ಗಣೇಶಪೇಟೆ ಪಾಕಿಸ್ತಾನಕ್ಕೆ ಹೋಲಿಕೆ: ಮೌಲ್ವಿ ಬಂಧನ

ಕರಾವಳಿ ಕರ್ನಾಟಕ ವರದಿ

ಹುಬ್ಬಳ್ಳಿ:
ಹುಬ್ಬಳ್ಳಿಯ ಗಣೇಶ ಪೇಟೆ ಪಾಕಿಸ್ತಾನದಂತಿದೆ ಎಂಬ ಹೇಳಿಕೆ ನೀಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ಕನೇ ಜೆಎಂಎಫ್ಸಿ ನ್ಯಾಯಾಧೀಶೆ ದೀಪ್ತಿ ನಾಡಗೌಡ ಅವರೆದುರು ಖೈರಾತಿಯನ್ನು ಹಾಜರುಪಡಿಸಿದಾಗ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿ.2 ರಂದು ಈದ್  ಹಬ್ಬ ಸಂದರ್ಭ ಗಣೇಶಪೇಟೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೌಲ್ವಿ ಗಣೇಶ ಪೇಟೆಯನ್ನು ಅಧಿಕಾರಿಗಳ ಎದುರೇ ಪಾಕಿಸ್ತಾನಕ್ಕೆ ಹೋಲಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. 

ಪಾಕಿಸ್ತಾನ ನೋಡಬೇಕೆಂದರೆ, ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಗಣೇಶಪೇಟೆ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಹೇಳಿದ್ದರು.

ನಾವು ಒಗ್ಗಟ್ಟಿನಿಂದ ಎದೆ ಸೆಟೆಸಿ ನಿಂತರೆ ಯಾರೂ ನಮ್ಮ ತಂಟೆಗೆ ಬರುವುದಿಲ್ಲ ಎಂದಿದ್ದಾರೆ.

ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ ಖಾನ್ ಹಾಗೂ ಶಹರ ಠಾಣೆ ಇನ್ಸ್‌ಪೆಕ್ಟರ್ ಶಿವಾನಂದ ಚಲವಾದಿ ಅವರು ಈ ಸಂದರ್ಭದಲ್ಲಿ ವೇದಿಕೆ ಮೇಲೆ ಇದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜನಾಕ್ರೋಶ ಭುಗಿಲೆದ್ದಿತ್ತು.

ಎಸಿಪಿ ದಾವೂದ್ ಖಾನ್ ಅವರು ಸ್ವತ: ಮೌಲ್ವಿ ವಿರುದ್ಧ ಶಾಂತಿ ಭಂಗ ಮತ್ತು ಪ್ರಚೋದನಾತ್ಮಕ ಹೇಳಿಕೆ ಪ್ರಕರಣ ದಾಖಲಿಸಿದ್ದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಉತ್ತರ ಪ್ರದೇಶ: ಠೇವಣಿ ಕಳೆದುಕೊಂಡಿದ್ದಾರೆ 50 ಶೇಕಡಾ ಬಿಜೆಪಿ ಅಭ್ಯರ್ಥಿಗಳು:
http://bit.ly/2k3o7he
►►ಬಾಬರಿ ಮಸೀದಿ ಬೀಳುವಾಗ ಸಂಭ್ರಮಿಸಿದ್ದಕ್ಕೆ ಒಬ್ಬನಿಗೆ ಕಪಾಳಕ್ಕೆ ಹೊಡೆದಿದ್ದೆ: ಪೇಜಾವರ ಸ್ವಾಮಿ: http://bit.ly/2nzXq8Z
►►ಗುಜರಾತ್ ಚುನಾವಣೆ: ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಗೆ ಅಧಿಕಾರ: http://bit.ly/2k4f5kn
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ಬಸ್-ಕಂಟೈನರ್ ಮುಖಾಮುಖಿ ಢಿಕ್ಕಿ: ಮಹಿಳೆ ಮೃತ್ಯು: http://bit.ly/2BFlTf6
►►ಪ್ರಚಾರಕ್ಕೆ ಮೋದಿ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ: http://bit.ly/2ivkmRr
►►ಪತ್ರಕರ್ತ ರವಿ ಬೆಳಗೆರೆಗೆ ಶಿಕ್ಷೆ ಜಾರಿಗೆ ಹೈಕೋರ್ಟ್ ತಡೆ: http://bit.ly/2B4G9L6
►►ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು: ಸಿದ್ದರಾಮಯ್ಯ: http://bit.ly/2nzI9VC
►►ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?: http://bit.ly/2jj8inh
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ: http://bit.ly/2BCCiB4

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಗಣೇಶಪೇಟೆ ಪಾಕಿಸ್ತಾನಕ್ಕೆ ಹೋಲಿಕೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ