ಪರೇಶ್ ಹತ್ಯೆ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನ: ಹೆಗಡೆ

ಕರಾವಳಿ ಕರ್ನಾಟಕ ವರದಿ

ಬೆಳಗಾವಿ:
ಪರೇಶ್ ಮೇಸ್ತನನ್ನು ಚಿತ್ರಹಿಂಸೆ ನೀಡಿ ಹತ್ಯೆಗೈಯ್ಯಲಾಗಿದೆ. ಪರೇಶ್ ಕೊಲೆ ಮಾನವೀಯತೆಯ ಕಗ್ಗೊಲೆ. ಇದು ಮನುಷ್ಯತ್ವವನ್ನು ಮರೆತು ನಡೆಸಿದ ಹೇಯ ಕೃತ್ಯ. ಆದರೆ ಸಿದ್ದರಾಮಯ್ಯನವರ ಸರ್ಕಾರ ಪರಶ್ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಆರೋಪಿಸಿದ್ದಾರೆ.


ಪರೇಶ್ ಸಾವಿನ ಪ್ರಕರಣಕ್ಕೆಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರದ್ದು ರಾಕ್ಷಸ ಮುಖ. ಕಾಂಗ್ರೆಸ್‍ನವರು ಮೊದಲು ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನವರ ಮುಖ ರಾಕ್ಷಸ ಮುಖವೋ, ಮನುಷ್ಯನ ಮುಖವೊ ಎಂದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಸಮಾಜಘಾತುಕ ಶಕ್ತಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಮೇಸ್ತ ಸೇರಿ 20 ಹಿಂದೂ ಯುವಕರ ಹತ್ಯೆಯಾಗಿದೆ ಎಂದು ದೂರಿದ ಅವರು, ಉತ್ತರ ಕನ್ನಡ ಜಿಲ್ಲೆಯ ಜನ ಪ್ರಜ್ಞಾವಂತರಿದ್ದಾರೆ. ಅವರು ಯಾರೋ ಹೇಳಿದ ಮಾತನ್ನು ನಂಬಲ್ಲ ಎಂದು ಹೇಳಿದರು.

ಪರೇಶ್ ಹತ್ಯೆ ಪ್ರಕರಣವನ್ನು ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ಸಿಗಿಲ್ಲ. ಇದು ಅಲ್ಪಸಂಖ್ಯಾತ ಮತಗಳ ತುಷ್ಠೀಕರಣ ಎಂದು ಲೇವಡಿಯಾಡಿದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಫರಂಗಿಪೇಟೆ: ‘ಸಾಮರಸ್ಯ ನಡಿಗೆ’ ಚಾಲನೆ:
http://bit.ly/2z3jtc0
►►ವಿಭಾಜಕವೇರಿ ಕಂಟೈನರ್‌ಗೆ ಢಿಕ್ಕಿಯಾದ ಕಾರು: ತಾಯಿ-ಮಗ ದಾರುಣ ಸಾವು: http://bit.ly/2krSL3Y
►►ಪರೇಶ್ ಮೇಸ್ತ ಸಾವು: ಸಂಘಪರಿವಾರದ ಡೆಡ್ ಬಾಡಿ ಪಾಲಿಟಿಕ್ಸ್‌ನ ಮುಂದುವರಿದ ಭಾಗ: http://bit.ly/2nTaUNe
►►ಗೌರಿ ಹತ್ಯೆಯ ಹಗ್ಗ ವಿಚಾರವಾದಿಗಳ ಕಾಲಿಗೆ ಸುತ್ತಿಕೊಳ್ಳುತ್ತಿದೆ: ಸಂತೋಷ್ ಜಿ: http://bit.ly/2nPTXmP
►►ಕಾಂಡೋಮ್ ಜಾಹೀರಾತು ಹಗಲು ಪ್ರಸಾರ ಇಲ್ಲ: http://bit.ly/2nTlyn0
►►ಸುಪಾರಿ ಕೇಸ್: ರವಿ ಬೆಳಗೆರೆಗೆ ನ್ಯಾಯಾಂಗ ಬಂಧನ: http://bit.ly/2AMIl6X
►►ಸಿಸಿಬಿ ಕಚೇರಿಯಿಂದಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಫೋನ್? http://bit.ly/2Aa47As
►►ರವಿ ಬೆಳಗೆರೆ ಪೊಲೀಸ್ ಕಸ್ಟಡಿ ಇಂದು ಅಂತ್ಯ: ಜಾಮೀನಿಗೆ ಅರ್ಜಿ:  http://bit.ly/2BRFAkg

Related Tags: Paresh Mesta Death, Honnavar, Kumta, Karavali karnataka, Ananth Kumar Hegade, Siddharamaiah, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ