ರಾಷ್ಟ್ರಕವಿ ಕುವೆಂಪುಗೆ ಗೂಗಲ್ ಡೂಡಲ್ ಗೌರವ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಇಂದು ರಾಷ್ಟ್ರಕವಿ ಕುವೆಂಪು ಅವರ 113ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಗೌರವ ಸಲ್ಲಿಸಿದ್ದು, ಗೂಗಲ್ ಡೂಡಲ್​ನಲ್ಲಿ ಕುವೆಂಪು ಅವರ ಚಿತ್ರವನ್ನು ಪ್ರಕಟಿಸಿದೆ.

‘ಜಗದ ಕವಿ’ಯನ್ನು ನೆನೆದ ಗೂಗಲ್ ಡೂಡಲ್, ಗೂಗಲ್ ಪೇಜ್‌ನಲ್ಲಿ ಕವಿಶೈಲನಿಗೆ ನಮನ ಸಲ್ಲಿಸಿದ್ದು, ಕವಿ ಶೈಲದ ಬಂಡೆ ಮೇಲೆ ಕೂತು ಕುವೆಂಪು ಬರೆಯುತ್ತಿರುವ ಚಿತ್ರವನ್ನ ಡೂಡಲ್​ನಲ್ಲಿ ಹಾಕಲಾಗಿದೆ. ಜೊತೆಗೆ ಕನ್ನಡದಲ್ಲಿ ಗೂಗಲ್ ಎಂದು ಬರೆಯಲಾಗಿದೆ.

ಕೊಲ್ಕತ್ತದ ಕಲಾವಿದ ಉಪಮಾನ್ಯು ಭಟ್ಟಾಚಾರ್ಯ ಅವರು ರಾಷ್ಟ್ರಕವಿ ಕುವೆಂಪು ಅವರ ಗೂಗಲ್ ಡೂಡಲ್ ಅನ್ನು ರಚಿಸಿದ್ದಾರೆ. ಸ್ವಾತಿ ಶೇಲಾರ್ ಅವರು ಗೂಗಲ್ ಎಂದು ಕನ್ನಡದಲ್ಲಿ ಬರೆಯುವ ಮೂಲಕ ಸಹಕರಿಸಿದ್ದಾರೆ. ಗೂಗಲ್ ಉಪಮಾನ್ಯು ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಡೂಡಲ್ ರಚಿಸುವಂತೆ ಮನವಿ ಮಾಡಿತ್ತು.

'ಜಯ ಭಾರತ ಜನನಿಯ ತನುಜಾತೆ', 'ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು', 'ಓ ನನ್ನ ಚೇತನ ಆಗುವ ನೀ ಅನಿಕೇತನ' ಹೀಗೆ ರಾಷ್ಟ್ರಕವಿ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ.

ಅಲ್ಲದೇ ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆ ಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ , ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಭೀಕರ ಅಗ್ನಿ ದುರಂತ: 14 ಮಂದಿ ಮೃತ, ಹಲವರು ಗಂಭೀರ: http://bit.ly/2pOMXrr
►►'ಅಂಜನಿಪುತ್ರ' ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ:
http://bit.ly/2ChUAeO
►►ಕುಖ್ಯಾತ ರೌಡಿಶೀಟರ್ ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ: http://bit.ly/2lmXBzZ
►►ರಾಮಮಂದಿರ ಕಟ್ಟುವ ಮೊದಲು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ: http://bit.ly/2ChPf54
►►ಗುಜರಾತ್‌ನಲ್ಲಿ ಭೀತಿಯ ವಾತಾವರಣ ಮರೆಯಾಗುತ್ತಿದೆ: ಸೌಹಾರ್ದ ಮಂಟಪದಲ್ಲಿ ತೀಸ್ತಾ: http://bit.ly/2Dq3nsc
►►ಕಕೋಸೌವೇಗೆ ಹದಿನೈದು ವರ್ಷ. ದೃಢಚಿತ್ತದ ಜೀವಪ್ರೀತಿಯ ಸೌಹಾರ್ದದ ಪಯಣ!: http://bit.ly/2l7gA2a
►►ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಡಿಫಿಯಿಂದ ಅಣಕು ಶವ ಯಾತ್ರೆ: http://bit.ly/2ljafjv
►►ನಾನು ಹಿಂದೂವಾದರೂ ಜಾತ್ಯತೀತವಾದಿ: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2lj3GxH
►►ಬಸ್- ಟೆಂಪೋ ಟ್ರಾವೆಲರ್ ಮುಖಾಮುಖಿ ಢಿಕ್ಕಿ: ಐವರ ದುರ್ಮರಣ: http://bit.ly/2BMXiWb

Related Tags: Google Doodle Celebrates, Kannada Novelist Kuvempu''s 113th Birthday, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ