ಉದ್ದೀಪನಾ ಮದ್ದು ಸೇವನೆ ಆರೋಪ: ಯೂಸುಫ್ ಪಠಾಣ್‌ಗೆ 5 ತಿಂಗಳ ನಿಷೇಧ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಆಲ್‌ರೌಂಡರ್ ಯೂಸೂಫ್ ಪಠಾಣ್ ಅವರನ್ನು ಬಿಸಿಸಿಐ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 5 ತಿಂಗಳ ಕಾಲ ಅಮಾನತುಗೊಳಿಸಿದೆ.

ಮಾರ್ಚ್ 16 ರಂದು ನವದೆಹಲಿ ನಡೆದ ದೇಶಿಯ ಕ್ರಿಕೆಟ್ ಟೂರ್ನಿ ವೇಳೆ ಬಿಸಿಸಿಐ ಉದ್ದೀಪನಾ ಮದ್ದು ಪರೀಕ್ಷೆ ವೇಳೆ ಪಠಾಣ್ ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪಡೆಯಲಾಗಿತ್ತು. ಅವರ ಮಾದರಿಯಲ್ಲಿ ನಿಷೇಧಿತ ಟೆರ್ಬುಟಲೈನ್ ಎಂಬ ಅಂಶ ಪತ್ತೆಯಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ನಿಷೇಧಿತ ವಸ್ತುಗಳಲ್ಲಿ ಟೆರ್ಬುಟಲೈನ್ ಔಷಧಿಯು ಸೇರಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಹೀಗಾಗಿ ಐದು ತಿಂಗಳುಗಳ ಕಾಲ ಅಂತರರಾಷ್ಟ್ರೀಯ, ದೇಶಿಯ ಪಂದ್ಯಗಳನ್ನು ಆಡುವಂತಿಲ್ಲ. ಅದೇ ವೇಳೆ ಬರೋಡಾ ತಂಡದಲ್ಲಿಯೂ ಪಠಾಣ್ ಆಡುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.

ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಯೂಸೂಫ್, ತನಗೆ ನೀಡಬೇಕಾದ ಔಷಧಿಯ ಬದಲು ಅಜಾಗರೂಕತೆಯಿಂದ ಬೇರೆ ಔಷಧಿಯನ್ನು ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಈ ಔಷಧಿಯನ್ನು ಸೇವಿಸಿಲ್ಲ ಎಂದು ತಿಳಿಸಿದ್ದಾರೆ.
ಬಿಸಿಸಿಐ ಕಳೆದ ಆಗಸ್ಟ್ 15ರಂದು ಯೂಸುಫ್ ಮೇಲೆ ನಿಷೇಧ ಹೇರಿದ್ದು, ಇದೀಗ 5 ತಿಂಗಳ ನಿಷೇಧ ಖಾಯಂ ಮಾಡಿರುವುದರಿಂದ ಇದೇ ಜನವರಿ 14 ರಂದು ಅವರ ಅಮಾನತು ಶಿಕ್ಷೆ ಪೂರ್ಣವಾಗಲಿದೆ. ಹೀಗಾಗಿ ಯೂಸುಫ್ ಮುಂಬರುವ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಇಂದು ಹೆಚ್ಚು ಓದಿದ ಸುದ್ದಿ
►►ಅಕ್ರಮ ಬಗರ್ ಹುಕುಂ ಜಮೀನು ಮಂಜೂರು ಆರೋಪ: ಆರ್. ಅಶೋಕ್ ವಿರುದ್ಧ ಕೇಸ್:
http://bit.ly/2AJvDUR
►►ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್: http://bit.ly/2EoFn9d
►►ಮತ್ತೊಂದು ಬೈಕ್‌ಗೆ ಬೆಂಕಿ: ಗಂಗೊಳ್ಳಿ ಉದ್ವಿಗ್ನಗೊಳಿಸಲು ಮತ್ತೆ ಕಿಡಿಗೇಡಿಗಳ ಯತ್ನ: http://bit.ly/2CU9YPD
►►ನದಿಗೆ ದೋಣಿಗಳ ಸೇತುವೆ: ಹಿಂದೂ-ಮುಸ್ಲಿಮ್ ಸೌಹಾರ್ದ ಬೆಸೆದ ನಡುಪಳ್ಳಿ ಉರೂಸ್: http://bit.ly/2CRX2JA
►►ಹಲ್ಲೆ ಯತ್ನ: ಹಿಂಜಾವೇ ನಾಯಕನ ದೂರಿನ ಕುರಿತು ಪೊಲೀಸರಿಗೆ ಸಂಶಯ: http://bit.ly/2CHiMV9
►►ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ. ತೀರ್ಪು ಮರುಪರಿಲನೆಗೆ ಕೇಂದ್ರ ಮನವಿ: http://bit.ly/2AFVNrM
►►ದೇಶಕ್ಕೆ ಆರೆಸ್ಸೆಸ್ ಅನಿವಾರ್ಯ ಎಂದು ಮುಖ್ಯಮಂತ್ರಿಗೂ ಗೊತ್ತು: ಭಾರತಿ ಶೆಟ್ಟಿ: http://bit.ly/2m9ciXV

Related Tags: Yusuf Pathan, Suspended By Indian Cricket Board, BCCI, Doping Violation, Sports News, Cricket News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ