ಜೆಟ್ ಏರ್ವೇಸ್: 48-ಗಂಟೆಗಳ ವರ್ಷಾಂತ್ಯದ ಕೊಡುಗೆ

ಕರಾವಳಿ ಕರ್ನಾಟಕ ವರದಿ

ಕುವೈಟ್:
  ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಜೆಟ್ ಏರ್ವೇಸ್ ಹೊಸ ವರ್ಷ 2018 ಅನ್ನು 48-ಗಂಟೆಗಳ ನಿಗದಿತ ಅವಧಿಯ ವಿಶೇಷ ಕೊಡುಗೆಯೊಂದಿಗೆ ಸ್ವಾಗತಿಸಲು ಸಜ್ಜಾಗಿದೆ.

ಡಿಸೆಂಬರ್ 17, 2017ರಿಂದ ಆರಂಭಗೊಂಡು ಸೋಮವಾರ ಡಿಸೆಂಬರ್ 18, 2017ರಂದು ಸಮಾಪನಗೊಳ್ಳುವ ಈ ಸೀಮಿತ ಅವಧಿಯ ಅವಕಾಶದಲ್ಲಿ ಕುವೈಟ್ ನಿಂದ ಭಾರತ, ಬ್ಯಾಂಕಾಕ್, ಕೊಲಂಬೊ, ಢಾಕಾ, ಹಾಂಗ್ ಕಾಂಗ್,  ಕಠ್ಮಂಡು ಮತ್ತು ಸಿಂಗಾಪುರಗಳಿಗೆ ಬುಕಿಂಗ್ ಮಾಡುವ ಜೆಟ್ ಏರ್ವೇಸ್ ಪ್ರಯಾಣಿಕರಿಗೆ 12 ಪ್ರತಿಶತ ವಿಶೇಷ ದರ ಕಡಿತ ಯೋಜನೆಯನ್ನು ಜೆಟ್ ಏರ್ವೇಸ್ ಸಮರ್ಪಿಸುತ್ತಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆ ನೆಲೆಯಲ್ಲಿ ಒನ್ ವೇ ಮತ್ತು ರಿಟರ್ನ್ ಜರ್ನಿ ಎರಡಕ್ಕೂ ಈ ಕೊಡುಗೆಯು ಅನ್ವಯಿಸುತ್ತಿದ್ದು, ಜೆಟ್ ಏರ್ವೇಸ್ ಪ್ರಯಾಣಿಕರು ತಮ್ಮ ಯಾನವನ್ನು ಮುಂಚಿತವಾಗಿಯೇ ಯೋಜನಾಬದ್ಧವಾಗಿ ನಿರ್ಧರಿಸಲು ಸಹಕಾರಿಯಾಗಿದೆ.

ಜೆಟ್ ಏರ್ವೇಸ್ ನಿರ್ವಹಿಸುವ ವಿಮಾನ ಯಾನಗಳಿಗೆ ಮಾತ್ರ ಈ ವಿಶೇಷ ದರ ಕೊಡುಗೆ ಲಭ್ಯವಿದ್ದು, ಜೆಟ್ ಏರ್ವೇಸ್ ಪ್ರಯಾಣಿಕರು www.jetairways.com ಮೂಲಕ ಅಥವಾ ಜೆಟ್ ಏರ್ವೇಸ್ ಮೊಬೈಲ್ ಆಪ್ ಬಳಸಿ ಟಿಕೇಟ್ ಬುಕ್ ಮಾಡಬಹುದಾಗಿದೆ.

2017ಕ್ಕೆ ವಿದಾಯ ಹೇಳಿ 2018 ಅನ್ನು ಎದುರುಗೊಳ್ಳುವ ಸಂದರ್ಭ ವರ್ಷಾಂತ್ಯದ ಮಾರಾಟ ಕೊಡುಗೆಯು ನಮ್ಮ ಪ್ರಯಾಣಿಕರಿಗೆ ವಿಶೇಷ ದರ ಕಡಿತ ಸೌಲಭ್ಯವನ್ನು ಅನುಭವಿಸಲು ಕೊನೆಯ ಅವಕಾಶವಾಗಿದೆ. 

ನಮ್ಮ ಪ್ರಯಾಣಿಕರು ಅವರ ಮನೆಗಳಿಗೆ ತೆರಳಲು, ಗೆಳೆಯರು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಲು ಅಥವಾ ದೂರಪ್ರಾಚ್ಯ ದೇಶಗಳ ಅಪೂರ್ವ ಅನುಭವ ಪಡೆಯಲು ಈ ಕೊಡುಗೆಯು ಸಾಟಿಯಿಲ್ಲದ ಅವಕಾಶವಾಗಿದೆ. ನಮ್ಮ ವಿಮಾನ ಯಾನ ಸೇವೆಯನ್ನು ಬಳಸಿಕೊಳ್ಳುವವರಿಗೆ ನಾವು ನೀಡುವ ಅಸಾಧಾರಣ ಸೇವೆಯ ಬಗೆ ಇದಾಗಿದೆ ಎಂದು ಜೆಟ್ ಏರ್ವೇಸ್ ಗಲ್ಫ್, ಮಿಡ್ಲ್ ಈಸ್ಟ್ ಮತ್ತು ಆಫ್ರಿಕಾ ಉಪಾಧ್ಯಕ್ಷ ಶಾಕಿರ್ ಕಾಂತಾವಾಲಾ ಅವರು ಹೇಳಿದ್ದಾರೆ.

ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಾದ ಜೆಟ್ ಏರ್ವೇಸ್, ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ತನ್ನ ಸಾಟಿಯಿಲ್ಲದ ಯಾನ ಸೇವೆಗಳು, ಪ್ರಯಾಣಿಕರ ಅನುಕೂಲಕ್ಕೆ ತಕ್ಕ ವಿಸ್ತೃತ ಸಂಪರ್ಕಗಳ ಸೇವೆಗಳ ಮೂಲಕ ಜನ ಬಯಸುವ ವಿಮಾನ ಯಾನ ಸಂಸ್ಥೆಯಾಗಿ ಹೆಸರುಗಳಿಸಿರುವುದು ಗಮನಾರ್ಹ.


ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►2017ರಲ್ಲಿ ಫೇಕ್ ನ್ಯೂಸ್ ಹಬ್ಬಿಸಿದವರ ಪಟ್ಟಿಯಲ್ಲಿ ಉಡುಪಿ ಸಂಸದೆ ಕರಂದ್ಲಾಜೆ
http://bit.ly/2ACOEZY
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ: http://bit.ly/2j1HffB
►►ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ: http://bit.ly/2C4CMQC
►►ಕತ್ತು ಕೊಯ್ದು ನಿವೃತ್ತ ಶಿಕ್ಷಕಿಯ ಕೊಲೆ: http://bit.ly/2iZXeKW
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
ಇದನ್ನೂ ಓದಿ:
►►ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?
http://bit.ly/2j87yR7
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ಪರೇಶ್ ಮೇಸ್ತ ಸಾವು: ಸಂಘಪರಿವಾರದ ಡೆಡ್ ಬಾಡಿ ಪಾಲಿಟಿಕ್ಸ್ನ ಮುಂದುವರಿದ ಭಾಗ: http://bit.ly/2nTaUNe
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
►►ಪರೇಶ್ ಮೇಸ್ತ ಸಾವು: ಉ.ಕ ಜಿಲ್ಲೆಯಾದ್ಯಂತ ಪ್ರತಿಭಟನೆ. ಐಜಿಪಿ ವಾಹನಕ್ಕೆ ಬೆಂಕಿ: http://bit.ly/2B5rrmo
►►ಪರೇಶ್ ಮೇಸ್ತ ಸಾವು: ಶಿರಸಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ: http://bit.ly/2BEeqkv
►►ಪರೇಶ್ ಮೇಸ್ತ ಸಾವು: ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ: http://bit.ly/2BNSKyA
►►ಪರೇಶ್ ಹತ್ಯೆ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನ: ಹೆಗಡೆ: http://bit.ly/2AfXqNn
►►ಉತ್ತರ ಕನ್ನಡ: ಪ್ರಜ್ಞಾವಂತರ ಜಿಲ್ಲೆ ಪ್ರಜ್ಞೆ ತಪ್ಪುತ್ತಿದೆಯೇ? ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ: http://bit.ly/2iVvqay
►►ಕೋಮು ಸಂಘರ್ಷದ ಬಳಿಕ ಕಾಣೆಯಾಗಿದ್ದ ಯುವಕನ ಶವ ಪತ್ತೆ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2BiWCLN
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ನಾಪತ್ತೆಯಾದ ಅಬ್ದುಲ್ ಗಫೂರ್ ಪತ್ತೆ: ನೆರವಿಗೆ ಬಂದ ಬ್ರಾಹ್ಮಣ ಕುಟುಂಬ: http://bit.ly/2Bk4VXa

Related Tags: Shakir Kantawala, Vice President - Gulf, Middle East & Africa, Jet Airways, JET AIRWAYS: 48-HOUR, END OF YEAR SALE, Kannada News, Karnataka News, Coastal Karnataka News, Karavali News, Karavali Karnataka, Latest Kannada News, Karavali Karnataka Gulf News, Karavalikarnataka Kuwait News, ಜೆಟ್ ಏರ್ವೇಸ್
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ