ಅಪಘಾತ: ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕ ಮೃತ್ಯು

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಇಲ್ಲಿನ ಬಿಣಗಾ ಬಳಿ ನಿನ್ನೆ ತಡರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಯುವಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ಜೀವನ ನಾರಾಯಣ ಶಿರೂರು ಸಾವನ್ನಪ್ಪಿದ ಯುವಕ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬಾಂಬೋಲಿಗೆ ರವಾನಿಸುವ ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಬೈಕ್ ಹಿಂಬದಿ ಸವಾರನಿಗೂ ಕೂಡ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ
ಅನಾರೋಗ್ಯದ ನಿಮಿತ್ತ ದಡಕ್ಕೆ ತಂದು ಬಿಟ್ಟ ಮೀನುಗಾರ ಕಾಣೆ
ಕಾರವಾರ: ನಗರದ ಬೈತಖೋಲ ಬಂದರಿನಿಂದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಬಗ್ಗೆ ಇಲ್ಲಿನ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಣಬಾವಿ ಗ್ರಾಮದ ನಿವಾಸಿ ನರಸಿಂಹ ಬಿಳಿಯಾ ಮೊಗೇರ್(33) ನಾಪತ್ತೆಯಾದ ವ್ಯಕ್ತಿ.

ಮಲ್ಪೆಯ ಸಾಯಿ ಹಂಸರಾಜ ಎಂಬ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹ ಬುಧವಾರ ಅನಾರೋಗ್ಯ ಹೊಂದಿದ ಕಾರಣ ಬೈತಖೋಲ ಬಂದರಿಗೆ ತಂದು ಬಿಡಲಾಗಿತ್ತು. ಆದರೆ ಆ ಬಳಿಕ ನರಸಿಂಹ ಕಾಣೆಯಾಗಿದ್ದರು.

ನರಸಿಂಹ ಬಿಳಿಯಾ ಮೊಗೇರ್ ಅವರನ್ನು ಎಲ್ಲಿಯಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಹೋದರ ಕೃಷ್ಣಾ ನಾರಾಯಣ ಮೊಗೇರ ವಿನಂತಿಸಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ನದಿಗೆ ಹಾರಿ ಮೆಸ್ಕಾಂ ಅಧಿಕಾರಿ ಆತ್ಮಹತ್ಯೆ:
http://bit.ly/2yvLwNt
►►ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?: http://bit.ly/2j87yR7
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ: http://bit.ly/2j4ybXl
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ

Related Tags: Bike Accident, Karwar Binaga, Youth Death, Jeevan Narayan Shirur Death, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ