ಬಾಬರಿ ಮಸೀದಿ ಬೀಳುವಾಗ ಸಂಭ್ರಮಿಸಿದ್ದಕ್ಕೆ ಒಬ್ಬನಿಗೆ ಕಪಾಳಕ್ಕೆ ಹೊಡೆದಿದ್ದೆ: ಪೇಜಾವರ ಸ್ವಾಮಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಬಾಬರಿ ಮಸೀದಿ ಧ್ವಂಸ ಮಾಡುವಂತೆ ಎಲ್ಲಿಯೂ ಯಾರಿಗೂ ಪ್ರಚೋದನೆ ನೀಡಿಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಮಾಡದಂತೆ ಮೈಕಿನಲ್ಲಿ ಮೂರು ಬಾರಿ ಹಿಂದಿ ಭಾಷೆಯಲ್ಲಿ ಕೂಗಿ ಹೇಳಿದ್ದೆ. ಆದರೂ ಕಾರ್ಯಕರ್ತರು ಧ್ವಂಸ ಮಾಡಿದ್ದರು. ಮಸೀದಿಯ ಒಂದು ಗುಮ್ಮಟ ಕೆಳಗೆ ಬೀಳುವಾಗ ನನ್ನ ಪಕ್ಕದಲ್ಲೇ ನಿಂತಿದ್ದ ಒಬ್ಬ ಜೋರಾಗಿ ನಕ್ಕು ಸಂಭ್ರಮಿದಾಗ ನಾನು ಕೋಪಗೊಂಡು ಕಪಾಳಕ್ಕೆ ಬಾರಿಸಿದ್ದೆ.

ಸ್ವಾಮೀಜಿಯಾಗಿ ನಾನು ಹೊಡೆಯಬಾರದಿತ್ತು. ಆದರೆ ನಾನು ಧ್ವಂಸಕ್ಕೆ ಆದ್ಯತೆ ನೀಡಿಲ್ಲ. ನನ್ನ ಪಾಲಿಗೆ ಅದು ವಿಭೃಂಜಣೆ ಆಗಿರಲಿಲ್ಲ ಎಂದು ಪೇಜಾವರ ಶ್ರೀ ಬಾಬರಿ ಮಸೀದಿ ಧ್ವಂಸದಲ್ಲಿ ತನ್ನ ಕೈವಾಡ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಶಾಂತಿ ಕಾಪಾಡಿ, ಮಸೀದಿ ಮುಟ್ಟಬೇಡಿ ಎಂದು ಪದೇ ಪದೇ ಹೇಳಿದ್ದರೂ ಸೇರಿದ ಲಕ್ಷಾಂತರ ಕಾರ್ಯಕರ್ತರು ಕೇಳಲಿಲ್ಲ. ಮಸೀದಿಯ ಗುಮ್ಮಟದ ಮೇಲಿದ್ದ ಕಾರ್ಯಕರ್ತರನ್ನು ಕೆಳಗೆ ಇಳಿಯುವಂತೆ ತಡೆಯಲು ಓಡಿ ಹೋಗಿ ಕೆಳಗೆ ಇಳಿಯಲು ಹೇಳಿದೆ.

ಏನಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ನ ಅಶೋಕ್ ಸಿಂಘಾಲ್ ಅವರಲ್ಲಿ ನಾನು ಕೇಳಿದೆ. ಅವರು ಕೂಡಾ ತಮಗೆ ಗೊತ್ತಾಗುತ್ತಿಲ್ಲ ಎಂದಿದ್ದರು.


ನಾವು ಕಟ್ಟಡ ಧ್ವಂಸ ಮಾಡುವ ಯಾವುದೇ ಪೂರ್ವ ಯೋಜನೆ ಮಾಡಿ ಹೋಗಿರಲಿಲ್ಲ. ನಾನು ಪದೇ ಪದೇ ಧ್ವಂಸ ಮಾಡಬೇಡಿ ಎಂದು ಕಾರ್ಯಕರ್ತರನ್ನು ತಡೆದಿದ್ದೇನೆಯೇ ಹೊರತು ಪ್ರಚೋದನೆ ನೀಡಿಲ್ಲ ಎಂದು ಸುದ್ದಿಗಾರರಿಗೆ ಪೇಜಾವರ ಶ್ರೀ ಹೇಳಿದ್ದಾರೆ.

1992, ಡಿಸೆಂಬರ್ 6 ರಂದು ಏನಾಗುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹಿಂದಿನ ದಿನ ರಾತ್ರಿ ಸರ್ವೋಚ್ಛ ಸಮಿತಿ ಸಭೆ ನಡೆಯಿತು. ಅದರಲ್ಲಿ ಸಾಂಕೇತಿಕ ಕರಸೇವೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಸಾಂಕೇತಿಕ ಕರಸೇವೆ ಮಾಡುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.

ಕೇವಲ ಸ್ವಚ್ಛಗೊಳಿಸುವ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿಗೆ ನಾವು ಲಿಖಿತ ಹೇಳಿಕೆ ನೀಡಿದ್ದೆವು ಎಂದು ಅಂದಿನ ಘಟನೆಗಳ ಬಗ್ಗೆ ಪೇಜಾವರ ಶ್ರೀ ಹೇಳಿಕೊಂಡಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಗುಜರಾತ್ ಚುನಾವಣೆ: ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಗೆ ಅಧಿಕಾರ:
http://bit.ly/2k4f5kn
►►ಉ.ಕ. ಜಿಲ್ಲೆಗೆ ಸಿಎಂ ಭೇಟಿ ವೇಳೆ ಹೊನ್ನಾವರದಲ್ಲಿ ಕೋಮು ಸಂಘರ್ಷ: http://bit.ly/2BIdZln
►►ಬಸ್-ಕಂಟೈನರ್ ಮುಖಾಮುಖಿ ಢಿಕ್ಕಿ: ಮಹಿಳೆ ಮೃತ್ಯು: http://bit.ly/2BFlTf6
►►ಪ್ರಚಾರಕ್ಕೆ ಮೋದಿ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ: http://bit.ly/2ivkmRr
►►ಪತ್ರಕರ್ತ ರವಿ ಬೆಳಗೆರೆಗೆ ಶಿಕ್ಷೆ ಜಾರಿಗೆ ಹೈಕೋರ್ಟ್ ತಡೆ: http://bit.ly/2B4G9L6
►►ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು: ಸಿದ್ದರಾಮಯ್ಯ: http://bit.ly/2nzI9VC
►►ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?: http://bit.ly/2jj8inh
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ: http://bit.ly/2BCCiB4

Related Tags: Pejavara Shree, Babri Masjid, Demolition, VHP, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಪೇಜಾವರ ಶ್ರೀ, ಮಸೀದಿ ಧ್ವಂಸ, ಡಿಸೆಂಬರ್6, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ