ಸಂಘ ಪರಿವಾರದ ಧಮ್ಕಿಗೆ ಆತ್ಮಹತ್ಯೆ: ದೇಶಾದ್ಯಂತ ಸುದ್ದಿಯಾಗುತ್ತಿದೆ ಧನ್ಯಾ ಸಾವು

ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಮತ್ತು ಬಿಜೆಪಿ ಯುವಮೋರ್ಚಾದ ಬೆದರಿಕೆಯ ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಾ ಸಾವಿನ ಸುದ್ದಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ವಿವಿಧ ಇಂಗ್ಲೀಷ್ ಹಿಂದಿ ಮಾಧ್ಯಮಗಳು ಇದೀಗ ಈ ಸುದ್ದಿ ಪ್ರಕಟಿಸಿದ್ದು ಭಾರತೀಯ ಜನತಾ ಪಕ್ಷ ಭಾರೀ ಮುಜುಗರಕ್ಕೆ ಈಡಾಗಿದೆ.

ಮುಸ್ಲಿಂ ಯುವಕನ ಜೊತೆ ಸ್ನೇಹವಿದೆ ಎಂದು ಯುವತಿಯ ಮನೆಗೆ ಹೋಗಿ ಬೆದರಿಕೆ ಹಾಕಿ ಸೋಷಿಯಲ್ ಮೀಡಿಯಾದಲ್ಲಿ 'ಲವ್ ಜಿಹಾದ್' ಎಂದು ಮಾನಹಾನಿ ಮಾಡಿ ತನ್ಮೂಲಕ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎನ್ನಲಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಮೂಡಿಗೆರೆಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿದ್ದಾನೆ. ಬಂಧಿತ ಆರೋಪಿ ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ವರ ನಿಕಟವರ್ತಿ ಎನ್ನಲಾಗಿದೆ.

ಮೂಡಿಗೆರೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಧನ್ಯಾ (20) ಜನವರಿ 6 ರಂದು ಆತ್ಮಹತ್ಯೆಗೆ ಶರಣಾಗಿದ್ದಳು.


ಈಕೆ ಮುಸ್ಲಿಂ ಯುವಕನ ಜೊತೆಗಿದ್ದ ಫೋಟೊ ಒಂದನ್ನು ಆಕೆಯ ಪರಿಚಯದ ಯುವಕನೋರ್ವ ಮೂಡಿಗೆರೆಯ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಗಮನಕ್ಕೆ ತಂದಿದ್ದ. ಮಾತ್ರವಲ್ಲ ಆಕೆ ಮತ್ತು ಆಕೆಯ ಪರಿಚಯದ ಯುವಕನೋರ್ವನ ನಡುವೆ ಆಕೆಯ ಮುಸ್ಲಿಂ ಸ್ನೇಹಿತನ ಕುರಿತು ಮಾಡಿದ ಚಾಟ್ ಹಿಸ್ಟರಿಯ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೊ ಜೊತೆ ಹರಿಯಬಿಟ್ಟು ಅದು ಭಾರೀ ವೈರಲ್ ಆಗಿತ್ತು.  

ಆ ಬಳಿಕ ಆರೋಪಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ್ಯ ಅನಿಲ್ ಮತ್ತು ಆತನ ಸಂಗಡಿಗರು ಧನ್ಯಾಳ ಮನೆಗೆ ತೆರಳಿ ಆಕೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಲವ್ ಜಿಹಾದ್ ಎಂದು ಬಿಂಬಿಸಿ ಧನ್ಯಾಳ ಬಗ್ಗೆ ಕೀಲು ಕಮೆಂಟ್‌ಗಳನ್ನು ಮಾಡಿ ಆಕೆಯ ಮಾನಹಾನಿ ಮಾಡಲಾಗಿತ್ತು. ಇದರಿಂದ ಮನನೊಂದ ಧನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆರಂಭದಲ್ಲಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಮೂಡಿಗೆರೆ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಇದೊಂದು ದೊಡ್ಡ ಸುದ್ದಿಯಾದ ಬಳಿಕ ಎಚ್ಚೆತ್ತುಕೊಂಡು ಬಿಜೆಪಿ ಯುವಮೋಚಾದ ಅಧ್ಯಕ್ಷ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಆರೋಪಿಯು ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ಆಪ್ತ ಎನ್ನಲಾಗಿದ್ದು ಆತ ಸಿ. ಟಿ. ರವಿ ಮತ್ತು ಮೈಸೂರು ಸಂಸದ ಪ್ರತಾಪ ಸಿಂಹ ಜೊತೆ ಇರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಂದು ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆ ಆರೋಪಿ ಅನಿಲ್ ಇರುವ ಫೋಟೊಗಳು ವೈರಲ್ ಆಗಿ ಬಿಜೆಪಿಗೆ ಇರಿಸುಮುರಿಸು ಉಂಟಾಗಿದೆ.

ಈ ಪ್ರಕರಣವೀಗ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸುದ್ದಿಯಾಗಿದೆ. ಬಿಜೆಪಿ ಮತ್ತು ಸಂಘಪರಿವಾರದ ಇತರ ಸಂಘಟನೆಗಳ ಅಪಪ್ರಚಾರದಿಂದ ಅಮಾಯಕ ಯುವತಿ ಜೀವ ಕಳೆದುಕೊಳ್ಳುವಂತಾಗಿರುವುದಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಧನ್ಯಾ ಸಾವಿನ ಬಳಿಕವೂ ಆಕೆಯ ಕುರಿತು ಕೀಳಾಗಿ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವುದನ್ನು ಮುಂದುವರಿಸಿದ್ದು ಆಕೆ ಸತ್ತಿದ್ದನ್ನು ಸಂಭ್ರಮಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಪ್ರಕರಣದಲ್ಲಿ ಒಳಗೊಂಡ ಎಲ್ಲರ ಮೇಲೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಉದ್ದೀಪನಾ ಮದ್ದು ಸೇವನೆ ಆರೋಪ: ಯೂಸುಫ್ ಪಠಾಣ್‌ಗೆ 5 ತಿಂಗಳ ನಿಷೇಧ:
http://bit.ly/2Flv3jS
►►ಅಕ್ರಮ ಬಗರ್ ಹುಕುಂ ಜಮೀನು ಮಂಜೂರು ಆರೋಪ: ಆರ್. ಅಶೋಕ್ ವಿರುದ್ಧ ಕೇಸ್: http://bit.ly/2AJvDUR
►►ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್: http://bit.ly/2EoFn9d
►►ಮತ್ತೊಂದು ಬೈಕ್‌ಗೆ ಬೆಂಕಿ: ಗಂಗೊಳ್ಳಿ ಉದ್ವಿಗ್ನಗೊಳಿಸಲು ಮತ್ತೆ ಕಿಡಿಗೇಡಿಗಳ ಯತ್ನ: http://bit.ly/2CU9YPD
►►ನದಿಗೆ ದೋಣಿಗಳ ಸೇತುವೆ: ಹಿಂದೂ-ಮುಸ್ಲಿಮ್ ಸೌಹಾರ್ದ ಬೆಸೆದ ನಡುಪಳ್ಳಿ ಉರೂಸ್: http://bit.ly/2CRX2JA
►►ಹಲ್ಲೆ ಯತ್ನ: ಹಿಂಜಾವೇ ನಾಯಕನ ದೂರಿನ ಕುರಿತು ಪೊಲೀಸರಿಗೆ ಸಂಶಯ: http://bit.ly/2CHiMV9
►►ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ. ತೀರ್ಪು ಮರುಪರಿಲನೆಗೆ ಕೇಂದ್ರ ಮನವಿ: http://bit.ly/2AFVNrM
►►ದೇಶಕ್ಕೆ ಆರೆಸ್ಸೆಸ್ ಅನಿವಾರ್ಯ ಎಂದು ಮುಖ್ಯಮಂತ್ರಿಗೂ ಗೊತ್ತು: ಭಾರತಿ ಶೆಟ್ಟಿ: http://bit.ly/2m9ciXV

Related Tags: Dhanya Suicide, Moodigere, Chikmagalur, BJP Yuva Morcha Moodigere, Anil Varun, Love Jehad, Social Media
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ