'ಅಂಜನಿಪುತ್ರ' ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪವರ್ ಸ್ಟಾರ್ ಪುನೀತ್‌ ರಾಜ್‌‌ಕುಮಾರ್‌ ಅಭಿನಯದ ಅಂಜನಿಪುತ್ರ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.

ಚಿತ್ರದಲ್ಲಿ ವಕೀಲ ವೃತ್ತಿಗೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜ.2 ರವರೆಗೂ ಈ ಚಿತ್ರದ ಪ್ರದರ್ಶನಕ್ಕೆ ನ್ಯಾಯಾಲಯ ತಡೆ ನೀಡಿತ್ತು.

ಆದರೆ ಚಿತ್ರ ತಂಡ ಕೋರ್ಟ್ ಆದೇಶವನ್ನು ಧಿಕ್ಕರಿಸಿ ವಿವಾದಾತ್ಮಕ ಡೈಲಾಗ್ ಅನ್ನು ಸಹ ಚಿತ್ರದಿಂದ ತೆಗೆಯದೆ ಸಿನಿಮಾ ಪ್ರದರ್ಶನ ಮುಂದುವರಿಸಿತ್ತು. ಹೀಗಾಗಿ ಚಿತ್ರತಂಡದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ವಕೀಲ ಜಿ. ನಾರಾಯಣಸ್ವಾಮಿ ಮತ್ತೊಮ್ಮೆ ದೂರು ದಾಖಲಿಸಿದ್ದರು.

'ಅಂಜನಿಪುತ್ರ' ಚಿತ್ರದಲ್ಲಿ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ಸಂಭಾಷಣೆ ಇದೆ. ಹೀಗಾಗಿ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಸಂಭಾಷಣೆಯನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

'ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್‌ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ" ಎಂದು ಇನ್ಸ್‌ಪೆಕ್ಟರ್ ರವಿ ಶಂಕರ್, ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ.

ಚಿತ್ರದ ನಿರ್ದೇಶಕ ಎ.ಹರ್ಷ, ನಿರ್ಮಾಪಕ ಎಂ.ಎನ್‌.ಕುಮಾರ್‌, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕುಖ್ಯಾತ ರೌಡಿಶೀಟರ್ ಹತ್ಯೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ:
http://bit.ly/2lmXBzZ
►►ರಾಮಮಂದಿರ ಕಟ್ಟುವ ಮೊದಲು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ: http://bit.ly/2ChPf54
►►ಗುಜರಾತ್‌ನಲ್ಲಿ ಭೀತಿಯ ವಾತಾವರಣ ಮರೆಯಾಗುತ್ತಿದೆ: ಸೌಹಾರ್ದ ಮಂಟಪದಲ್ಲಿ ತೀಸ್ತಾ: http://bit.ly/2Dq3nsc
►►ಕಕೋಸೌವೇಗೆ ಹದಿನೈದು ವರ್ಷ. ದೃಢಚಿತ್ತದ ಜೀವಪ್ರೀತಿಯ ಸೌಹಾರ್ದದ ಪಯಣ!: http://bit.ly/2l7gA2a
►►ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಡಿಫಿಯಿಂದ ಅಣಕು ಶವ ಯಾತ್ರೆ: http://bit.ly/2ljafjv
►►ನಾನು ಹಿಂದೂವಾದರೂ ಜಾತ್ಯತೀತವಾದಿ: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2lj3GxH
►►ಬಸ್- ಟೆಂಪೋ ಟ್ರಾವೆಲರ್ ಮುಖಾಮುಖಿ ಢಿಕ್ಕಿ: ಐವರ ದುರ್ಮರಣ: http://bit.ly/2BMXiWb

Related Tags: Punith Rajkumar, Anjaniputra, Advocates Community, A. Harsha, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ