ಬೆಳಗೆರೆಗೆ ಮತ್ತೊಂದು ಸಂಕಷ್ಟ: 7 ವರ್ಷ ಹಿಂದಿನ ಕೇಸ್ನಲ್ಲಿ ಬಂಧನ ವಾರಂಟ್
Dec 14 2017 6:09AM
ಕರಾವಳಿ ಕರ್ನಾಟಕ ವರದಿ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದುಕೊಂಡ ಬೆನ್ನಲ್ಲೇ ‘ಹಾಯ್ ಬೆಂಗಳೂರ್’ ಸಂಪಾದಕ ರವಿ ಬೆಳಗೆರೆ ಬಂಧನಕ್ಕೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ರವಿ ಬೆಳಗೆರೆಯನ್ನು ದಸ್ತಗಿರಿ ಮಾಡಿ ಕೋರ್ಟ್ಗೆ ಹಾಜರುಪಡಿಸುವಂತೆ ಸಂಜಯನಗರ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಏಳು ವರ್ಷಗಳ ಹಿಂದೆ ಬೆಳಗೆರೆ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. '
ಹಾಯ್ ಬೆಂಗಳೂರ್’ ಪತ್ರಿಕೆಯಲ್ಲಿ ಏಳು ವರ್ಷಗಳ ಹಿಂದೆ ಮಹಿಳೆಯೊಬ್ಬರ ಬಗ್ಗೆ ವರದಿ ಪ್ರಕಟವಾಗಿತ್ತು. ವರದಿಯಿಂದಾಗಿ ತಮ್ಮ ತೇಜೋವಧೆಯಾಗಿದೆ ಎಂದು ಆರೋಪಿಸಿ ಮಹಿಳೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದಾಗ, ಬೆಳಗೆರೆಯವರು ಪ್ರತಿ ಬಾರಿಯೂ ಕೋರ್ಟ್ ವಿಚಾರಣೆಗೆ ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ರವಿ ಬೆಳಗೆರೆಯವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಂಜಯನಗರ ಪೊಲೀಸರಿಗೆ ಸೂಚಿಸಿದೆ. ಪೊಲೀಸರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಗೆರೆ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸುಪಾರಿ ಪ್ರಕರಣದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿ ಬೆಳಗೆರೆಯವರಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಲಾಗಿದ್ದನ್ನು ಸ್ಮರಿಸಬಹುದು.
ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ: http://bit.ly/2j1HffB
►►ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ: http://bit.ly/2C4CMQC
►►ಕತ್ತು ಕೊಯ್ದು ನಿವೃತ್ತ ಶಿಕ್ಷಕಿಯ ಕೊಲೆ: http://bit.ly/2iZXeKW
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
Related Tags: Ravi Belagere, Kannada News, Karavalikarnataka News