ನದಿಗೆ ಹಾರಿ ಮೆಸ್ಕಾಂ ಅಧಿಕಾರಿ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಸೇತುವೆಯಿಂದ ಧುಮುಕಿ ಮೆಸ್ಕಾಂ ಅಧಿಕಾರಿಯೊಬ್ಬರು ಆತ್ಮಹತ್ಯೆಗೈದ ಕಳವಳಕಾರಿ ಸಂಗತಿ ವರದಿಯಾಗಿದೆ.

ಅತ್ತಾವರ ನಿವಾಸಿ ಕೆ.ರಹಮಾನ್(58) ಎಂಬವರು ಆತ್ಮಹತ್ಯೆಗೈದವರು.

ಈ ಘಟನೆ ನೋಡಿದ ವಾಹನ ಸವಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದರೂ ರಹ್ಮಾನ್ ಅವರನ್ನು ಉಳಿಸಿಕೊಳ್ಳಲಾಗಿಲ್ಲ. ಮೃತ ದೇಹ ಸೇತುವೆ ಸಮೀಪದಲ್ಲೇ ಪತ್ತೆಯಾಗಿದೆ.

ಶಿರ್ವದಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ರಹ್ಮಾನ್ ಅವರು ಇತ್ತೀಚೆಗಷ್ಟೇ ವರ್ಗಾವಣೆಗೊಂಡಿದ್ದರೆನ್ನಲಾಗಿದೆ. ಉಡುಪಿಗೆ ಹೋಗಿದ್ದ ಅವರು ಮರಳಿ ಬರುವಾಗ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೈದಿದ್ದಾರೆ.

ರಹ್ಮಾನ್ ಅವರ ಮಗಳು ಇಂಜಿನಿಯರ್ ಆಗಿದ್ದು, ಆಕೆಯ ವಿವಾಹ ಎಪ್ರಿಲ್ ತಿಂಗಳಿಗೆ ನಿಗದಿಯಾಗಿದೆ. ಪುತ್ರ ಇಂಜಿನಿಯರಿಂಗ್ ಓದುತ್ತಿದ್ದಾರೆ.


ಶನಿವಾರ ಮನೆಗೆ ಬಂದು ಹೋಗಿದ್ದ ರಹ್ಮಾನ್ ಅವರು ಸೋಮವಾರ ಪತ್ನಿಗೆ ಕರೆ ಮಾಡಿದಾಗ ಯಾವುದೇ ಆತಂಕವನ್ನು ವ್ಯಕ್ತಪಡಿಸಿರಲಿಲ್ಲ.

ರಹ್ಮಾನ್ ಅವರು ಪತ್ನಿ ಮತ್ತು ಮಕ್ಕಳನ್ನು ಶೋಕದ ಕಡಲಲ್ಲಿ ಮುಳುಗಿಸಿ ಅಗಲಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?:
http://bit.ly/2j87yR7
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ: http://bit.ly/2j4ybXl
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ

Related Tags: Officer Commits Suicide, Mescom Officer Ends Life, Ullal Bridge, Mangalore Electricity Supply Co Ltd, Netravathi River, Rahman Death, Shirva Mescom Section Officer, Kannada News, Karnataka News, Coastal Karnataka News, Karavali News, Karavali Karnataka, Latest Kannada News, ನದಿಗೆ ಹಾರಿ ಮೆಸ್ಕಾಂ ಅಧಿಕಾರ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ