ಪರೇಶ್ ಸಾವು: ವೈದ್ಯರ ವರದಿ ಸುಳ್ಳೇ ಆದಲ್ಲಿ ಬಿಜೆಪಿ ಈ ಸಲಹೆ ಸ್ವೀಕರಿಸುವುದೆ?
ಮಣಿಪಾಲ ವೈದ್ಯರು ನಿಜಕ್ಕೂ ಸುಳ್ಳು ವರದಿ ನೀಡಿದ್ದಾರೆಯೆ ಎಂಬುದು ಸ್ಪಷ್ಟವಾಗಬೇಕಿದೆ. ಅದಕ್ಕಾಗಿ ಬಿಜೆಪಿ ''ಕರಾವಳಿ ಕರ್ನಾಟಕ''ದ ಈ ಸಲಹೆ ಸ್ವೀಕರಿಸಬೇಕು.

ಕರಾವಳಿ ಕರ್ನಾಟಕ ವರದಿ

ಹೊನ್ನಾವರ:
ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿ ಆತನನ್ನು ವಿಕೃತವಾಗಿ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಸೋಷಿಯಲ್ ಮೀಡಿಯಾ ವರದಿಗಳನ್ನು ಅಲ್ಲಗಳೆದು ಅಂತಹ ಯಾವುದೇ ಹಿಂಸೆ, ವಿಕೃತಿಗಳು ಪರೇಶ್ ಮೇಸ್ತ ದೇಹದ ಮೇಲೆ ಕಂಡು ಬಂದಿಲ್ಲ ಎಂದು ಇತ್ತೀಚೆಗೆ ಮಣಿಪಾಲ ವೈದ್ಯರು ವರದಿ ನೀಡಿದ್ದಾರೆ.

ಆದರೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಇತರ ಬಿಜೆಪಿ ನಾಯಕರು ಹಾಗೂ ಸೋಷಿಯಲ್ ಮೀಡಿಯಾದ ಅನೇಕ ಮಂದಿ ಈಗಲೂ ಮಣಿಪಾಲದ ವೈದ್ಯರ ವರದಿ ಸುಳ್ಳೆಂದು ವಾದಿಸುವಲ್ಲಿ ನಿರತರಾಗಿದ್ದಾರೆ.

ಪರೇಶ್ ಮೇಸ್ತನನ್ನು ವಿಕೃತವಾಗಿ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿದ್ದು ಪರೇಶ್ ಮೇಸ್ತನ ಸಾವಿಗೆ ಸಂಬಂಧಿಸಿ ವರದಿ ನೀಡಿದ ವೈದ್ಯರ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ದಾಳಿ ಶುರುವಾಗಿದೆ.

ಮಣಿಪಾಲದ ವೈದ್ಯರೇ ಶವ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದ ಬಿಜೆಪಿ ನಾಯಕರು ಮತ್ತು ಶೋಭಾ ಕರಂದ್ಲಾಜೆ ಈಗ ಅದೇ ವೈದ್ಯರ ವರದಿಯನ್ನು ಒಪ್ಪಲು ಸಿದ್ಧರಿಲ್ಲ. ಮಣಿಪಾಲದ ವೈದ್ಯರು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಸುಳ್ಳು ವರದಿ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಟಿಯಲ್ಲಿ ಮಣಿಪಾಲದ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತಾಧಿಕಾರಿಗಳ ಮೇಲೆ ಆರೋಪ ಹೊರಿಸಿದ್ದಾರೆ. ಉತ್ತರ ಕನ್ನಡದ ಬಿಜೆಪಿ ಮುಖಂಡರೂ ಸಹ ಇದಕ್ಕೆ ದನಿಗೂಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು ಮತ್ತು ಬಿಜೆಪಿ ನಾಯಕರ ಪ್ರಕಾರ 'ಪರೇಶ್ ಮೇಸ್ತನ ಕುತ್ತಿಗೆಗೆ ತಂತಿ ಬಿಗಿದು, ಮುಖಕ್ಕೆ ಬಿಸಿ ನೀರು ಸುರಿದು, ಬಾಯಲ್ಲಿ ಮಲ ಮೂತ್ರ ಎರಚಿ, ಮರ್ಮಾಂಗಕ್ಕೆ ಹಾನಿ ಮಾಡಿ, ಕೈಯಲ್ಲಿದ್ದ ಶ್ರೀರಾಮನ ಹಚ್ಚೆಯನ್ನು ಚರ್ಮ ಸಹಿತ ಕಿತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ'. ಆದರೆ ಈ ಕುರಿತು ಉತ್ತರ ಕನ್ನಡ ಪೊಲೀಸರು ಕೇಳಿದ ಪ್ರಶ್ನಾವಳಿಗೆ ಉತ್ತರಿಸಿರುವ ಶವ ಪರೀಕ್ಷೆ ನಡೆಸಿದ ಮಣಿಪಾಲದ ತಜ್ಞ ವೈದ್ಯರು ಈ ಎಲ್ಲ ಅಂಶಗಳನ್ನೂ ನಿರಾಕರಿಸಿದ್ದಾರೆ.


ಪರೇಶ್ ಮೇಸ್ತ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಮತ್ತು ಯಾವುದೇ ರೀತಿಯ ವಿಕೃತಿ ಅಥವಾ ಹಿಂಸೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ವೈದ್ಯರ ವರದಿಯಲ್ಲಿ ಹೇಳಲಾಗಿದೆ. ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಈ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರು ಮಣಿಪಾಲದ ವೈದ್ಯರು ಸುಳ್ಳು ವರದಿ ನೀಡಿದ್ದಾರೆ, ಪರೇಶ್ ಮೇಸ್ತನನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂದು ತಮ್ಮ ಆರೋಪವನ್ನು ಮುಂದುವರಿಸಿದ್ದಾರೆ.

ಆದರೆ ಈ ಆರೋಪಗಳು ನಿರಾಧಾರವಾಗಿದ್ದು ಭಾರತೀಯ ಜನತಾ ಪಕ್ಷ ಪರೇಶ್ ಸಾವಿನಲ್ಲಿ ರಾಜಕೀಯ ಮಾಡುತ್ತಿದೆ ಮತ್ತು ಉತ್ತರ ಕನ್ನಡದಲ್ಲಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಗೃಹಮಂತ್ರಿ ರಾಮಲಿಂಗಾ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಆರೋಪಿಸಿದೆ.

ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿ ಸೋಷಿಯಲ್ ಮೀಡಿಯಾ ಮತ್ತು ಬಿಜೆಪಿ ನಾಯಕರ ಗೊಂದಲ ಮೂಡಿಸುವ ಹೇಳಿಕೆಗಳಿಂದ ಕರಾವಳಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ನಿತ್ಯವೂ ಒಂದಿಲ್ಲೊಂದು ಘಟನೆಗಳಿಂದ ಉದ್ವಿಗ್ನಗೊಳ್ಳುತ್ತಿದೆ. ಹಿಂಸೆ ನಡೆಯುತ್ತಿದೆ. ಮುಖ್ಯವಾಗಿ ಮುಸ್ಲಿಮರ ಮನೆ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಣಿಪಾಲ ವೈದ್ಯರು ನಿಜಕ್ಕೂ ಸುಳ್ಳು ಹೇಳುತ್ತಿದ್ದಾರೆಯೆ ಎಂಬುದೂ ಸ್ಪಷ್ಟವಾಗಬೇಕಿದೆ. ಸದಾ ಶಾಂತಿ, ಸೌಹಾರ್ದತೆ ಮತ್ತು ಜಾತ್ಯತೀತ ಮೌಲ್ಯಗಳ ಪರವಾಗಿರುವ 'ಕರಾವಳಿ ಕರ್ನಾಟಕ' ವೆಬ್ ಪತ್ರಿಕೆ ಈಗ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ನಾಯಕರಿಗೆ ಒಂದು ಸಲಹೆ ನೀಡುತ್ತಿದೆ. ಈ ಸಲಹೆ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಬಿಜೆಪಿ ಮುಂದಾದರೆ ಮಣಿಪಾಲ ವೈದ್ಯರು ನಿಜಕ್ಕೂ ಸುಳ್ಳು ಹೇಳಿದರೆ ಎಂಬುದು ಬಯಲಾಗಲಿದೆ.

'ಕರಾವಳಿ ಕರ್ನಾಟಕ'ದ  ಸಲಹೆ
ಪರೆಶ್ ಮೇಸ್ತನ ಮೃತದೇಹವನ್ನು ಹಲವರು ನೋಡಿದ್ದಾರೆ. ಬಿಜಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿರುವಂತೆ ಮತ್ತು ಬಿಜೆಪಿ ನಾಯಕರು ಹೇಳುವ ರೀತಿಯಲ್ಲಿ ಪರೇಶ್ ಮೇಸ್ತ ಹತ್ಯೆ ನಡೆದಿದ್ದೆ ಹೌದಾದರೆ ಆತನ ಕುತ್ತಿಗೆಗೆ ತಂತಿ ಬಿಗಿದಿದ್ದು ಅಥವಾ ತಂತಿ ಬಿಗಿದ ಗುರುತುಗಳನ್ನು ಕಂಡವರು, ಆತನ ಮುಖಕ್ಕೆ ಆಸಿಡ್ ಅಥವಾ ಬಿಸಿ ನೀರು ಎರಚಿದ ಗಾಯಗಳನ್ನು ಕಂಡವರು, ಆತನ ಕೈಯ್ಯಲ್ಲಿದ್ದ ಶ್ರೀ ರಾಮನ ಹಚ್ಚೆಯನ್ನು ಚರ್ಮ ಸಮೇತ ಕಿತ್ತು ತೆಗೆದಿದ್ದನ್ನು ಮೃತ ದೇಹದಲ್ಲಿ ಕಂಡವರು, ಆತನ ಮರ್ಮಾಂಗಕ್ಕೆ ಹಾನಿಯಾಗಿದ್ದು ಕಂಡವರು, ಆತನ ಮೈಮೇಲೆ ರಕ್ತಸಿಕ್ತ ಗಾಯಗಳನ್ನು ಕಂಡವರು, ಆತನ ಮೃತದೇಹದ ಮೇಲೆ ಸುಟ್ಟ ಗಾಯಗಳನ್ನು ಕಂಡವರು ಹಲವರು ಇದ್ದೇ ಇರುತ್ತಾರೆ.

ಹೀಗೆ ನಾವು ಪರೇಶ್ ಮೃತದೇಹದ ಮೇಲೆ ಮೇಲ್ಕಂಡ ವಿಕೃತಿಗಳನ್ನು ಸ್ವತಃ ಕಂಡಿದ್ದೇವೆ ಎಂದು ಹೇಳುವ ಕನಿಷ್ಟ ಹತ್ತು ಜನರ ಲಿಖಿತ ಹೇಳಿಕೆಗಳನ್ನು ಬಿಜೆಪಿ ಪಡೆಯಬೇಕು. ಆ ಹತ್ತು ಜನರು ಯಾವ ಗಾಯ ಇತ್ಯಾದಿಗಳನ್ನು ಕಂಡಿದ್ದಾರೆ ಎಂದು ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಲಿಖಿತ ಹೇಳಿಕೆ ನೀಡಬೇಕು.

ಮಾತ್ರವಲ್ಲದೆ ಶವ ಪರೀಕ್ಷೆ ಮಾಡುವಾಗ ಅಂದು ಮಣಿಪಾಲದ ವೈದ್ಯರ ಜೊತೆಯಲ್ಲಿ ಇದ್ದ ಹೊನ್ನಾವರದ ಸ್ಥಳೀಯ ವೈದ್ಯರುಗಳ ಹೇಳಿಕೆ ಪಡೆಯಬೇಕು. ಅವರೂ ಸಹ ಬಿಜೆಪಿ ಹೇಳುತ್ತಿರುವ ಗಾಯ ಇತ್ಯಾದಿಗಳನ್ನು ನೋಡಿದ್ದಾರೆಯೆ ಎಂದು ಪೊಲೀಸರ ಸಮ್ಮುಖ ಹೇಳಿಕೆ ನೀಡಬೇಕು.

ಈ ಹೇಳಿಕೆಗಳನ್ನು ಸಂಗ್ರಹಿಸಿ ಮಣಿಪಾಲ ಆಸ್ಪತ್ರೆಗೆ ಈ ಹೇಳಿಕೆಗಳನ್ನು ಸಲ್ಲಿಸಿ ಇವುಗಳ ಆಧಾರದ ಮೇಲೆ ಸುಳ್ಳು ವರದಿ ನೀಡಿದ್ದಾರೆ ಎನ್ನಲಾದ ವೈದ್ಯರ ವಿರುದ್ಧ ತನಿಖೆಗೆ ಶಿಫಾರಸು ಮಾಡಬೇಕು. ಮತ್ತು ಹೈಕೋರ್ಟ್‌ನಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರ ವಿರುದ್ಧ ಮತ್ತು ಮಣಿಪಾಲ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಬೇಕು.

ಹೀಗಾದಾಗ ಪರೇಶ್ ಮೇಸ್ತ ಸಾವಿಗೆ ಸಂಬಂಧಿಸಿ ಆತನಿಗೆ ಚಿತ್ರ ಹಿಂಸೆ ನೀಡಲಾಗಿದೆಯೆ ಅಥವಾ ಇಲ್ಲವೆ ಎಂಬ ನೈಜ ಮಾಹಿತಿ ಹೊರಬರಲಿದೆ. ಮಣಿಪಾಲ ಆಸ್ಪತ್ರೆಯ ವಿರುದ್ಧ ಕ್ರಮವೂ ಜರುಗಲಿದೆ.

ನಿತ್ಯವೂ ಅನುಮಾನ, ವದಂತಿಗಳು ಕರಾವಳಿಯನ್ನು ಉದ್ವಿಗ್ನಗೊಳಿಸುತ್ತಿರುವುದು ಶಮನಗೊಳ್ಳಬೇಕಾದರೆ ಬಿಜೆಪಿ ಅಮಾಯಕ ಯುವಕರನ್ನು ಮುಂದಿಟ್ಟು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಬದಲು ಈ ಸಲಹೆ ಸ್ವೀಕರಿಸಿದರೆ ಗೊಂದಲಗಳು ಹೆಚ್ಚು ಬೇಗ ಬಗೆಹರಿಯುತ್ತದಲ್ಲವೆ?

ಬಿಜೆಪಿ ಮತ್ತು ಸಂಘಪರಿವಾರ ಕರೆ ನೀಡಿದ ಬಂದ್ ವೇಳೆ ನಡೆದ ಹಿಂಸೆ, ದೊಂಬಿಗೆ ಸಂಬಂಧಿಸಿ ನೂರಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿತ್ತು. ಅವರೆಲ್ಲ ಈಗ ಜೈಲಿನಲ್ಲಿದ್ದಾರೆ. ಅವರಲ್ಲಿ ಮುಕ್ಕಾಲು ಭಾಗ ಜನ ಜಿಲ್ಲೆಯ ಹಿಂದುಳಿದ ವರ್ಗಗಳ ಜನರು ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ.

ಇದನ್ನೂ ಓದಿ:
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ:
http://bit.ly/2j4ybXl
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ಪರೇಶ್ ಮೇಸ್ತ ಸಾವು: ಸಂಘಪರಿವಾರದ ಡೆಡ್ ಬಾಡಿ ಪಾಲಿಟಿಕ್ಸ್‌ನ ಮುಂದುವರಿದ ಭಾಗ: http://bit.ly/2nTaUNe
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
►►ಪರೇಶ್ ಮೇಸ್ತ ಸಾವು: ಉ.ಕ ಜಿಲ್ಲೆಯಾದ್ಯಂತ ಪ್ರತಿಭಟನೆ. ಐಜಿಪಿ ವಾಹನಕ್ಕೆ ಬೆಂಕಿ: http://bit.ly/2B5rrmo
►►ಪರೇಶ್ ಮೇಸ್ತ ಸಾವು: ಶಿರಸಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ: http://bit.ly/2BEeqkv
►►ಪರೇಶ್ ಮೇಸ್ತ ಸಾವು: ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ: http://bit.ly/2BNSKyA
►►ಪರೇಶ್ ಹತ್ಯೆ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನ: ಹೆಗಡೆ: http://bit.ly/2AfXqNn
►►ಉತ್ತರ ಕನ್ನಡ: ಪ್ರಜ್ಞಾವಂತರ ಜಿಲ್ಲೆ ಪ್ರಜ್ಞೆ ತಪ್ಪುತ್ತಿದೆಯೇ? ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ: http://bit.ly/2iVvqay
►►ಕೋಮು ಸಂಘರ್ಷದ ಬಳಿಕ ಕಾಣೆಯಾಗಿದ್ದ ಯುವಕನ ಶವ ಪತ್ತೆ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2BiWCLN
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ನಾಪತ್ತೆಯಾದ ಅಬ್ದುಲ್ ಗಫೂರ್ ಪತ್ತೆ: ನೆರವಿಗೆ ಬಂದ ಬ್ರಾಹ್ಮಣ ಕುಟುಂಬ: http://bit.ly/2Bk4VXa

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಶಿರಸಿ ಗಲಭೆಕೋರರಿಗೆ ಜಾಮೀನು: ಸಾಕಾ ಬೇಕಾ ತಪರಾಕಿ ಸಿದ್ದರಾಮಯ್ಯನವರೇ ಎಂದ ಸಚಿವ ಹೆಗಡೆ:
http://bit.ly/2j4ybXl
►►ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ': http://bit.ly/2ArqelT
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ: http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್‌ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ: http://bit.ly/2j1HffB
►►ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ: http://bit.ly/2C4CMQC
►►ಕತ್ತು ಕೊಯ್ದು ನಿವೃತ್ತ ಶಿಕ್ಷಕಿಯ ಕೊಲೆ: http://bit.ly/2iZXeKW
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP

Related Tags: Paresh Mesta Death, Honnavar, Communal Clash, BJP, Manipal Hospital, Post Mortem Report, Karavali Kanataka, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ