ತಾಕತ್ತಿದ್ದರೆ ನನ್ನೆದುರು ಸ್ಪರ್ಧಿಸಿ ಡೆಪಾಸಿಟ್ ಉಳಿಸಿಕೊಳ್ಳಿ: ಕಲ್ಲಡ್ಕ ಭಟ್ಟರಿಗೆ ರೈ ನೇರ ಸವಾಲು

ಕರಾವಳಿ ಕರ್ನಾಟಕ ವರದಿ

ವಿರಾಜಪೇಟೆ:
ಆರ್‌ಎಸ್‌ಎಸ್‌ ಮುಖಂಡ ಪ್ರಭಾಕರ್‌ ಭಟ್‌ ಅವರಿಗೆ ತಾಕತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಅವರು ಸವಾಲೆಸಿದಿದ್ದಾರೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮಾನಾಥ ರೈ, ಪ್ರಭಾಕರ ಭಟ್‌ ಅವರು ದಕ್ಷಿಣ ಕನ್ನಡದಲ್ಲಿ ನನ್ನ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೂ ಅಲ್ಲಿನ ಜನ ನನ್ನೊಂದಿಗೆ ಇದ್ದಾರೆ.

ನನ್ನ ವಿರುದ್ಧ ಭಟ್ ಚುನಾವಣೆಗೆ ನಿಂತರೆ ಅವರಿಗೆ ಠೇವಣಿ ಸಿಗಲ್ಲ. ಪ್ರಭಾಕರ ಭಟ್ ಅವರನ್ನು ದೊಡ್ಡ ಜನ ಅಂದುಕೊಂಡಿದ್ದೀರಾ. ಭಟ್ ಏನೆಂದು ನಮ್ಮೂರಿನ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ಕಲ್ಲಡ್ಕ ಪ್ರಭಾಕರ ಭಟ್ ಕೂಡ ಮಂಜೂರಾತಿ ಆಗಿದ್ದ ಒಂದು ಶಾಲೆಯನ್ನು ಸ್ವಾರ್ಥಕ್ಕಾಗಿ ಮುಚ್ಚಿದ್ದಾರೆ. ಇದೀಗ ಶಾಲೆಯ ವಿಚಾರದ ಚರ್ಚೆ ಅರ್ಥಹೀನ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಬಿಸಿಯೂಟ ನೀಡುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ ಶಾಲೆ ಅನುದಾನಿತ ಶಾಲೆ ಅದಕ್ಕೆ ಬಿಸಿಯೂಟ ಸಿಗುತ್ತದೆ. ಆದರೆ ಅವರಿಗೆ ಬಿಸಿಯೂಟ ಬೇಡ, ಹಣ ಬೇಕು, ಅದೂ ದೇವಸ್ಥಾನ ಹಣ.

ದೇವಾಲಯದ ಹಣ ದೇವಾಲಯಕ್ಕೆ ಮಾತ್ರ ಬಳಕೆಯಾಗಬೇಕು. ದೇವಸ್ಥಾನದ ಹಣ ಶಾಲೆಗೆ ಬಳಸಿಕೊಂಡಿರುವುದು ಅಧಿಕಾರ ದುರುಪಯೋಗ. ಹೀಗಾಗಿ ಶಾಲೆಗೆ ಹೋಗುವ ಹಣಕ್ಕೆ ಕಡಿವಾಣ ಹಾಕಿರುವುದು ಸರಿ ಎಂದು ರಮಾನಾಥ ರೈ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಅಪಘಾತ: ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕ ಮೃತ್ಯು:
http://bit.ly/2j40KEc
►►ನದಿಗೆ ಹಾರಿ ಮೆಸ್ಕಾಂ ಅಧಿಕಾರಿ ಆತ್ಮಹತ್ಯೆ: http://bit.ly/2yvLwNt
►►ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?: http://bit.ly/2j87yR7
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ: http://bit.ly/2j4ybXl
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ

Related Tags: Ramanatha Rai, Challenge, Kalladka Pradbhakar Bhat, Election, Bantwal, RSS, Congress
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ