ಕಟೌಟ್‌ಗಳಿಗೆ ಹಾಲು ಸುರಿಯಬೇಡಿ: ಟ್ವಿಟ್ಟರ್‌ನಲ್ಲಿ ಪುನೀತ್ ಮನವಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ತಾನು ನಟಿಸಿರುವ ಅಂಜನಿಪುತ್ರ ಸಿನೆಮಾ ಇಂದು ಬಿಡುಗಡೆಯಾಗಿದ್ದು, ಚಿತ್ರದ ಕಟೌಟ್‌ಗಳ ಮೇಲೆ ಯಾರೂ ಹಾಲು ಸುರಿಯದಂತೆ ಟ್ವಿಟ್ಟರ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪುನೀತ್, “ಬಿಡುಗಡೆ ಆಗುತ್ತಿರುವ ನನ್ನ ಚಿತ್ರ ಅಂಜನಿಪುತ್ರ ಸಿನೆಮಾದ ಕಟೌಟ್‌ಗಳ ಮೇಲೆ ಹಾಲು ಹಾರ ಹಾಕಿ ಪೋಲು ಮಾಡುವ ಬದಲು ಹಸಿದ ಮಕ್ಕಳಿಗೆ ಅಥವಾ ವೃದ್ಧರಿಗೆ ಕೊಡಿ. ಸಿನಿಮಾ ಇಷ್ಟ ಆದ್ರೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಅಪ್ಪ ಅಮ್ಮ ಜೊತೆ ಇರೋ ಫೋಟೋ ಕಳಿಸಿ, ನನಗೆ ಅದೆ ಖುಷಿ ಕೊಡುತ್ತದೆ” ಎಂದು ಪುನೀತ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು, ಉಗ್ರಂ ಖ್ಯಾತಿಯ ರವಿ ಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ.

ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ರಾಜಕುಮಾರ ಚಿತ್ರದ ಯಶಸ್ಸಿನ ನಂತರ ಪುನೀತ್ ‘ಅಂಜನಿಪುತ್ರ’ ನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕಾತರರಾಗಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಹೌಸ್‍ಫುಲ್ ಆಗಿದ್ದು, ರಾಜ್ಯದ್ಯಂತ ಸುಮಾರು 400 ಥಿಯೇಟರ್‌ಗಳಲ್ಲಿ ಸಿನಿಮಾ ಶುರುವಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಯಕೃತ್ತಿನ ಕಸಿಗೆ ಹೊರಟ ಬಾಲಕಿ: ಬೈಂದೂರಿನಿಂದ ಮಂಗಳೂರಿಗೆ ಝೀರೊ ಟ್ರಾಫಿಕ್:
http://bit.ly/2p61MFK
►►2ಜಿ ಹಗರಣ: ರಾಜಾ, ಕನಿಮೋಳಿ ಸೇರಿ 17 ಆರೋಪಿಗಳು ಖುಲಾಸೆ: http://bit.ly/2p1tXWm
►►ದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು: http://bit.ly/2BcIxvD
►►ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಆರೋಪಿಗೆ 12 ವರ್ಷ ಕಠಿಣ ಕಾರಾಗೃಹ ಶಿಕ್ಷೆ: http://bit.ly/2BaueI1
►►ವಿಜಯಪುರ ರೇಪ್ & ಮರ್ಡರ್: ತನಿಖೆ ಸಿಐಡಿಗೆ. ಆರೋಪಿಗಳಿಗಾಗಿ ಶೋಧ: http://bit.ly/2BTx2Nj
►►ಸಾಕಾಯ್ತು ಮೋದಿ ಜಿ. ಹಿಮಾಲಯಕ್ಕೆ ಹೋಗಿ. ಗಂಟೆ ಬಾರಿಸಿ: ಜಿಗ್ನೇಶ್ ಮೇವಾನಿ: http://bit.ly/2CNf4ZC
►►ಕರಾವಳಿ ಉತ್ಸವ- 2017 ಉದ್ಘಾಟನೆಗೆ ಬಹುಭಾಷಾ ನಟ ಪ್ರಕಾಶ್ ರೈ: http://bit.ly/2DfYGSD

Related Tags: Punith Rajkumar, Anjaniputra, A. Harsha, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ