ಕ್ರಾಂತಿ ನಡೆಯುವುದು ಅಸೆಂಬ್ಲಿಯಲ್ಲಲ್ಲ, ಬದಲಿಗೆ ರಸ್ತೆಗಳಲ್ಲಿ: 'ಸೌಹಾರ್ದ ಮಂಟಪದಲ್ಲಿ' ಜಿಗ್ನೇಶ್ ಮೇವಾನಿ

ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಗುಜರಾತ್ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿರುವುದು ಯುವಕರು ಸೇರಿದಂತೆ ಅನೇಕರಿಗೆ ಸ್ಪೂರ್ತಿಯಾಗಿದೆ. ನಾನು ಕೇವಲ ಶೇಕಡಾ 2 ರಷ್ಟು ರಾಜಕಾರಣಿಯಾದರೆ, ಇನ್ನು ಶೇಕಡಾ 98 ರಷ್ಟು ಚಳವಳಿಕಾರ. ಜನಪರ ಆಲೋಚನೆಗಳನ್ನು ಹೊಂದಿರುವವರು ಅಧಿಕಾರಕ್ಕೆ ಬರಬೇಕು. ಆದರೆ ಒಂದು ನೆನಪಿಟ್ಟುಕೊಳ್ಳಿ. ಕ್ರಾಂತಿ ನಡೆಯುವುದು ಅಸೆಂಬ್ಲಿಯಲ್ಲಲ್ಲ, ಬದಲಿಗೆ ರಸ್ತೆಗಳಲ್ಲಿ. ರೈತರು, ಕಾರ್ಮಿಕರು, ಯುವಕರು ಬೀದಿಗೆ ಬಂದು ಹೋರಾಡಿದರೆ ಕ್ರಾಂತಿಯಾಗುತ್ತದೆ ಎಂದು ಊನಾ ಚಳವಳಿ ನಾಯಕ, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ನುಡಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ ಹದಿನೈದು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ’ಸೌಹಾರ್ದ ಮಂಟಪ’ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದು ಗೌರಿ ಲಂಕೇಶರ ಕರ್ನಾಟಕ
ಬಿಜೆಪಿ ನಾಯಕರು ಕರ್ನಾಟಕವನ್ನು ಗುಜರಾತ್ ಮಾಡುತ್ತೇವೆ ಎನ್ನುತ್ತಾರೆ. ಅದು ಆಗಬಾರದು. ಬದಲಿಗೆ ಕರ್ನಾಟಕದಲ್ಲಿನ ಬಾಬಾಬುಡನ್ ಮತ್ತು ದತ್ತಾತ್ರೆಯರ ಸೌಹಾರ್ದತೆಯನ್ನು ಗುಜರಾತ್‌ನಲ್ಲಿ ನೆಲೆಗೊಳ್ಳುವಂತೆ ಮಾಡಬೇಕು.

ಕರ್ನಾಟಕ ಗುಜರಾತ್ ಆಗುವುದಿಲ್ಲ, ಕರ್ನಾಟಕ ಕರ್ನಾಟಕವಾಗಿಯೇ ಉಳಿದುಕೊಳ್ಳುತ್ತದೆ. ಈ ಕರ್ನಾಟಕ ಯಾವುದೋ ಉಮಾಭಾರತಿಯದಲ್ಲ ಇದು ಗೌರಿ ಲಂಕೇಶರ ಕರ್ನಾಟಕ ಎಂದು ಜಿಗ್ನೇಶ್ ಮೇವಾನಿ ಗುಡುಗಿದರು.

ಗೌರಿ ಲಂಕೇಶ್ ಆಶಯಗಳನ್ನು ನಾವು ಈಡೇರಿಸಬೇಕು
ನನ್ನ ತಾಯಿ ಗೌರಿ ಲಂಕೇಶ್ ಸಾವಿನ ನ್ಯಾಯಕ್ಕೆ ಮತ್ತು ಬಿಜಾಪುರದಲ್ಲಿ ನನ್ನ ತಂಗಿಯ ಮೇಲಾದ ಅತ್ಯಾಚಾರ, ಕೊಲೆಗೆ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು. ಫ್ಯಾಸಿಸಂ ಸೋಲಬೇಕು ಎಂದರೆ ಕಾಂಗ್ರೆಸ್‌ನ ಮೌನವನ್ನು ಸಹಿಸುತ್ತೇವೆ ಎಂದಲ್ಲ. ಬದಲಿಗೆ ಅದರ ವಿರುದ್ದವೂ ದನಿ ಎತ್ತುತ್ತೇವೆ. ಗೌರಿ ಲಂಕೇಶ್ ಸಾಯದೇ ಇರುವ ಹಾಗೆ ಮುಂದಕ್ಕೂ ಜೀವಂತವಿರುವ ಹಾಗೆ ಅವರ ಆಶಯಗಳನ್ನು ನಾವು ಈಡೇರಿಸಬೇಕು. ಇದು ನಮ್ಮೆಲ್ಲರ ಏಕಮಾತ್ರ ಗುರಿ ಮತ್ತು ಧ್ಯೇಯವಾಗಬೇಕು ಎಂದರು.


ಕರ್ನಾಟಕದಲ್ಲಿ ನೋ ಜಾಬ್ ನೋ ವೋಟ್ ಆಂದೋಲನ ನಡೆಯುತ್ತಿದೆ. ಇದನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಬೇಕು. 2019ರ ಲೋಕಸಭಾ ಚುನಾವಣೆಗೆ ನಾವು ಫ್ಯಾಸಿಸಂ ಅನ್ನು ಸೋಲಿಸಲೇಬೇಕು. ಪ್ರಧಾನಿ ಮೋದಿಯವರಿಗೆ ವಯಸ್ಸಾಗಿದೆ. ಹಾಗಾಗಿ ಏನೇನೋ ಮಾತನಾಡುತ್ತಾರೆ. ಅವರ ಮಾತುಗಳನ್ನು ಕೇಳುವುದು ಬೇಡ. ಬದಲಿಗೆ ನಾವು ಶೆಹ್ಲಾ ರಶಿದ್, ಕನ್ಹಯ್ಯಾರ ಮಾತುಗಳನ್ನು ಕೇಳೋಣ. ಕೆಲವು ಭಿನ್ನಾಭಿಪ್ರಾಯವಿದ್ದರೂ ಅಲ್ಪೇಶ್ ಠಾಕೂರ್ ಮತ್ತು ಹಾರ್ದಿಕ್ ಪಟೇಲ್‌ರ ಮಾತುಗಳನ್ನು ಕೇಳೋಣ ಎಂದರು.

ಈಗಲೂ ನಮ್ಮ ಜನರಿಗೆ ನಾನು ಹೇಳುತ್ತೇನೆ. ಬೀದಿಯಲ್ಲಿ ನೀವು ಹೋರಾಡಿದರೆ ನಾನು ನಿಮ್ಮೊಂದಿಗಿರುತ್ತೇನೆ. ನಾನು ಗೆದ್ದ ಮಾರನೇ ದಿನ ಕಲೆಕ್ಟರ್ ಆಫೀಸ್ ಎದುರು ನಮ್ಮ ಕ್ಷೇತ್ರದ ರಸ್ತೆ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿದೆ. ಮುಂದಕ್ಕೂ ಕೂಡ ಹೋರಾಟದ ಕಣದಲ್ಲಿರುತ್ತೇನೆ ಎಂದು ಜಿಗ್ನೇಶ್ ನುಡಿದರು.

ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿಲ್ಲ. ಯೋಗಿ ಬಂದು ನನ್ನ ಕ್ಷೇತ್ರದಲ್ಲಿ ಸಮಾವೇಶಗಳನ್ನು ಮಾಡಿದರು. ಎರಡು ರಾಜ್ಯದ ಮುಖ್ಯಮಂತ್ರಿಗಳು ಒಬ್ಬ ಸ್ವತಂತ್ರ ಅಭ್ಯರ್ಥಿಯ ವಿರುದ್ದ ಸಭೆಗಳನ್ನು ನಡೆಸಿದರು. ಅಂದರೆ ಅವರಿಗೆ ಎಷ್ಟು ಭಯವಿದೆ ಎಂದು ಯೋಚಿಸಬೇಕು ಎಂದರು.

ವಡ್‌ಗಾಮ್‌ನಲ್ಲಿ ಆದಂತೆ ಎಲ್ಲಾ ಶೋಷಿತರು ಬಿಜೆಪಿಯ ವಿರುದ್ದ ಹೇಗೆ 80% ಮತದಾನ ಮಾಡಿದರು. ಅದೇ ರೀತಿ ಕರ್ನಾಟಕದಲ್ಲಿ 95% ಜನ ಆರ್‌ಎಸ್‍ಎಸ್ ವಿರುದ್ದ ಮತ ಚಲಾಯಿಸಬೇಕು. ಕರ್ನಾಟಕದಲ್ಲಿಯೂ ಇದು ಮರಕಳಿಸಬೇಕು. ಜನರ ಮಧ್ಯೆ ತಳಮಟ್ಟದಲ್ಲಿ ಕೆಲಸ ಮಾಡಿದವರನ್ನು ವಿಧಾನಸಭೆಗೆ ಕಳಿಸಬೇಕು. ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಕೂಡ ನಮ್ಮ ಮೂಲ ವೈರುದ್ಯ ಇರುವುದು ಆರ‌‍ಎಸ್ಎಸ್ ಮತ್ತು ಬಿಜೆಪಿ ನಡುವೆ. ಕಾಂಗ್ರೆಸ್‌ಗೂ ಕೂಡ ಹೇಳಬೇಕು. ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಬೇಡಿ ಎಂದು ಯುವ ನಾಯಕ ಜಿಗ್ನೇಶ್ ಹೇಳಿದರು.

ನಮಗೆ ದೊಡ್ಡ ಶತ್ರು ಫ್ಯಾಸಿಸಂ
ಮೋದಿಯವರು ಈ ದೇಶಧ ಪ್ರಧಾನ ಮಂತ್ರಿ ಆದ ನಂತರ ಅವರ ಆಡಳಿತವನ್ನು ನೋಡಿದ್ದೇವೆ. ಒಂದು ವಿಚಾರ ಸ್ಫಷ್ಟವಾಗಬೇಕು. ಫ್ಯಾಸಿಸಂಗಿಂತ ದೊಡ್ಡ ಶತ್ರು ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಆ ಕಾಲದಿಂದ ಇಲ್ಲಿಯವರೆಗೆ ನಮ್ಮನ್ನು ಶೋಷಣೆ ಮಾಡಿದ್ದಾರೆ.

ಆದರೆ ನಮ್ಮ ದೊಡ್ಡ ಶತ್ರು ಫ್ಯಾಸಿಸಂ. ಕರ್ನಾಟಕದಲ್ಲಿ, ಮಧ್ಯಪ್ರಧೇಶದಲ್ಲಿ, ರಾಜಸ್ಥಾನದಲ್ಲಿ ಪ್ರಚಾರ ಮಾಡುತ್ತೇನೆ. ನನ್ನ ಪ್ರಚಾರದಿಂದ ಯಾರಿಗೆ ನ್ಯಾಯ ಸಿಗುತ್ತದೆ ಎಂಬುದು ಮುಖ್ಯವಲ್ಲ. ಬದಲಿಗೆ ಬಿಜೆಪಿ ಮತ್ತು ಆರ್‌ಎಸ್ಎಸ್ ಸೋಲಬೇಕು ಎಂದರು.

ಕೋಮುವಾದಿಗಳಿಗೆ ತಿರುಗೇಟು ನೀಡೋಣ
ನಾಳೆಯಿಂದ ಕರ್ನಾಟಕಕ್ಕೆ ಕೋಮುವಾದಿ ರಾಜಕಾರಣದ ಪ್ರಚಾರಕ್ಕೆ ಹಲವು ನಾಯಕರು ಬರುತ್ತಿದ್ದಾರೆ. ಅವರು ಕೋಮು ವಾಂತಿ ಮಾಡುತ್ತಾರೆ. ಆದರೆ ಕರ್ನಾಟಕದ ನಾಗರಿಕ ಸಮಾಜ ಎಚ್ಚೆತ್ತಿದೆ. ಹೀಗಾಗಿ ನನಗೆ ನಂಬಿಕೆ ಇದೆ. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸುದೀರ್ಘ ಪರಂಪರೆಯನ್ನು ಇನ್ನು ಬಲಗೊಳ್ಳುವಂತೆ ಮಾಡಬೇಕು. ನಾವು ಅವರಿಗೆ ತಿರುಗೇಟು ನೀಡೋಣ ಎಂದರು.

ಇದನ್ನೂ ಓದಿ:
►►ಗುಜರಾತ್‌ನಲ್ಲಿ ಭೀತಿಯ ವಾತಾವರಣ ಮರೆಯಾಗುತ್ತಿದೆ: ಸೌಹಾರ್ದ ಮಂಟಪದಲ್ಲಿ ತೀಸ್ತಾ:
http://bit.ly/2E7fIm3
►►ಕಕೋಸೌವೇಗೆ ಹದಿನೈದು ವರ್ಷ. ದೃಢಚಿತ್ತದ ಜೀವಪ್ರೀತಿಯ ಸೌಹಾರ್ದದ ಪಯಣ!: http://bit.ly/2l7gA2a
►►ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆ ಕಟ್ಟುತ್ತಿದೆ 'ಸೌಹಾರ್ದ ಮಂಟಪ': http://bit.ly/2C8s6UZ

ಇಂದು ಹೆಚ್ಚು ಓದಿದ ಸುದ್ದಿಗಳು
►►ಜಾಧವ್‌ ತಾಯಿ, ಪತ್ನಿಗೆ ಅವಮಾನ: ಪಾಕ್‌ ಧ್ವಜ ಸುಟ್ಟು ಆಕ್ರೋಶ:
http://bit.ly/2pWtrsY
►►ಸಂಸದೆ ಶೋಭಾ ಕರಂದ್ಲಾಜೆಗೆ ನಾಲಿಗೆ ಮೇಲೆ ಹಿಡಿತವಿಲ್ಲ: ಎಚ್.ಆಂಜನೇಯ: http://bit.ly/2pPFAzU
►►ಸಚಿವ ರೈ ಮಾತನ್ನು ನೆನೆದು ಗದ್ಗದಿತರಾಗಿ ಕಣ್ಣೀರಿಟ್ಟ ಪೂಜಾರಿ: http://bit.ly/2liDNP4
►►ರಾಷ್ಟ್ರಕವಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: http://bit.ly/2Dtli14
►►ಭೀಕರ ಅಗ್ನಿ ದುರಂತ: 14 ಮಂದಿ ಮೃತ, ಹಲವರು ಗಂಭೀರ: http://bit.ly/2pOMXrr
►►'ಅಂಜನಿಪುತ್ರ' ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ: http://bit.ly/2ChUAeO
►►ಕುಖ್ಯಾತ ರೌಡಿಶೀಟರ್ ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ: http://bit.ly/2lmXBzZ
►►ರಾಮಮಂದಿರ ಕಟ್ಟುವ ಮೊದಲು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ: http://bit.ly/2ChPf54
►►ಗುಜರಾತ್‌ನಲ್ಲಿ ಭೀತಿಯ ವಾತಾವರಣ ಮರೆಯಾಗುತ್ತಿದೆ: ಸೌಹಾರ್ದ ಮಂಟಪದಲ್ಲಿ ತೀಸ್ತಾ: http://bit.ly/2Dq3nsc

Related Tags: Souharda Mantapa, Karnataka Komu Souharda Vedike, Chikkamagalur, Jignesh Mevani, Teesta Setalwad
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ