ಸುಪಾರಿ ಕೇಸ್: ರವಿ ಬೆಳಗೆರೆಗೆ ನ್ಯಾಯಾಂಗ ಬಂಧನ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
‘ಹಾಯ್ ಬೆಂಗಳೂರ್’ ಸಂಪಾದಕ ರವಿ ಬೆಳಗೆರೆ ಅವರಿಗೆ ಒಂದನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಸಿಸಿಬಿ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಡಿ.23ರ ವರೆಗೆ ಬೆಳಗೆರೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಜಗದೀಶ್ ಆದೇಶಿಸಿದರು. ಜೈಲಿನ ಆಸ್ಪತ್ರೆಯಲ್ಲಿಯೇ ರವಿ ಬೆಳಗೆರೆಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಧೀಶ ಜಗದೀಶ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರವಿ ಬೆಳಗೆರೆ ಪರ ನ್ಯಾಯವಾದಿ ದಿವಾಕರ್ ಅವರು ಇಂದು ಬೆಳಗೆರೆಯವರಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿರಲಿಲ್ಲ. ಅವರ ಆರೋಗ್ಯ ಸ್ಥಿತಿಗತಿಯ ಕುರಿತ ನೂರು ಪುಟ ದಾಖಲೆಗಳನ್ನು ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದೆ.

ಇನ್ನೆರಡು ದಿನಗಳಲ್ಲಿ ಎಲ್ಲ ದಾಖಲೆಗಳು ಕೈ ಸೇರಿದ ಬಳಿಕ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಕಪ್ಪು ಅಂಗಿ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ಬೆಳಗೆರೆ ಅವರ ಬಲಗಾಲು ಹೆಬ್ಬೆರಳಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ರವಿ ಬೆಳೆಗೆರೆಯನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಸಿಸಿಬಿ ಕಚೇರಿಯಿಂದಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಫೋನ್?
http://bit.ly/2Aa47As
►►ರವಿ ಬೆಳಗೆರೆ ಪೊಲೀಸ್ ಕಸ್ಟಡಿ ಇಂದು ಅಂತ್ಯ: ಜಾಮೀನಿಗೆ ಅರ್ಜಿ:  http://bit.ly/2BRFAkg
►►ನಾಳೆ ಮದುವೆಯಾಗಬೇಕಿದ್ದ ವಧು ನಾಪತ್ತೆ: ಪ್ರಿಯಕರನೊಂದಿಗೆ ಪರಾರಿಯಾದಳೆ?
 
http://bit.ly/2A8rrhQ
►►ಗುಜರಾತ್ ಚುನಾವಣೆಯಲ್ಲಿ ಪಾಕ್ ಕೈವಾಡ: ಪ್ರಧಾನಿ ಮೋದಿ ಆರೋಪ: http://bit.ly/2yZo2Uu
►►ಪತಿಯನ್ನು ಕೊಂದ ಪತ್ನಿ. ಪ್ರಿಯಕರನೆ ಪತಿ ಎಂದು ಬಿಂಬಿಸಲು ಪ್ರಿಯಕರನ ಮುಖಕ್ಕೆ ಆಸಿಡ್! http://bit.ly/2ASuFt2
►►ಮಂಗಳೂರಿನಲ್ಲಿ ಗುಂಡಿನ ದಾಳಿ: ಓರ್ವನಿಗೆ ಗಾಯ: http://bit.ly/2kD6sAW
►►ಪರೇಶ್ ಮೇಸ್ತ ಸಾವು: ಸಿಎಂ ವಿರುದ್ಧ ಕರಂದ್ಲಾಜೆ ವಾಗ್ದಾಳಿ: http://bit.ly/2BNSKyA
►►ಕೋಮು ಸಂಘರ್ಷದ ಬಳಿಕ ಕಾಣೆಯಾಗಿದ್ದ ಯುವಕನ ಶವ ಪತ್ತೆ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2BiWCLN
►►ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ: ಪತ್ರಕರ್ತ ರವಿ ಬೆಳಗೆರೆ ಅರೆಸ್ಟ್: http://bit.ly/2AFpNp0
►►ವಿವಾಹದ ಬಳಿಕ ಪತ್ನಿಯ ಧರ್ಮ ಬದಲಾಗದು: ಸುಪ್ರೀಂ: http://bit.ly/2BL8EJY
►►ಯಮುನಾ ಪರಿಸರ ಹಾನಿಗೆ ಆರ್ಟ್ ಆಫ್ ಲಿವಿಂಗ್ ಕಾರಣ: ಎನ್ಜಿಟಿ ತೀರ್ಪು: http://bit.ly/2nHAQeO
►►ಮನೆ ಮೇಲೆ ಉರುಳಿದ ಆಲ್ಟೋ ಕಾರು: ಸುಬ್ರಹ್ಮಣ್ಯ ಪಿಎಸ್ಐ ಪಾರು: http://bit.ly/2A0u8SS
►►ಬ್ಯಾಂಕಿನಲ್ಲಿ ಇರಿಸಿರುವ ಠೇವಣಿಗೂ ಬರಲಿದೆ ಸಂಚಕಾರ? ಬರುತ್ತಿದೆಯಂತೆ ಹೊಸ ಮಸೂದೆ!: http://bit.ly/2j6x5xW
►►ಟ್ರ್ಯಾಕ್ಟರ್-ಕಾರು ಢಿಕ್ಕಿ: ಮೂವರು ಯುವಕರು ಸಾವು: http://bit.ly/2jrUCWY
►►ಟೀಕೆ: ಮಣಿಶಂಕರ್ ಅಯ್ಯರ್ ಕಾಂಗ್ರೆಸ್ನಿಂದ ಸಸ್ಪೆಂಡ್: http://bit.ly/2nI6Oau

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ