ಡಿಸೆಂಬರ್ 9 ರಂದು ‘ದೋನ್ ಶಿಂಗಾಂ’ ಕೊಂಕಣಿ ನಾಟಕ
‘ನಮಾನ್ ಬಾಳೊಕ್ ಜೆಜು’ ಸಂಪಾದಕ, ಯುವ ಕವಿ, ಜೊ.ಸಿ.ಸಿದ್ದಕಟ್ಟೆ ವಿರಚಿತ ಏಳನೇ ಕೊಂಕಣಿ ನಾಟಕ ‘ದೋನ್ ಶಿಂಗಾ’ಪ್ರದರ್ಶನಗೊಳ್ಳಲಿದೆ.

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಕವಿ, ‘ನಮಾನ್ ಬಾಳೊಕ್ ಜೆಜು’ ಸಂಪಾದಕ ಜೊ.ಸಿ.ಸಿದ್ದಕಟ್ಟೆ ವಿರಚಿತ ಏಳನೇ ಕೊಂಕಣಿ ನಾಟಕ ‘ದೋನ್ ಶಿಂಗಾ’ಡಿಸೆಂಬರ್ 9, ಶನಿವಾರ ಸಂಜೆ 6 ಗಂಟೆಗೆ ಬಿಕರ್ನಕಟ್ಟೆ, ಕಾರ್ಮೆಲ್ ಹಿಲ್ ನಲ್ಲಿ ಜರುಗಲಿರುವ ‘ಕಾರ್ಮೆಲ್ ಡೇ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿದೆ.

ಬಾಲ ಯೇಸುವಿನ ಪುಣ್ಯಕ್ಷೇತ್ರವನ್ನು ಕಾರ್ಮೆಲ್ ಗುರುಗಳು ನಡೆಸುತ್ತಿದ್ದು, ಅಲ್ಲೇ ವಾಸಿಸುವ ದೈವಶಾಸ್ತ್ರ ವಿಧ್ಯಾರ್ಥಿಗಳು ಅಂತೆಯೇ ಗುರು ಅಭ್ಯರ್ಥಿಗಳು ‘ಕಾರ್ಮೆಲ್ ಡೇ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕ್ಲ್ಯಾನ್ವಿನ್ ಫೆರ್ನಾಂಡಿಸ್, ಕಲಾಕುಲ್ ಇವರ ನಿರ್ದೇಶನದಲ್ಲಿ ನಾಟಕವನ್ನು ಪ್ರದರ್ಶಿಸಲಿರುವರು.

ನಾಟಕ ನಿರ್ದೇಶಕನಾಗಿ ಮೊತ್ತಮೊದಲ ಬಾರಿಗೆ ಕ್ಲ್ಯಾನ್ವಿನ್ ಫೆರ್ನಾಂಡಿಸ್ ತನ್ನ ಪ್ರತಿಭೆಯನ್ನು ಈ ನಾಟಕದಲ್ಲಿ ಧಾರೆಯೆರೆದಿದ್ದಾರೆ. ಇವರು ಕಲಾಕುಲ್, ಥಿಯೆಟರ್ ರಿಪಾರ್ಟರಿಯಲ್ಲಿ ಕೊಂಕಣಿ ನಾಟಕ ನಿರ್ದೇಶಕರಾದ ಕ್ರಿಸ್ಟೋಫರ್ ನೀನಾಸಂ ಇವರ ಗರಡಿಯಲ್ಲಿ ಪಳಗಿದವರು. ಅನೇಕ ನಾಟಕ ಮತ್ತು ಕೆಲವು ಕೊಂಕಣಿ ಸಿನೆಮಾಗಳಲ್ಲಿ ಕೂಡಾ ಮಿಂಚಿದ್ದಾರೆ.

‘ಕಾರ್ಮೆಲ್ ಕಲಾಕಾರ್’ ಮಂಗ್ಳುರ್ ಇವರು ಈ ನಾಟಕವನ್ನು ಸಾದರಪಡಿಸುವರು.

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, , ‘ನಮಾನ್ ಬಾಳೊಕ್ ಜೆಜು’ ಸಂಪಾದಕ, ಕವಿ ಜೊ.ಸಿ.ಸಿದ್ದಕಟ್ಟೆ, ಕೊಂಕಣಿ ನಾಟಕ, ‘ದೋನ್ ಶಿಂಗಾ’, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ