ಶಾಲಾ ಬಾಲಕಿಗೆ ಚೂರಿ ಗಾಯ ಮಾಡಿದ್ದು ಯಾರು ಗೊತ್ತೆ? ಬಯಲಾಯ್ತು ರಹಸ್ಯ

ಕರಾವಳಿ ಕರ್ನಾಟಕ ವರದಿ
ಹೊನ್ನಾವರ
: ಪರೇಶ್ ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಹೊನ್ನಾವರದ ಗ್ರಾಮೀಣ ಭಾಗದಲ್ಲಿ ಶಾಲಾ ಬಾಲಕಿಯೋರ್ವಳಿಗೆ ಚೂರಿಯಿಂದ ಗಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಘಟನೆಯ ರಹಸ್ಯವನ್ನು ಭೇದಿಸಿದ್ದಾರೆ.

ಈ ಚೂರಿ ಇರಿತವನ್ನು ಮುಸ್ಲಿಮ್ ಸಮುದಾಯದ ವ್ಯಕ್ತಿಗಳು ಮಾಡಿದ್ದಾರೆ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸಿ ಹೊನ್ನಾವರ ಪರಿಸರ ಮತ್ತೊಮ್ಮೆ ಉದ್ರಿಕ್ತಗೊಂಡಿತ್ತು. ಆದರೆ ಈಗ ಬಾಲಕಿಗೆ ಚೂರಿ ಗಾಯ ಮಾಡಿದ ಇಡೀ ಪ್ರಕರಣದ ರಹಸ್ಯ ಹೊರಬಿದ್ದಿದೆ.

ಹುಡುಗಿ ಮೊದಲು ಹೇಳಿದ್ದೇನು?
ಡಿಸೆಂಬರ್ 14ರಂದು ಹೊನ್ನಾವರ ತಾಲೂಕಿನ ಮಾಗೋಡು ವ್ಯಾಪ್ತಿಗೆ ಬರುವ ಕೊಡ್ಲ ಗದ್ದೆ ಎಂಬಲ್ಲಿ 9ನೆಯ ನಡೆದುಕೊಂಡು ಹೋಗುವಾಗ ಬಾಲಕಿಯ ಎರಡು ಕೈಗಳ ಮೇಲೆ ಕೊಯ್ದ ಗಾಯಗಳು ಕಂಡುಬಂದಿದ್ದು ಸುದ್ದಿ ಕೇಳಿದ ಮಾಗೋಡು ಸರ್ಕಲ್‌ನಲ್ಲಿ ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು. ವಿದ್ಯಾರ್ಥಿನಿಯನ್ನು ಬಳಿಕ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು.

ಆಸ್ಪತ್ರೆಗೆ ಭೇಟಿ ನೀಡಿದ್ದ ಪೊಲೀಸರಿಗೆ ಹೇಳಿಕೆ ನೀಡಿದ್ದ ಬಾಲಕಿ ಬೆಳಿಗ್ಗೆ 7.30ರ ಸುಮಾರಿಗೆ ಇಬ್ಬರು ಅಪರಿಚಿತರು ಹಿಂದಿನಿಂದ ಬಂದು ಎರಡು ಕೈಗಳನ್ನೂ ಹಿಡಿದು ಚಾಕು ತೋರಿಸಿ ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಅಪಹರಣ ಮಾಡಲು ಪ್ರಯತ್ನಿಸಿ ಎರಡೂ ಕೈಗಳಿಗೆ ಗಾಯ ಮಾಡಿರುತ್ತಾರೆ. ಬೇರೊಂದು ದ್ವಿಚಕ್ರ ವಾಹನ ಬಂದ ಶಬ್ದ ಕೇಳಿ ಇಬ್ಬರೂ ಸಹ ಓಡಿ ಹೋಗಿರುತ್ತಾರೆ. ಇದರಲ್ಲಿ ಒಬ್ಬ ದಾಡಿ ಬಿಟ್ಟು ದಪ್ಪ ಇದ್ದನು. ಇನ್ನೋರ್ವ ಸಣಕಲು ದೇಹದವನಾಗಿದ್ದು ಜೀನ್ಸ್ ಪ್ಯಾಂತ್ ಧರಿಸಿದ್ದ ಎಂದು ಬಾಲಕಿ ಹೇಳಿದ್ದಳು. ಪೊಲೀಸರು ಅದೇ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ಇದೇ ಪ್ರಕರಣವನ್ನು ಮತ್ತಷ್ಟು ಗೋಜಲು ಮಾಡಲು ಯತ್ನಿಸಿದ ಕೆಲ ಕಿಡಿಗೇಡಿಗಳು ಇದನ್ನು ಅನ್ಯಕೋಮಿನ ವ್ಯಕ್ತಿಗಳು ಮಾಡಿದ್ದಾರೆ ಎಂದು ಪುಕಾರು ಹಬ್ಬಿಸಿ ಹೊನ್ನಾವರದಲ್ಲಿ ಮತ್ತಷ್ಟು ಹಿಂಸಾಚಾರ ನಡೆಯಿತು.

ತನಿಖೆ ನಡೆಸಿದ ಪೊಲೀಸರಿಗೆ ಆಗ ಕಾದಿತ್ತು ಅಚ್ಚರಿ!
ಬಾಲಕಿಗೆ ಚೂರಿ ಇರಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ವಿವಿಧ ತಂಡಗಳನ್ನು ರಚಿಸಿ ತನಿಖೆ ನಡೆಸಿತು. ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕರ ಮೂಲಕವೂ ಬಾಲಕಿಯ ಜೊತೆ ಮಾತುಕತೆ ನಡೆಸಲಾಯ್ತು. ಆಗ ಬಾಲಕಿ ನಿಜವಾಗಿ ನಡೆದ ವಿಷಯವನ್ನು ಬಾಯ್ಬಿಟ್ಟಿದ್ದಾಳೆ.


ನಿಜವಾಗಿಯೂ ನಡೆದದ್ದು ಇಷ್ಟು
ಬಾಲಕಿಯು ತನ್ನ ಮನೆಯಿಂದ 8 ಕಿಲೊಮೀಟರ್ ದೂರ ಇರುವ ಶಾಲೆಗೆ ಕಾಡಿನ ರಸ್ತೆಯಲ್ಲಿ ನಿತ್ಯವೂ ನಡೆದುಕೊಂಡು ಹೋಗುತ್ತಾಳೆ. ಇದನ್ನು ಗಮನಿಸಿದ್ದ ಮಾಗೋಡು ವ್ಯಾಪ್ತಿಯ ಬಜ್ಜಿಕೇರಿ ಎಂಬಲ್ಲಿನ ಬಾಲಕಿಯ ಸ್ವಜಾತಿಯವನೇ ಆಗಿರುವ ಗಣೇಶ್ ಈಶ್ವರ ನಾಯ್ಕ ಎಂಬಾತ ನಿರಂತರವಾಗಿ ಬಾಲಕಿಯನ್ನು ಅಡ್ಡಗಟ್ಟಿ ತನ್ನ ಕಾರು ಅಥವಾ ಬೈಕ್‌ನಲ್ಲಿ ಬರುವಂತೆ ಒತ್ತಾಯಿಸುತ್ತಿದ್ದ. ನನ್ನ ಜೊತೆ ಬಾ, ಸುತ್ತಾಡು, ಪ್ರೀತಿ ಮಾಡುತ್ತಿದ್ದೇನೆ ಎಂದೆಲ್ಲ ಒತ್ತಾಯಿಸುತ್ತಿದ್ದ. 'ನಿನಗ್ಯಾಕೆ ಇಶ್ಜ್ಟು ಸೊಕ್ಕು, ನನ್ನ ಜೊತೆ ಬಾ' ಎಂದು ಆಗಾಗ ಪೀಡಿಸುತ್ತಿದ್ದ. ಬಾಲಕಿ ಆತನ ಕಿರುಕುಳದಿಂದ ಬೇಸತ್ತು ಆ ವಿಷಯವನ್ನು ತನ್ನ ತಾಯಿಗೆ ಹೇಳಿದ್ದಳು. ಈ ವಿಷಯವನ್ನು ಬಾಲಕಿಯ ತಾಯಿ ಗ್ರಾಮ ಪಂಚಾಯತ್ ಸದಸ್ಯರೋರ್ವರ ಬಳಿ ಹೇಳಿದ್ದು ಅವರು ಗಣೇಶ ಈಶ್ವರ ನಾಯ್ಕನಿಗೆ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದ್ದರು.

ಹೊನ್ನಾವರ ಗಲಭೆಯ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನ ಶಾಲೆಗೆ ಹೋಗದ ಬಾಲಕಿ ಡಿಸೆಂಬರ್ 14ರಂದು ಶಾಲೆಗೆ ಹೋಗಬೇಕಾಗಿತ್ತು. ಅಂದು ಪರೀಕ್ಷೆಯೂ ಇತ್ತು. ಈ ಸಂದರ್ಭದಲ್ಲಿ ಮತ್ತೆ ಗಣೇಶ್ ಈಶ್ವರ ನಾಯ್ಕ ತನಗೆ ಕಿರುಕುಳ ನೀಡಬಹುದು ಎಂದು ಬಾಲಕಿ ಆತಂಕಗೊಂಡಿದ್ದಾಳೆ. ತಾನು ಬದುಕಬಾರದು, ಬದುಕಿದರೆ ಆತ ತನಗೇನಾದರೂ ಮಾಡಿಯಾನು ಎಂಬ ಭಯದಲ್ಲಿ  ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ತಾನೇ ತಂದಿದ್ದ ನಿಂಗೆ ಹಣ್ಣಿನ ಮುಳ್ಳಿನಿಂದ ಎರಡೂ ಕೈಗಳಿಗೆ ತಾನೇ ಗಾಯಮಾಡಿಕೊಂಡಿದ್ದಾಳೆ. ಬಳಿಕ ತನ್ನ ತಪ್ಪಿನ ಅರಿವಾಗಿ ಅದೇ ಗಾಯದೊಂದಿಗೆ ಶಾಲೆಗೆ ಹೋಗಿದ್ದಾಳೆ.

ಸುಳ್ಳು ಸುದ್ದಿ ಹರಡಿದ ಕಿಡಿಗೇಡಿ ಅಂಗಡಿ ಮಾಲಿಕ
ಅದೇ ದಿನ ಸಂಜೆ ಶಾಲೆಯಿಂದ ಮಾಗೋಡಿಗೆ ವಾಪಸ್ ಬಂದ ನಂತರ ಕೈಗೆ ಸುತ್ತಿಕೊಳ್ಳಲು ಬ್ಯಾಂಡೇಜ್ ತರುವಂತೆ ಸ್ನೇಹಿತೆಯನ್ನು ಕಳುಹಿಸಿದ್ದಾಳೆ. ಸ್ನೇಹಿತೆ ತಂದ ಬ್ಯಾಂಡೇಜ್ ಸಣ್ಣದಾಗಿದೆ ಎಂದು ಮತ್ತೆ ಅಂಗಡಿಗೆ ಆಕೆಯನ್ನು ವಾಪಸ್ ಕಳುಹಿಸಿದಾಗ ಅಂಗಡಿಯವನೇ ಗಾಯಗೊಂಡ ಬಾಲಕಿಯನ್ನು ಕರೆಯಿಸಿ ಗಾಯ ಪರೀಕ್ಷಿಸಿದ್ದಾನೆ.

ಗಾಯ ಹೇಗಾಗಿದೆ ಎಂಬ ಬಗ್ಗೆ ಬಾಲಕಿಯನ್ನು ಕೇಳದೆ 'ನಿನ್ನ ರಾತ್ರಿ ಯಾರೋ ಇಬ್ಬರು ಅಪರಿಚಿತರು  ಕೊಡ್ಲಗದ್ದೆಗೆ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ. ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು, ಒಬ್ಬ ಸಪೂರ ಇದ್ದ' ಎಂದು ಕಥೆ ಕಟ್ಟಿದ್ದಾನೆ. ಗ್ರಾಮಸ್ಥರಿಗೂ ನಂಬಿಸಿದ್ದಾನೆ. ಕೆಲ ಗ್ರಾಮಸ್ಥರೂ ಸಹ ಆತನ ಮಾತನ್ನು ನಂಬಿ ಅನ್ಯ ಕೋಮಿನ ವ್ಯಕಿಗಳೇ ಇದನ್ನು ಮಾಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಮೊದಲೇ ಭಯ ಮತ್ತು ಗೊಂದಲದಲ್ಲಿದ್ದ ಬಾಲಕಿ ತನ್ನ ತಪ್ಪನ್ನು ಮರೆಮಾಚಿ ಜನರು ಮಾತಾಡಿಕೊಂಡ ವಿಚಾರವನ್ನೇ ನೆನಪಿಟ್ಟುಕೊಂಡು ಪೊಲೀಸರಿಗೆ ಅದೇ ಹೇಳಿಕೆ ನೀಡಿದ್ದಾಳೆ.

ವೈದ್ಯರ ವರದಿ
ತಜ್ಞ ವೈದ್ಯರಿಂದ ಬಾಲಕಿಯ ಕೈಗಳ ಮೇಲೆ ಆದ ಗಾಯಗಳನ್ನು ಪರೀಕ್ಷೆ ಮಾಡಿ ಅದು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳು (hesitation injury mark) ಎಂದು ದೃಢಪಡಿಸಿದ್ದಾರೆ. ಆಪ್ತ ಸಮಾಲೋಚನೆಯ ವೇಳೆ ಬಾಲಕಿ ತಾನು ಸ್ವತಃ ಗಾಯ ಮಾಡಿಕೊಂಡಿದ್ದನ್ನು ಒಪ್ಪಿದ್ದಾಳೆ. ನ್ಯಾಯಾಧೀಶರ ಎದುರಿಗೂ ಹಾಗೆಯೆ ಹೇಳಿಕೆ ನೀಡಿದ್ದು ಗಣೇಶ್ ಈಶ್ವರ ನಾಯ್ಕ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಹೀಗೆ ಮಾಡಿಕೊಂಡೆ ಎಂದು ಹೇಳಿದ್ದಾಳೆ.ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಗಣೇಶ್ ಈಶ್ವರ ನಾಯ್ಕನ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಈ ಪ್ರಕರಣವನ್ನು ಬಳಸಿ ಕೋಮು ಗಲಭೆ ಮತ್ತು ಶಾಂತಿ ಕದಡಲು ಯತ್ನಿಸಿದವರ ಮೇಲೆ ಪ್ರಕರಣ ದಾಖಲಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.


ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿದ ಸುದ್ದಿಗಳ ಲಿಂಕ್ ಇಲ್ಲಿದೆ
►►ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?: http://bit.ly/2j87yR7
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ: http://bit.ly/2j4ybXl
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ಪರೇಶ್ ಮೇಸ್ತ ಸಾವು: ಸಂಘಪರಿವಾರದ ಡೆಡ್ ಬಾಡಿ ಪಾಲಿಟಿಕ್ಸ್‌ನ ಮುಂದುವರಿದ ಭಾಗ: http://bit.ly/2nTaUNe
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
►►ಪರೇಶ್ ಮೇಸ್ತ ಸಾವು: ಉ.ಕ ಜಿಲ್ಲೆಯಾದ್ಯಂತ ಪ್ರತಿಭಟನೆ. ಐಜಿಪಿ ವಾಹನಕ್ಕೆ ಬೆಂಕಿ: http://bit.ly/2B5rrmo
►►ಪರೇಶ್ ಮೇಸ್ತ ಸಾವು: ಶಿರಸಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ: http://bit.ly/2BEeqkv
►►ಪರೇಶ್ ಮೇಸ್ತ ಸಾವು: ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ: http://bit.ly/2BNSKyA
►►ಪರೇಶ್ ಹತ್ಯೆ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನ: ಹೆಗಡೆ: http://bit.ly/2AfXqNn
►►ಉತ್ತರ ಕನ್ನಡ: ಪ್ರಜ್ಞಾವಂತರ ಜಿಲ್ಲೆ ಪ್ರಜ್ಞೆ ತಪ್ಪುತ್ತಿದೆಯೇ? ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ: http://bit.ly/2iVvqay
►►ಕೋಮು ಸಂಘರ್ಷದ ಬಳಿಕ ಕಾಣೆಯಾಗಿದ್ದ ಯುವಕನ ಶವ ಪತ್ತೆ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2BiWCLN
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ನಾಪತ್ತೆಯಾದ ಅಬ್ದುಲ್ ಗಫೂರ್ ಪತ್ತೆ: ನೆರವಿಗೆ ಬಂದ ಬ್ರಾಹ್ಮಣ ಕುಟುಂಬ: http://bit.ly/2Bk4VXa

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ನನ್ನ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲುವುದಿಲ್ಲ: ಬಿಜೆಪಿ ಸಂಸದ  http://bit.ly/2CnLoSQ
►►ಓವರ್ ಕೊನೆಯ ಎಸೆತ ಸಂದರ್ಭ ಬೌಲರ್ ಕುಸಿದು ಬಿದ್ದು ಸಾವು: http://bit.ly/2CHsebl
►►ಜಿಂಕೆ ಚರ್ಮ, ಆಮೆ ಚಿಪ್ಪು: ಬೆಳಗೆರೆ ವಿರುದ್ಧ ಕೇಸ್: http://bit.ly/2CkhYVG
http://bit.ly/2j7TKGj
►►ಕಲ್ಲಿದ್ದಲು ಹಗರಣ: ಮಧು ಕೋಡಾಗೆ ಮೂರು ವರ್ಷ ಜೈಲು: http://bit.ly/2j7TKGj
►►2017ರಲ್ಲಿ ಫೇಕ್ ನ್ಯೂಸ್ ಹಬ್ಬಿಸಿದವರ ಪಟ್ಟಿಯಲ್ಲಿ ಉಡುಪಿ ಸಂಸದೆ ಕರಂದ್ಲಾಜೆ http://bit.ly/2ACOEZY
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ
►►ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ: http://bit.ly/2j1HffB

Related Tags: Paresh Mesta Death, HOnnavar, School Girl Injured, Knife Injury, Magodu, 9th STandard Girl, School Girl, Communal Clash, Ganesh Eshwar Naik, POCSO, Uttara Kannada POlice
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ