಬಷೀರ್ ಹೋರಾಟ: ಚಿಕಿತ್ಸೆಗೆ ಸರ್ಕಾರದ ನೆರವು: http://bit.ly/2m4mjqg
►►ಪಿಎಫ್ಐ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ: ಸುಬ್ರಹ್ಮಣ್ಯ ಹೊಳ್ಳ ಆರೋಪ: http://bit.ly/2Cuw9rE
►►ಪಿಎಫ್ಐ ನಿಷೇಧಕ್ಕೆ ಆಗ್ರಹಿಸಿ ಸಂಘಪರಿವಾರದಿಂದ ರಾಸ್ತಾ ರೋಕೊ: http://bit.ly/2lWY6B6
►►ಕಾರ್ಕಳ: ಮಾರಕಾಸ್ತ್ರಗಳಿಂದ ಹಲ್ಲೆಗೈದ ಬಜರಂಗಿ ಪಡೆ: http://bit.ly/2CwdtI1
►►ಕಿಲ್ಲರ್‌ ಕಾಂಗ್ರೆಸ್‌: ಟ್ವಿಟರ್‌ನಲ್ಲಿ ಸಚಿವ ಹೆಗಡೆ ಕಿಡಿ: http://bit.ly/2AuTO9k
►►ವಿದೇಶಕ್ಕೆ ಹೋಗಿದ್ದರೆ ಬದುಕಿರುತ್ತಿದ್ದ. ನಾನೇ ಬೇಡ ಅಂದಿದ್ದೆ: ದೀಪಕ್ ತಾಯಿ: http://bit.ly/2lSvQzG
►►ಪಿಎಫ್ಐ ಜೊತೆ ಬಿಜೆಪಿಗೆ ನಿಕಟ ಸಂಪರ್ಕವಿದೆ: ಗೃಹ ಸಚಿವ ತಿರುಗೇಟು: http://bit.ly/2lUABtd
►►ದೀಪಕ್ ಕೊಲೆ: ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ: http://bit.ly/2lTWOXF
►►ಕಾಟಿಪಳ್ಳ ಹಿಂದೂ ರುದ್ರಭೂಮಿಯಲ್ಲಿ ದೀಪಕ್ ಅಂತ್ಯಕ್ರಿಯೆ: http://bit.ly/2qj0sA0
►►ದೀಪಕ್ ರಾವ್‌ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ: ಅಂತ್ಯ ಸಂಸ್ಕಾರಕ್ಕೆ ಮನವೊಲಿಸಿದ ಡಿಸಿ: http://bit.ly/2lTvw4J
►►ಕೊಲೆ ಆರೋಪಿಗಳನ್ನು ಬೆಂಬತ್ತಿದ ಸಾಹಸಿ ಕಾರು ಚಾಲಕ: http://bit.ly/2CmanX1
►►ಇನ್ನೊಂದು ಅಗ್ನಿ ದುರಂತ: ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತ್ಯು: http://bit.ly/2lUxrVw
►►ಗುಪ್ತವಾಗಿ ದೀಪಕ್ ರಾವ್ ಶವ ಮನೆಗೆ ರವಾನೆ. ಸ್ಥಳೀಯರ ಆಕ್ರೋಶ: http://bit.ly/2CCCfJQ
►►ಮಂಗಳೂರು: ಬಿಜೆಪಿಗನ ಕೊಲೆ ಬೆನ್ನಲ್ಲೇ ಇಬ್ಬರಿಗೆ ತಲವಾರ್ ಹಲ್ಲೆ: http://bit.ly/2E7fIm3
►►ಕಾಟಿಪಳ್ಳ ಬಜರಂಗದಳ ಕಾರ್ಯಕರ್ತನ ಕೊಲೆ: ನಾಲ್ವರ ಸೆರೆ  http://bit.ly/2ERME2k

ಇಂದು ಹೆಚ್ಚು ಓದಿದ ಸುದ್ದಿ
►►ಕೇಂದ್ರದ ಅನುದಾನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ: ಅಮಿತ್ ಷಾ ಆರೋಪ:
http://bit.ly/2Fo2ZvU
►►ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2qQr0bS
►►ಮೂರು ದಿನಗಳ ಕಾಲ ಚಳಿಯಲ್ಲಿ ಬಳಲಿದ ಯುವಕ: ನೆರವಾಯಿತು ‘ನಾಗರಿಕ ವೇದಿಕೆ’: http://bit.ly/2ALkL8W
►►ಹೆಣ ಬಿದ್ದರೆ ರಣಹದ್ದುಗಳಂತೆ ಎಗರಾಡುವ ಬಿಜೆಪಿ: ಫೇಸ್‌ಬುಕ್‌ನಲ್ಲಿ ಅನುಪಮಾ ಶೆಣೈ: http://bit.ly/2CMWJw2
►►ಮುಸ್ಲಿಮರ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ: ದಲಿತ ಮಹಿಳೆಯ ಮನೆಗೆ ನುಗ್ಗಿದ ಬಜರಂಗಿಗಳ ಬಂಧನ: http://bit.ly/2CLc2FK
►►ಸರ್ಕಾರಿ ಜಾಗದಲ್ಲಿದ್ದ ಭೂ ಹೀನರ ಮನೆ ತೆರವು. ಹಲವರ ಬಂಧನ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2AM2iJA
►►ಹಿಂಜಾವೇ ನಾಯಕನ ಮೇಲೆ ಹಲ್ಲೆಯ ಕಟ್ಟುಕತೆ ಬಯಲು ಮಾಡಿದ ಪೊಲೀಸರು: http://bit.ly/2AJPfYV

Related Tags: Bashir Death, Murder, Deepak Rao Murder, Retaliation, Bajarang Dal, Kottara Chowki, Stabbing, Netravathi River, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ