ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್‌ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ

ಕರಾವಳಿ ಕರ್ನಾಟಕ ವರದಿ

ಮುಂಬಯಿ:
ಮಹಾರಾಷ್ಟ್ರ ಮುಖ್ಯಮಂತ್ರಿ  ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಕ್ರಿಸ್ಮಸ್ ಚಾರಿಟಿ ಅಭಿಯಾನವೊಂದರಲ್ಲಿ ಭಾಗಿಯಾಗಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.

ಬಡ ಮಕ್ಕಳಿಗೆ ಕ್ರಿಸ್ಮಸ್ ಸಂದರ್ಭ ಜನರಿಂದ ಉಡುಗೊರೆಗಳನ್ನು ಸಂಗ್ರಹಿಸಿ ಬಡ ಮಕ್ಕಳ ಮುಖಗಳಲ್ಲಿ ನಗು ಮೂಡಿಸುವ ಈ ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಮತಾಂಧರಿಗೆ ಸಹಿಸಲಾಗುತ್ತಿಲ್ಲ.

ಅಮೃತಾ ಅವರು 927BIG FM 'ಬಿ ಸಾಂತಾ' ಎಂಬ ಅಭಿಯಾನಕ್ಕೆ ಚಾಲನೆ ನೀಡಿರುವುದು ಸಾಮಾಜಿಕ ಜಾಲ ತಾಣಗಳಲ್ಲಿರುವ ಮತಾಂಧರ ಕಣ್ಣು ಕೆಂಪಗಾಗಿಸಿದೆ.

'ನೀವು ಫಡ್ನವೀಸ್ ಅಥವಾ ಫೆರ್ನಾಂಡಿಸ್ ಎನ್ನುವುದನ್ನು ತಿಳಿಸಿ', 'ಮತಾಂತರಕ್ಕೆ ನಿಮ್ಮ ಬೆಂಬಲವೇ?'  ಇತ್ಯಾದಿ ಕಿರಿಕ್ ಪ್ರಶ್ನೆಗಳೊಂದಿಗೆ ಟ್ರೋಲ್ ಮಾಡಿದ್ದಾರೆ.

'ನಾನು ಹಿಂದು ಎಂದು ಹಲವರಂತೆ ಹೆಮ್ಮೆಯಿಂದ ಹೇಳುತ್ತೇನೆ. ದೇಶದ ಎಲ್ಲಾ ಹಬ್ಬಗಳನ್ನು ಆಚರಿಸಿಕೊಳ್ಳುತ್ತೇನೆ. ಅದು ನನ್ನ ವೈಯಕ್ತಿಕ ಆಯ್ಕೆ. ನಾವು ನಮ್ಮ ದೇಶದ ನಿಜವಾದ ಆತ್ಮವನ್ನು ಪ್ರತಿನಿಧಿಸುತ್ತೇವೆ. ಇದು ನಮ್ಮ ದೇಶ, ಧರ್ಮ ಮತ್ತು ಮಾನವತೆಯ ಕುರಿತಾಗಿನ ನಮ್ಮ ಪ್ರೀತಿಯನ್ನು ದುರ್ಬಲಗೊಳಿಸುವುದಿಲ್ಲ.

ಪ್ರಜ್ಞಾವಂತ ಹಿಂದೂ ನಾಗರಿಕಳಾಗಿ ನಾನು ಎಲ್ಲರೊಂದಿಗೆ ಒಂದಾಗಿ ಬಾಳಲು ಮತ್ತು ಸಾಮರಸ್ಯವನ್ನು ತರಲು ಸದಾ ಕಾಲ  ಪ್ರಯತ್ನಿಸುತ್ತೇನೆ. ಆದರೆ ಪರಾನುಭೂತಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಧಾರ್ಮಿಕ ಭಿನ್ನಾಭಿಪ್ರಾಯಗಳ ಬೆಂಕಿಯನ್ನು ಹಚ್ಚಬಾರದು ಎಂದು ನಿಮಗೆ ನೆನಪಿಸಲು ಬಯಸುತ್ತೇನೆ. ತಪ್ಪು ಪ್ರಚಾರದ ಹೊರತಾಗಿ  ನಾನು ನನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುವುದಿಲ್ಲ' ಎಂದು ಅಮೃತಾ ಅವರು ಈ ಬಗ್ಗೆ  ಟ್ವೀಟ್ ಮಾಡಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ:
http://bit.ly/2C4CMQC
►►ಕತ್ತು ಕೊಯ್ದು ನಿವೃತ್ತ ಶಿಕ್ಷಕಿಯ ಕೊಲೆ: http://bit.ly/2iZXeKW
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP
►►ಬೀಚ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ. ಮುಸ್ಲಿಂ ಯುವಕರ ಮೇಲೆ ಹಲ್ಲೆ. ಯುವತಿಯರಿಗೆ ದಿಗ್ಬಂಧನ: http://bit.ly/2C5oO0P
►►ರವಿ ಬೆಳಗೆರೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು: http://bit.ly/2z8KkmX
►►ನಾಪತ್ತೆಯಾದ ಅಬ್ದುಲ್ ಗಫೂರ್ ನೆರವಿಗೆ ಬಂದ ಬ್ರಾಹ್ಮಣ ಕುಟುಂಬ http://bit.ly/2Bk4VXa
►►ನಾಡ ಗುಡ್ಡೆಯಂಗಡಿಯಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ: http://bit.ly/2C93hFC
►►ಕುಂಭಾಶಿ ಅಯ್ಯಪ್ಪ ದೇವಸ್ಥಾನ ಬಳಿ ಕಾಡುಕೋಣ, ಜಿಂಕೆ ಕೊಂಬು!: http://bit.ly/2AxeF0J
►►ಕುಖ್ಯಾತ ದನಗಳ್ಳರ ಬಂಧನ: 1 ಕಾರು, ನಗದು ಪೊಲೀಸ್ ವಶಕ್ಕೆ: http://bit.ly/2C1qmsG
►►ಉತ್ತರ ಕನ್ನಡ: ಪ್ರಜ್ಞಾವಂತರ ಜಿಲ್ಲೆ ಪ್ರಜ್ಞೆ ತಪ್ಪುತ್ತಿದೆಯೇ? ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ: http://bit.ly/2iVvqay

Related Tags: Be Santa Campaign, 927BIG FM, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಫಡ್ನವೀಸ್? ಅಥವಾ ಫೆರ್ನಾಂಡೀಸ್? ಸಿಎಂ ಪತ್ನಿಗೆ ಪ್ರಶ್ನೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ