ಜೆಟ್ ಏರ್‌ವೇಸ್ ಗಲ್ಫ್‌ನಲ್ಲಿ ದಶಕದ ಸೇವೆ: 15ಶೇಕಡಾ ದರ ಕಡಿತ

ಕರಾವಳಿ ಕರ್ನಾಟಕ ವರದಿ

ಕುವೈಟ್:
ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಜೆಟ್ ಏರ್‌ವೇಸ್, ಗಲ್ಫ್‌ನಲ್ಲಿ ಒಂದು ದಶಕದ ಸೇವೆಯನ್ನು ಪೂರ್ತಿಗೊಳಿಸಿದ ರೋಮಾಂಚಕ ಸಂದರ್ಭವನ್ನು ಗಲ್ಫ್‌ನಿಂದ ಭಾರತದ ನಗರಗಳು, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ದೂರ ಪ್ರಾಚ್ಯ ಪ್ರಯಾಣಿಕರಿಗೆ ತನ್ನ ನೇರ ಯಾನ ಸೇವೆಗಳಲ್ಲಿ ವಿಶೇಷ ದರ ಕಡಿತ ಕೊಡುಗೆಯೊಂದಿಗೆ ಆಚರಿಸುತ್ತಿದೆ.

ಜೆಟ್ ಏರ್‌ವೇಸ್ ಪ್ರಯಾಣಿಕರು ಜೆಟ್ ಏರ್‌ವೇಸ್ ಸಂಸ್ಥೆಯ ವೆಬ್‌ಸೈಟ್ www.jetairways.com ಮೂಲಕ  ಜನವರಿ 05, 2018ರ 1400ಗಂಟೆಯಿಂದ 2359ಗಂಟೆ ತನಕ ತಮ್ಮ ಪ್ರೀಮಿಯರ್ ಮತ್ತು ಎಕಾನಮಿ ದರ್ಜೆಯ ಟಿಕೇಟ್‌ಗಳನ್ನು ಬುಕ್ ಮಾಡಿದಾಗ 15ಶೇಕಡಾ ವಿಶೇಷ ದರ ಕಡಿತ ಕೊಡುಗೆಯನ್ನು ನೀಡಲಾಗುತ್ತದೆ.

ಈ ಪ್ರಮೋಶನ್ ಸೇಲ್ ಅಂಗವಾಗಿ ಬುಕ್ ಮಾಡಲಾಗುವ ಟಿಕೇಟ್‌ಗಳನ್ನು ಜನವರಿ 06ರಿಂದ ಜೂನ್ 06, 2018ರ ತನಕ ಬಳಸಬಹುದಾಗಿದೆ.

ಈ ಸಂಭ್ರಮಾಚರಣೆಯ ಅಂಗವಾಗಿ www.jetairways.com ಮೂಲಕ ಮಾತ್ರ ಬುಕಿಂಗ್ ಮಾಡುವ ಈ ವಿಶೇಷ ಕೊಡುಗೆಯ ಅವಧಿಯಲ್ಲಿ 10 ಅದೃಷ್ಟಶಾಲಿ ವಿಜೇತರು ಉಚಿತವಾಗಿ ರಿಟರ್ನ್ ಟಿಕೇಟ್ ಗೆಲ್ಲುವ ಒಂದು ಅವಕಾಶವೂ ಇದೆ.

ಒನ್‍ವೇ ಮತ್ತು ರಿಟರ್ನ್ ಜರ್ನಿಗಳಲ್ಲಿ ಜೆಟ್ ಏರ್ವೇಸ್ ನಿರ್ವಹಿಸುವ ವಿಮಾನ ಯಾನಗಳಿಗೆ ಮಾತ್ರ ಈ ವಿಶೇಷ ದರ ಕೊಡುಗೆ ಲಭ್ಯವಿದ್ದು, ಜೆಟ್ ಏರ್‌ವೇಸ್ ಪ್ರಯಾಣಿಕರು www.jetairways.com ಮೂಲಕ ಅಥವಾ ಜೆಟ್ ಏರ್‌ವೇಸ್ ಮೊಬೈಲ್ ಆಪ್ ಬಳಸಿ ಟಿಕೇಟ್ ಬುಕ್ ಮಾಡಬಹುದಾಗಿದೆ.

“ಗಲ್ಫ್‌ನಲ್ಲಿ ಒಂದು ದಶಕದ ಸೇವೆಯನ್ನು ಸಲ್ಲಿಸಿರುವುದು ನಮ್ಮ ಸೇವೆಯ ಮಹತ್ವದ ಮೈಲಿಗಲ್ಲಾಗಿದ್ದು, ಇದು ನಮಗೆ ಅತೀವ ಸಂತಸ ನೀಡಿದ್ದು, ಈ ಸಂತಸವನ್ನು ನಮ್ಮ ಪ್ರಯಾಣದ ಭಾಗವಾಗಿದ್ದ ನಮ್ಮ ಅತಿಥಿಗಳೊಡನೆ ನಾವು ಹಂಚಿಕೊಳ್ಳಲು ಬಯಸುತ್ತೇವೆ.

ಈ ವಿಶೇಷ ಕೊಡುಗೆಯ ಮಾರಾಟವು ಅವರ ಜೀವನದ ಭಾಗವಾಗಿ ನಮ್ಮನ್ನು ಪರಿಗಣಿಸಿದ್ದಕ್ಕೆ ಧನ್ಯವಾದ ಅರ್ಪಿಸಲು ನಮ್ಮ ಮಾರ್ಗವಾಗಿದೆ” ಎಂದು ಎಂದು ಜೆಟ್ ಏರ್‌ವೇಸ್ ಗಲ್ಫ್, ಮಿಡ್ಲ್ ಈಸ್ಟ್ ಮತ್ತು ಆಫ್ರಿಕಾ ಉಪಾಧ್ಯಕ್ಷ ಶಾಕಿರ್ ಕಾಂತಾವಾಲಾ ಅವರು ಹೇಳಿದ್ದಾರೆ.

ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಾದ ಜೆಟ್ ಏರ್‌ವೇಸ್, ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ತನ್ನ ಸಾಟಿಯಿಲ್ಲದ ಯಾನ ಸೇವೆಗಳು, ಪ್ರಯಾಣಿಕರ ಅನುಕೂಲಕ್ಕೆ ತಕ್ಕ ವಿಸ್ತೃತ ಸಂಪರ್ಕಗಳ ಸೇವೆಗಳ ಮೂಲಕ ಜನ ಬಯಸುವ ವಿಮಾನ ಯಾನ ಸಂಸ್ಥೆಯಾಗಿ ಹೆಸರುಗಳಿಸಿರುವುದು ಗಮನಾರ್ಹ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಂಗ್ರೆಸ್ ಪಿಎಫ್ಐಗೆ ಬೆಂಬಲ ನೀಡಿಲ್ಲ. ಪಿಎಫ್ಐ ಜೊತೆ ಬಿಜೆಪಿಗೆ ನಿಕಟ ಸಂಪರ್ಕ
http://bit.ly/2lUABtd
►►ನನ್ನ ಮಗ ವಿದೇಶಕ್ಕೆ ಹೋಗಿದ್ದರೆ ಬದುಕಿರುತ್ತಿದ್ದ. ದೀಪಕ್ ತಾಯಿಯ ಆಕ್ರಂದನ http://bit.ly/2lSvQzG
►►ದೀಪಕ್ ಕೊಲೆ: ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ: http://bit.ly/2lTWOXF
►►ಕಾಟಿಪಳ್ಳ ಹಿಂದೂ ರುದ್ರಭೂಮಿಯಲ್ಲಿ ದೀಪಕ್ ಅಂತ್ಯಕ್ರಿಯೆ: http://bit.ly/2qj0sA0
►►ದೀಪಕ್ ರಾವ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ: ಅಂತ್ಯ ಸಂಸ್ಕಾರಕ್ಕೆ ಮನವೊಲಿಸಿದ ಡಿಸಿ: http://bit.ly/2lTvw4J
►►ಕೊಲೆ ಆರೋಪಿಗಳನ್ನು ಬೆಂಬತ್ತಿದ ಸಾಹಸಿ ಕಾರು ಚಾಲಕ: http://bit.ly/2CmanX1
►►ಇನ್ನೊಂದು ಅಗ್ನಿ ದುರಂತ: ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತ್ಯು: http://bit.ly/2lUxrVw
►►ಗುಪ್ತವಾಗಿ ದೀಪಕ್ ರಾವ್ ಶವ ಮನೆಗೆ ರವಾನೆ. ಸ್ಥಳೀಯರ ಆಕ್ರೋಶ: http://bit.ly/2CCCfJQ
►►ಮಂಗಳೂರು: ಬಿಜೆಪಿಗನ ಕೊಲೆ ಬೆನ್ನಲ್ಲೇ ಇಬ್ಬರಿಗೆ ತಲವಾರ್ ಹಲ್ಲೆ: http://bit.ly/2E7fIm3
►►ಕಾಟಿಪಳ್ಳ ಬಜರಂಗದಳ ಕಾರ್ಯಕರ್ತನ ಕೊಲೆ: ನಾಲ್ವರ ಸೆರೆ  http://bit.ly/2ERME2k

Related Tags: JET AIRWAYS, 10th ANNIVERSARY OF GULF OPERATIONS, 10 Hour Sale, Shakir Kantawala, Vice President - Gulf, Middle East & Africa, Jet Airways, JET AIRWAYS: 10 Years, 10 Hour sale, Karnataka News, Coastal Karnataka News, Karavali News, Karavali Karnataka, Latest News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ