ಸಂಸದೆ ಶೋಭಾ ಕರಂದ್ಲಾಜೆಗೆ ನಾಲಿಗೆ ಮೇಲೆ ಹಿಡಿತವಿಲ್ಲ: ಎಚ್.ಆಂಜನೇಯ

ಕರಾವಳಿ ಕರ್ನಾಟಕ ವರದಿ

ವಿಜಯಪುರ:
ಬಿಜೆಪಿ ನಾಯಕರ ಸಂಸ್ಕಾರ ಅವರ ಮಾತಿನ ಮೂಲಕ ಹೊರಬರುತ್ತಿದೆ. ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಶೋಭಾಗೆ ನಾಲಿಗೆ ಮೇಲೆ ಹಿಡಿತವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದರು.

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಬಾಲಕಿಯ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಚಿವ ಎಚ್.ಆಂಜನೇಯ ಮಾತನಾಡಿ, ಶೋಭಾ ಕೆಲಸ ಬರೀ ಸಂಘರ್ಷಕ್ಕೆ ಎಡೆಮಾಡಿ ಕೊಡುವಂತದ್ದು. ಅವರು ಹಿಂಸೆಗೆ ಪ್ರಚೋದನೆ ನೀಡುವಂತಹಾ ಹೇಳಿಕೆ ನೀಡುತ್ತಾರೆ. ಶೋಭಾಗೆ ನಾಲಿಗೆ ಇದೀಯೋ ಇಲ್ಲವೋ ಅನ್ನೋದು ನಮಗೆ ಗೊತ್ತಿಲ್ಲ.

ಸಂಸದೆ ಶೋಭಾ ಮಾತನಾಡುವ ಭಾಷೆ ಸರಿಯಿಲ್ಲ ಅವರು ತಿದ್ದಿಕೊಳ್ಳಬೇಕು. ನಾಲಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಅವರು ಸಂಸದೆ ಶೋಭಾ ಕರಾಂದ್ಲಾಜೆ ವಿರುದ್ದ ಹರಿಹಾಯ್ದರು.

ವಿಜಯಪುರ ಘಟನೆ ಅಮಾನವೀಯವಾದುದು. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಜನತೆ ಮೃತ ಬಾಲಕಿ ಕುರಿತಾಗಿ ತೋರಿದ ಪ್ರೀತಿಗೆ ಧನ್ಯವಾದ ಅರ್ಪಿಸಿದ ಅವರು ಇಂಥ ಘಟನೆ ತಡೆಯಲು ಕಠಿಣ ಕಾನೂನು ಮಾಡಲು ತಜ್ಞರ ಜೊತೆಗೆ ಚರ್ಚಿಸುವೆ ಮತ್ತು ಮೃತ ಬಾಲಕಿ ತಾಯಿಗೆ ಜಿಲ್ಲಾಡಳಿತದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ‌ ನೀಡುವ ಭರವಸೆ ನೀಡಿದರು.

ಮಹದಾಯಿ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆಂಜನೇಯ, ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಮಹದಾಯಿ ವಿವಾದ ಇತ್ಯರ್ಥಗೊಳಿಸಬೇಕು ಮೂರು ರಾಜ್ಯದ ಸಿಎಂಗಳನ್ನು ಕರೆದು ಮಹದಾಯಿ ನೀರಿನ ವಿಚಾರ ಬಗೆಹರಿಸಬೇಕು.

ಗೋವಾ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ಟರೆ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಇದೆ ಎಂದು ಮಲತಾಯಿ ಧೋರಣೆ ಮಾಡಬಾರದು ಎಂದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಸಚಿವ ರೈ ಮಾತನ್ನು ನೆನೆದು ಗದ್ಗದಿತರಾಗಿ ಕಣ್ಣೀರಿಟ್ಟ ಪೂಜಾರಿ:
http://bit.ly/2liDNP4
►►ರಾಷ್ಟ್ರಕವಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ: http://bit.ly/2Dtli14
►►ಭೀಕರ ಅಗ್ನಿ ದುರಂತ: 14 ಮಂದಿ ಮೃತ, ಹಲವರು ಗಂಭೀರ: http://bit.ly/2pOMXrr
►►'ಅಂಜನಿಪುತ್ರ' ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ: http://bit.ly/2ChUAeO
►►ಕುಖ್ಯಾತ ರೌಡಿಶೀಟರ್ ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ: http://bit.ly/2lmXBzZ
►►ರಾಮಮಂದಿರ ಕಟ್ಟುವ ಮೊದಲು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ: http://bit.ly/2ChPf54
►►ಗುಜರಾತ್‌ನಲ್ಲಿ ಭೀತಿಯ ವಾತಾವರಣ ಮರೆಯಾಗುತ್ತಿದೆ: ಸೌಹಾರ್ದ ಮಂಟಪದಲ್ಲಿ ತೀಸ್ತಾ: http://bit.ly/2Dq3nsc

Related Tags: H. Anjaneya, Vijayapur, Shobha Karandlaje, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ