ಸಿಸಿಬಿ ಕಚೇರಿಯಿಂದಲೇ ಸುನಿಲ್ ಹೆಗ್ಗರವಳ್ಳಿಗೆ ಬೆಳಗೆರೆ ಫೋನ್?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು: ಸಿಸಿಬಿ
ಕಚೇರಿಯಿಂದಲೇ ರವಿ ಬೆಳಗೆರೆ ಅವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿರುವ ಕುತೂಹಲಕಾರಿ ಸಂಗತಿ ವರದಿಯಾಗಿದೆ.

 ಭಾನುವಾರ ರಾತ್ರಿ 9.40 ಗಂಟೆಗೆ ಸುನಿಲ್ ಅವರು ಸ್ನೇಹಿತ ಮಧು ಮೊಬೈಲ್ಗೆ ಕರೆ ಸ್ವೀಕರಿಸುತ್ತಿದ್ದಂತೆ, ’ರವಿ ಅಣ್ಣ ಮಾತನಾಡುತ್ತಾರೆ’ ಎಂದು ಮೊಬೈಲ್  ರವಿ ಬೆಳಗೆರೆ ಅವರಿಗೆ ಕೊಟ್ಟಿದ್ದರು. ಈ ಸಂದರ್ಭ ರವಿ ಬೆಳಗೆರೆ “ಏಯ್ ನಿನಗೂ ಯಶೋಮತಿಗೂ ಸಂಬಂಧ ಇತ್ತು ಅಂತಾ ಟಿ.ವಿಯಲ್ಲಿ ಹೇಳಿದ್ದೀಯಾ? ಎಂದು ಕೇಳಿದ್ದರು. “ನಮ್ಮಿಬ್ಬರ ನಡುವೆ ಸಂಬಂಧ ಇತ್ತು ಎಂದು ನಾನು ಎಲ್ಲಿ ಹೇಳಿದ್ದೇನೆ” ಎಂದು ಹೇಳಿದೊಡನೆ ಕರೆ ಕಡಿತಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ರವಿಬೆಳಗೆರೆ ಅವರ ಪುತ್ರಿ ಚೇತನಾ ಬೆಳಗೆರೆಯವರು ತಮ್ಮ ತಂದೆ ರವಿ ಬೆಳಗೆರೆಯವರಿಗೆ ಜಾಮೀನು ಸಿಗದಂತೆ ಮಾಡುವ ಹುನ್ನಾರವಾಗಿ ಈ ಫೋನ್ ಕರೆ ಬಗ್ಗೆ ಪ್ರಸ್ತಾಪಿಸಲಾಗುತ್ತಿದೆ. ರವಿ ಬೆಳಗೆರೆಯವರು ಸಿಸಿಬಿ ಪೊಲೀಸ್ ವಶದಲ್ಲಿರುವಾಗ ಅವರು ಹೊರಗಿನ ವ್ಯಕ್ತಿಗೆ ಫೋನ್ ಕರೆ ಮಾಡುವುದು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಸುನಿಲ್ ಹೆಗ್ಗರವಳ್ಳಿಯಿಂದ ಕುಟುಂಬಕ್ಕೆ ರಕ್ಷಣೆಗೆ ಮನವಿ
ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು  ಭೇಟಿಯಾದ ಸುನೀಲ್ ಹೆಗ್ಗರವಳ್ಳಿ, ರವಿ ಬೆಳಗೆರೆ ಅವರಿಗೆ ಶಶಿಧರ್ನಂಥ ಹಲವು ವ್ಯಕ್ತಿಗಳ ಜತೆ ನಂಟಿದೆ. ಆದ್ದರಿಂದ ನನ್ನ ಜೀವಕ್ಕೆ ಭದ್ರತೆ ಬೇಕು. ನನ್ನ ಹೆಂಡತಿ ಸುಚಿತಾ ಹಾಗೂ ಎಂಟು ವರ್ಷದ ಮಗ ಸೂರ್ಯನ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಕೂಡಲೇ ಡಿಸಿಪಿಗೆ ಕರೆ ಮಾಡಿದ ಕಮಿಷನರ್, ಸುನೀಲ್ ಹೆಗ್ಗರವಳ್ಳಿ  ಮನೆ ಹತ್ತಿರ ಭದ್ರತೆಗೆ ಕಾನ್ಸ್ಟೆಬಲ್ಗಳನ್ನು ನಿಯೋಜಿಸಿ ಎಂದು ಸೂಚನೆ ಕೊಟ್ಟಿದ್ದಾರೆ.  ಗನ್ಮ್ಯಾನ್ ಒದಗಿಸುವ ಸಂಬಂಧ ವಿವಿಐಪಿ ಭದ್ರತಾ ವಿಭಾಗದ ಐಜಿಪಿ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಹೆಗ್ಗರವಳ್ಳಿ ತಿಳಿಸಿದ್ದಾರೆ.

ಕಾಲಿನ ಗಾಯದ ನೋವಿಂದ ನಿದ್ದೆ ಮಾಡಲಾಗದ ರವಿ ಬೆಳಗೆರೆ
ಶನಿವಾರ ರಾತ್ರಿ ರವಿ ಬೆಳಗೆರೆಯವರನ್ನು ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಸ್ಟ್ರೆಚ್ಚರ್ ತಗುಲಿ ಕಾಲುಗಳಿಗೆ ಗಾಯವಾಯಿತ್ತು.  ಒಂದು ಕಾಲಿಗೆ ಮಾತ್ರ ಬ್ಯಾಂಡೇಜ್ ಹಾಕಿದ ವೈದ್ಯರು, ಮತ್ತೊಂದಕ್ಕೆ ಚಿಕಿತ್ಸೆಯನ್ನೇ ನೀಡಲಿಲ್ಲ. ಈಗ ಆ ಕಾಲು ಊದಿಕೊಂಡಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿ, ವೈದ್ಯರು ಕಾಲನ್ನೇ ತೆಗೆಯಬೇಕು ಎಂದರೆ ಏನು ಮಾಡಬೇಕು? ಈ ರೀತಿ ನನ್ನನ್ನು ನೋಡಿಕೊಳ್ಳುತ್ತಿರುವುದು ಸರಿಯೇ ಎಂದು ಬೆಳಗೆರೆ ಅವರು ಸಿಸಿಬಿ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಕಾಲಿನ ಗಾಯದ ನೋವಿನಿಂದ ಭಾನುವಾರ ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗದೆ ರವಿ ಬೆಳಗೆರೆ ಒದ್ದಾಡಿದರು ಎನ್ನಲಾಗಿದೆ.

ರವಿ ಬೆಳಗೆರೆ ಕಸ್ಟಡಿ ಅವಧಿ ಮುಕ್ತಾಯ
ಸಹೋದ್ಯೋಗಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ‘ಹಾಯ್ ಬೆಂಗಳೂರ್’ ಸಂಪಾದಕ ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗುತ್ತಿದೆ.  ಬಂಧನಕ್ಕೆ ಸಂಬಂಧಪಟ್ಟ ಕೆಲ  ದಾಖಲೆಗಳು ಇಂದು ಸಂಜೆ ವೇಳೆಗೆ ಕೈ ಸೇರಿದರೆ ಜಾಮೀನಿಗೆ ಅರ್ಜಿಸಲ್ಲಿಸಲಾಗುವುದು ಎಂದು ರವಿ ಬೆಳಗೆರೆ ಪರ ನ್ಯಾಯವಾದಿ  ದಿವಾಕರ್ ತಿಳಿಸಿದ್ದಾರೆ.
ರವಿ ಬೆಳಗೆರೆ ಅವರನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಶಾರ್ಪ್ ಶೂಟರ್ ಶಶಿಧರ್ ಮುಂಡೆವಾಡಿಯ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಆ ವಿಡಿಯೊ  ಹೇಳಿಕೆ ಹಾಗೂ ಮೊಬೈಲ್ ಕರೆ ವಿವರ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ.ಸುಪಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿ ಬೆಳಗೆರೆಯವರಿಂದ ಹೆಚ್ಚಿನ ಮಾಹಿತಿ ಸಿಸಿಬಿ ಪೊಲೀಸರಿಗೆ ಇದುವರೆಗಿನ ತನಿಖೆಯಲ್ಲಿ ಲಭ್ಯವಾಗಿಲ್ಲ. ಬೆಳಗೆರೆಯವರು ಸಿಸಿಬಿ ಪೊಲೀಸರ ಹೆಚ್ಚಿನ ಪ್ರಶ್ನೆಗಳಿಗೆ ಸ್ಪಂದಿಸಿದ್ದರೂ ಸುಪಾರಿ ಕೊಟ್ಟಿದ್ದು ಏಕೆ ಎಂದು ಕೇಳಿದ ಸಂದರ್ಭಗಳಲ್ಲಿ ಮೌನ ತಾಳುತ್ತಿದ್ದರು.
ಬೆಳಗೆರೆ ಅವರ ಕಸ್ಟಡಿ ಅವಧಿ ವಿಸ್ತರಿಸುವಂತೆ ಕೋರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ರವಿ ಬೆಳಗೆರೆ ಪೊಲೀಸ್ ಕಸ್ಟಡಿ ಇಂದು ಅಂತ್ಯ: ಜಾಮೀನಿಗೆ ಅರ್ಜಿ: 
http://bit.ly/2BRFAkg
►►ನಾಳೆ ಮದುವೆಯಾಗಬೇಕಿದ್ದ ವಧು ನಾಪತ್ತೆ: ಪ್ರಿಯಕರನೊಂದಿಗೆ ಪರಾರಿಯಾದಳೆ?
 
http://bit.ly/2A8rrhQ
►►ಗುಜರಾತ್ ಚುನಾವಣೆಯಲ್ಲಿ ಪಾಕ್ ಕೈವಾಡ: ಪ್ರಧಾನಿ ಮೋದಿ ಆರೋಪ: http://bit.ly/2yZo2Uu
►►ಪತಿಯನ್ನು ಕೊಂದ ಪತ್ನಿ. ಪ್ರಿಯಕರನೆ ಪತಿ ಎಂದು ಬಿಂಬಿಸಲು ಪ್ರಿಯಕರನ ಮುಖಕ್ಕೆ ಆಸಿಡ್! http://bit.ly/2ASuFt2
►►ಮಂಗಳೂರಿನಲ್ಲಿ ಗುಂಡಿನ ದಾಳಿ: ಓರ್ವನಿಗೆ ಗಾಯ: http://bit.ly/2kD6sAW
►►ಪರೇಶ್ ಮೇಸ್ತ ಸಾವು: ಸಿಎಂ ವಿರುದ್ಧ ಕರಂದ್ಲಾಜೆ ವಾಗ್ದಾಳಿ: http://bit.ly/2BNSKyA
►►ಕೋಮು ಸಂಘರ್ಷದ ಬಳಿಕ ಕಾಣೆಯಾಗಿದ್ದ ಯುವಕನ ಶವ ಪತ್ತೆ. ಸ್ಥಳದಲ್ಲಿ ಉದ್ವಿಗ್ನತೆ: http://bit.ly/2BiWCLN
►►ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ: ಪತ್ರಕರ್ತ ರವಿ ಬೆಳಗೆರೆ ಅರೆಸ್ಟ್: http://bit.ly/2AFpNp0
►►ವಿವಾಹದ ಬಳಿಕ ಪತ್ನಿಯ ಧರ್ಮ ಬದಲಾಗದು: ಸುಪ್ರೀಂ: http://bit.ly/2BL8EJY
►►ಯಮುನಾ ಪರಿಸರ ಹಾನಿಗೆ ಆರ್ಟ್ ಆಫ್ ಲಿವಿಂಗ್ ಕಾರಣ: ಎನ್‌ಜಿಟಿ ತೀರ್ಪು: http://bit.ly/2nHAQeO
►►ಮನೆ ಮೇಲೆ ಉರುಳಿದ ಆಲ್ಟೋ ಕಾರು: ಸುಬ್ರಹ್ಮಣ್ಯ ಪಿಎಸ್ಐ ಪಾರು: http://bit.ly/2A0u8SS
►►ಬ್ಯಾಂಕಿನಲ್ಲಿ ಇರಿಸಿರುವ ಠೇವಣಿಗೂ ಬರಲಿದೆ ಸಂಚಕಾರ? ಬರುತ್ತಿದೆಯಂತೆ ಹೊಸ ಮಸೂದೆ!: http://bit.ly/2j6x5xW
►►ಟ್ರ್ಯಾಕ್ಟರ್-ಕಾರು ಢಿಕ್ಕಿ: ಮೂವರು ಯುವಕರು ಸಾವು: http://bit.ly/2jrUCWY
ಟೀಕೆ: ಮಣಿಶಂಕರ್ ಅಯ್ಯರ್ ಕಾಂಗ್ರೆಸ್‌ನಿಂದ ಸಸ್ಪೆಂಡ್: http://bit.ly/2nI6Oau

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ