‘ಹಸಿರು ಸಪ್ತಾಹ ಅಭಿಯಾನ’ದ ಇಚ್ಛಾಶಕ್ತಿ ಎಲ್ಲರಲ್ಲಿರಲಿ’: ಪರಿಸರವಾದಿ ಜೀತ್ ಮಿಲನ್
ಪರಿಸರ ರಕ್ಷಣೆಯ ಮಾತುಗಳು ಕೃತಿಯಲ್ಲಿ ಕಂಡುಬರುವುದಿಲ್ಲ ಎಂದು ‘ನಮಾನ್ ಬಾಳೊಕ್ ಜೆಜು’ ಮಾಸಿಕದ ‘ವರ್ಷದ ವ್ಯಕ್ತಿ’ ಪುರಸ್ಕೃತ ಜೀತ್ ರೋಚ್ ವಿಷಾದ.

ಕರಾವಳಿ ಕರ್ನಾಟಕ ವರದಿ

ಮಂಗಳೂರು:
“ಪ್ರತಿ 6 ಜನರಿಗೆ ಉಸಿರಾಟಕ್ಕೆ ಒಂದು ಬೃಹತ್ ಮರ ಬೇಕು. ಮರ ನೆಡುವ ಕಾರ್ಯಕ್ಕಿಂತ ಕಡಿಯುವ ಕಾರ್ಯ ಮೇಲುಗೈ ಸಾಧಿಸಿದೆ. ಇದರ ಕುರಿತು ಮಾತುಗಳು ಕೇಳಿ ಬಂದರೂ ಕೃತಿಯಲ್ಲಿ ಪರಿವರ್ತನೆಯಾಗದಿರುವುದು ವಿಷಾದನೀಯ” ಎಂದು ನಮಾನ್ ಬಾಳೊಕ್ ಜೆಜು – ಗೊಡ್ವಿನ್ ಸುಶ್ಮಾ ರಸ್ಕಿನ್ಹಾ ಪ್ರಾಯೋಜಕತ್ವದ 2017ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಸ್ವೀಕರಿಸಿ ಪರಿಸರವಾದಿ ಜೀತ್ ಮಿಲನ್ ರವರು ನುಡಿದರು.

“ಬಡವರ, ಧೀನ ದಲಿತರ ಸೇವೆಯಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತಿರುವ ಕ್ರೈಸ್ತ ಧರ್ಮಸಭೆ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಕೂಡ ಕಾಳಜಿ ವಹಿಸಿ, ಕೇವಲ ವನಮಹೋತ್ಸವ ಆಚರಿಸದೆ ಇಡೀ ಒಂದು ವಾರ ಮರ ನೆಡುವ ಅಭಿಯಾನವನ್ನು ಕೈಗೊಳ್ಳಲು ಯುವಜನತೆಯನ್ನು ಪ್ರೇರೆಪಿಸುವಂತಾಗಬೇಕು”ಎಂದರು.

‘ಮಂಗಳೂರು ಗ್ರೀನ್ ಬ್ರಿಗೇಡ್’ ಸ್ಥಾಪಕ
ಪ್ರಕೃತಿ ಸಂರಕ್ಷಣೆಯನ್ನು ತನ್ನ ದೈನಂದಿನ ಚಟುವಟಿಕೆಯ ಭಾಗವಾಗಿ ಪರಿಗಣಿಸಿ ಪ್ರತಿ ವರ್ಷ ಗಿಡನೆಟ್ಟು ಪೋಷಿಸುವಲ್ಲಿ ಅಪಾರ ಶ್ರಮ ವಹಿಸುವ ಪರಿಸರವಾದಿ ಜೀತ್ ಮಿಲನ್ ರೋಚ್ ‘ಮಂಗಳೂರು ಗ್ರೀನ್ ಬ್ರಿಗೇಡ್ ಸ್ಥಾಪಕರು.

‘ಹಸಿರು ಮಂಗಳೂರು’ ಎಂಬ ಮಂತ್ರ ಜಪಿಸುತ್ತಾ ತಿರಸ್ಕೃತ ಜಾಗಗಳಲ್ಲಿ ಗಿಡ ನೆಟ್ಟು ಹಸಿರುಯುಕ್ತ ಪರಿಸರ ಮಾಡುವಲ್ಲಿ ಪಣತೊಟ್ಟಿದ್ದಾರೆ. ನಂದಿಗುಡ್ಡ ಸ್ಮಶಾನ ಒಳಗೊಡಂತೆ ಸುಮಾರು 12 ಸ್ಮಶಾನಗಳಲ್ಲಿ, ಪಚ್ಚನಾಡಿ ಡಂಪ್ ಯಾರ್ಡ್, ಹೈವೆ, ರೈಲ್ವೇ ಪರಿಸರ ಹಾಗೂ ಇನ್ನಿತರೆ ಜಾಗಗಳಲ್ಲಿ ಗಿಡ ಮರ ನೆಟ್ಟು ಪಕ್ಷಿಗಳಿಗೂ ಆಸರೆಯನ್ನಿತ್ತಿದ್ದಾರೆ.

2004ರಿಂದ ಇಂದಿನವರೆಗೆ ಜೀತ್ ನೆಟ್ಟ ಗಿಡಗಳ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತಿದೆ. ತ್ಯಾಜ್ಯ ವಸ್ತುಗಳ ವಿಲೇವಾರಿ ಬಗ್ಗೆಯೂ ಸಾಕಷ್ಟು ಯೋಜನೆಗಳನ್ನು ರೂಪಿಸಿ ಸರ್ಕಾರದ ಧನಸಹಾಯವನ್ನು ಪಡೆಯದೆ ತಾವೇ ಸ್ವತ: ಜಾರಿಗೊಳಿಸುತ್ತಿದ್ದಾರೆ.

ಸಾಧಕರನ್ನು ಗುರುತಿಸಿದ ವಾರ್ಷಿಕೋತ್ಸವ
ನಮಾನ್ ಬಾಳೊಕ್ ಜೆಜು, ಕೊಂಕಣಿ ಮಾಸಿಕ ತನ್ನ 9ನೇ ವಾರ್ಶಿಕ ದಿನವನ್ನು ಡಿಸೆಂಬರ್ 03, ಭಾನುವಾರ ಬಿಕರ್ನಕಟ್ಟೆಯ ಬಾಲಯೇಸು ಪುಣ್ಯಕ್ಶೇತ್ರದ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯವನ್ನೂ ಕೈಗೊಂಡಿತ್ತು.

ಜೀತ್ ಮಿಲನ್ರಿಗೆ, ಎನ್ಬಿಜೆ-ಗೊಡ್ವಿನ್ ಸುಶ್ಮಾ ರಸ್ಕಿನ್ಹಾ ಪ್ರಾಯೋಜಿತ ವರ್ಷದ ವ್ಯಕ್ತಿ ಪ್ರಶಸ್ತಿ ಹಸ್ತಾಂತರಿಸುವ ಜತೆಗೆ ಕೊಂಕಣಿ ನಾಟಕ ಕ್ಷೇತ್ರದಲ್ಲಿ ಸಾಧನೆಗೈದ ಫ್ರಿವಿಟಾ ಡಿ ಸೋಜಾರವರಿಗೆ ಎನ್ಬಿಜೆ-ಅಮೂಲ್ಯ ಆಕಾಶ್ ಕಲಾ ಪ್ರಶಸ್ತಿ 2017’ ಮತ್ತು ಕರಾಟೆ ಕ್ಷೇತ್ರದಲ್ಲಿ ಅತೀ ಕಡಿಮೆ ವರ್ಶಗಳಲ್ಲಿ ಅತೀ ಹೆಚ್ಚು ಸ್ಪರ್ದೆಗಳಲ್ಲಿ ಭಾಗವಹಿಸಿ ವಿಜೇತರಾದ ನಿವಿಟಾ ಕಾರ್ಡೊಜಾರವರಿಗೆ ‘ಎನ್ಬಿಜೆ-ಅಮೂಲ್ಯ ಆಕಾಶ್ ಕಲಾ ಪ್ರಶಸ್ತಿ 2017’ ಹಸ್ತಾಂತರಿಸಿ ಗೌರವಿಸಲಾಯಿತು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಬಾಬರಿ ಮಸೀದಿ ಬೀಳುವಾಗ ಸಂಭ್ರಮಿಸಿದ್ದಕ್ಕೆ ಒಬ್ಬನಿಗೆ ಕಪಾಳಕ್ಕೆ ಹೊಡೆದಿದ್ದೆ: ಪೇಜಾವರ ಸ್ವಾಮಿ:
http://bit.ly/2nzXq8Z
►►ಗುಜರಾತ್ ಚುನಾವಣೆ: ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಗೆ ಅಧಿಕಾರ: http://bit.ly/2k4f5kn
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ಬಸ್-ಕಂಟೈನರ್ ಮುಖಾಮುಖಿ ಢಿಕ್ಕಿ: ಮಹಿಳೆ ಮೃತ್ಯು: http://bit.ly/2BFlTf6
►►ಪ್ರಚಾರಕ್ಕೆ ಮೋದಿ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ: http://bit.ly/2ivkmRr
►►ಪತ್ರಕರ್ತ ರವಿ ಬೆಳಗೆರೆಗೆ ಶಿಕ್ಷೆ ಜಾರಿಗೆ ಹೈಕೋರ್ಟ್ ತಡೆ: http://bit.ly/2B4G9L6
►►ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು: ಸಿದ್ದರಾಮಯ್ಯ: http://bit.ly/2nzI9VC
►►ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?: http://bit.ly/2jj8inh
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ: http://bit.ly/2BCCiB4

Related Tags: 9th Anniversary of ‘Naman Ballok Jesu’, Fr Jocy Siddakatte, Godwin Sushma Rasquinha family , Person of the Year, Jeeth Milan Roche. Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ