ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ

ಕರಾವಳಿ ಕರ್ನಾಟಕ ವರದಿ

ಚಾಮರಾಜನಗರ:
ಕೋಮುವಾದಿಗಳಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಚಾಮರಾಜನಗರದ ನಾಗವಳ್ಳಿ ಹೆಲಿಪ್ಯಾಡ್ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಆಗಲಿ, ಪಿಎಫ್ಐ ಆಗಲಿ ಯಾವುದೇ ಸಂಘಟನೆಯಾದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪಿಎಫ್‌ಐ, ಎಸ್‌ಡಿಪಿಐ, ಆರ್‌ಎಸ್‌ಎಸ್, ಬಜರಂಗದಳ, ವಿಎಚ್‌ಪಿ ಯಾವುದೇ ಸಂಘಟನೆಯಾದರೂ ಸಾಮರಸ್ಯ ಕದಡುವುದನ್ನು ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
 
ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್‍ಐ ನಂಟಿದೆ ಎನ್ನುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರವಿ ಪೂಜಾರಿಯಿಂದ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಆರ್‌ಎಸ್‌ಎಸ್, ಬಜರಂಗದಳದವರೇ ಉಗ್ರಗಾಮಿಗಳು ಎಂದು ನೇರವಾಗಿ ಹೇಳುವ ಮೂಲಕ ಸಿದ್ದರಾಮಯ್ಯ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಅವರಿಗೆ ಈ ಹೇಳಿಕೆ ಶೋಭೆ ತರುವಂತಿಲ್ಲ. ಅವರು ಹೇಳಿಕೆಯನ್ನು ಹಿಂಪಡಿಯಬೇಕೆಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಗ್ರಹಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಮೂರು ದಿನಗಳ ಕಾಲ ಚಳಿಯಲ್ಲಿ ಬಳಲಿದ ಯುವಕ: ನೆರವಾಯಿತು ‘ನಾಗರಿಕ ವೇದಿಕೆ’:
http://bit.ly/2ALkL8W
►►ಹೆಣ ಬಿದ್ದರೆ ರಣಹದ್ದುಗಳಂತೆ ಎಗರಾಡುವ ಬಿಜೆಪಿ: ಫೇಸ್‌ಬುಕ್‌ನಲ್ಲಿ ಅನುಪಮಾ ಶೆಣೈ: http://bit.ly/2CMWJw2
►►ಮುಸ್ಲಿಮರ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ: ದಲಿತ ಮಹಿಳೆಯ ಮನೆಗೆ ನುಗ್ಗಿದ ಬಜರಂಗಿಗಳ ಬಂಧನ: http://bit.ly/2CLc2FK
►►ಸರ್ಕಾರಿ ಜಾಗದಲ್ಲಿದ್ದ ಭೂ ಹೀನರ ಮನೆ ತೆರವು. ಹಲವರ ಬಂಧನ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2AM2iJA
►►ಹಿಂಜಾವೇ ನಾಯಕನ ಮೇಲೆ ಹಲ್ಲೆಯ ಕಟ್ಟುಕತೆ ಬಯಲು ಮಾಡಿದ ಪೊಲೀಸರು: http://bit.ly/2AJPfYV
►►ವಿದ್ಯಾರ್ಥಿನಿಯ ಫೋಟೊ ಬಳಸಿ ಮಾನಹಾನಿ, ಬೆದರಿಕೆ: ಪೊಲೀಸರಿಗೆ ದೂರು: http://bit.ly/2mhdSYI
►►ಸಂಘ ಪರಿವಾರದ ಧಮ್ಕಿಗೆ ಆತ್ಮಹತ್ಯೆ: ದೇಶಾದ್ಯಂತ ಸುದ್ದಿಯಾಗುತ್ತಿದೆ ಧನ್ಯಾ ಸಾವು: http://bit.ly/2Eq55KC

Related Tags: CM Siddaramaiah, Bajrang Dal & RSS Are Terrorists, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ