ಪ್ರಚಾರಕ್ಕೆ ಮೋದಿ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲ್ಲ: ಸಿದ್ದರಾಮಯ್ಯ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಮುಂದಿನ ಚುಣಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದರೂ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ತಾವು ಜಾತಿ-ಧರ್ಮದ ಹೆಸರಿನಲ್ಲಿ ಮತ ಕೇಳೋದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತೇವೆ. ಆದ್ದರಿಂದ ಮುಂದಿನ ಬಾರಿಯೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲ ತೀರದಲ್ಲಿರುವ ಮಯೂರವರ್ಮ ವೇದಿಕೆಯಲ್ಲಿ ಆಯೋಜಿಸಿದ್ದ 707 ಕೋಟಿ ರೂ. ವೆಚ್ಚದ ಒಟ್ಟು 67 ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಬಿಜೆಪಿಯು ಕಾಂಗ್ರೆಸ್ ಸರಕಾರದ ವಿರುದ್ಧ ದಾಖಲೆ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರಿಗೆ ತಾಕತ್ತಿದ್ದರೆ ದಾಖಲೆಯೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಇಂದು ಹತಾಶವಾಗಿದೆ. ಯಡಿಯೂರಪ್ಪ, ಅಮಿತ್ ಷಾ, ಜನಾರ್ದನ ರೆಡ್ಡಿ, ಆನಂದ ಸಿಂಗ್, ಹಾಲಪ್ಪ ಹಾಗೂ ಇನ್ನಿತರರು ಜೈಲಿಗೆ ಹೋಗಿ ಬಂದಿದ್ದಾರೆ. ಇವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ಬಿಜೆಪಿ ಪರಿವರ್ತನಾ ರ‍್ಯಾಲಿ ಮಾಡಿದೆ. ಮೊದಲು ನೀವು ಪರಿವರ್ತನೆಯಾಗಬೇಕಾಗಿದೆ. ಜನರ ನಡುವೇ ಬೆಂಕಿ ಇಡುವ, ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ ನೀವು ಮೊದಲು ಪರಿವರ್ತನೆಯಾಗಿ ಎಂದರು.

ಕಳೆದ ಐದು ವರ್ಷದಲ್ಲಿ ಜನರಿಗೆ ಕೊಟ್ಟ ಮಾತನ್ನು ನಡೆಸಿಕೊಂಡಿದ್ದೇವೆ. ಅನೇಕ ಯೋಜನೆಯ ಮೂಲಕ ಜನರಿಗೆ ತಲುಪಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಬಗ್ಗೆ ವಿರೋಧಿ ಅಲೆ ಇಲ್ಲ. ಗುಂಡ್ಲುಪೇಟೆ, ನಂಜನ್‌ಗೂಡು ಉಪ ಚುನಾವಣೆಯಲ್ಲಿ ಸೋತ ನಂತರ ಯಡಿಯೂರಪ್ಪ ಹತಾಶರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ಮಿಶನ್ 150 ಠುಸ್ ಆದ ನಂತರ ಯಡಿಯೂರಪ್ಪ, ನನ್ನನ್ನು ಬೈದು ತಿರುಗುತ್ತಿದ್ದಾರೆ ಎಂದು ಟೀಕಿಸಿದರು. ಅಧಿಕಾರದಲ್ಲಿದ್ದಾಗ ದಲಿತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಗರಿಗೆ ಈಗ ದಲಿತರ ನೆನಪಾಗಿದೆ. ಬಿಜೆಪಿಗಿಂತಲೂ ಹೆಚ್ಚು ಅಭಿವೃದ್ಧಿ ಕೆಲಸ ಕಾಂಗ್ರೆಸ್ ಮಾಡಿದೆ ಎಂದರು.ನನ್ನ ಹೆಸರಿನಲ್ಲೂ ರಾಮ ಇದೆ
ಐದು ಬಾರಿ ಲೋಕಸಭಾ ಸದಸ್ಯರಾದ ಅನಂತಕುಮಾರ ಹೆಗಡೆ ಸಾಧನೆ ಬರೀ ಸೊನ್ನೆ. ಪ್ರತಿ ಸಾರಿ ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸಿ ಗೆಲ್ಲುವ ಅನಂತಕುಮಾರ ಹೆಗಡೆ ಮಾತಿಗೆ ಜನರು ದಾರಿ ತಪ್ಪಬಾರದು. ಹನುಮ ಜಯಂತಿ ಹೆಸರಿನಲ್ಲಿ ಮೈಸೂರಿನ ಹುಣಸೂರಿಗೆ ಬಂದು ಕೋಮುವಾದ ನಡೆಸಲು ಬಂದಿದ್ದ ಅನಂತಕುಮಾರ ಹೆಗಡೆಯನ್ನು ಓಡಿಸಲಾಯಿತು. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಬಾರದು. ನನ್ನ ಹೆಸರಿನಲ್ಲಿಯೂ ರಾಮ ಇದೆ. ನಾನು ಸಹ ಹಿಂದೂ ಎಂದರು.

ಕಾಂಗ್ರೆಸ್ ಸಾಧನೆಯನ್ನು ಗಮನಿಸದ ಬಿಜೆಪಿಗರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ 5 ವರ್ಷದ ಆಡಳಿತದಲ್ಲಿ ಒಂದೇ ಒಂದು ಮೆಡಿಕಲ್ ಕಾಲೇಜು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರ 6 ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದೆ. ಆದರೆ ಸೈಕಲ್ ನೀಡಿದ್ದೇವೆ, ಸೀರೆ ನೀಡಿದ್ದೇವೆ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರದಿಂದ ಮತ್ತೇನು ಸಾಧನೆಯಾಗಿಲ್ಲ. ಬಿಜೆಪಿಯ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವುದನ್ನು ಮೊದಲು ಬಿಡಬೇಕು ಎಂದರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದರೆ ಯಾರ ಹೊಟ್ಟೆಯೂ ತುಂಬುವುದಿಲ್ಲ. ಹಿಂದಿನ ಸರಕಾರ ಇದ್ದಾಗ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಅತಿಥಿ ಶಿಕ್ಷಕರ ನೇಮಕದ ಮೂಲಕ ಕಾಂಗ್ರೆಸ್ ಸರ್ಕಾರ ಬಗೆಹರಿಸಿದೆ.

ವಿವಿಧ ಭಾಗ್ಯಗಳ ಮೂಲಕ ಮನೆ ಮನೆ ಮುಟ್ಟಿರುವ ಕಾಂಗ್ರೆಸ್ ಸರ್ಕಾರ ಜನರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಮಾಡಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಘೋಷಿಸಿತ್ತು. ಯಾವ ಉದ್ಯೋಗವನ್ನು ಸೃಷ್ಟಿಸಿಲ್ಲ. ರಾಜ್ಯ ಸರ್ಕಾರ 14 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಮಾಡಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಇರಬೇಕು. ಇದರಿಂದ ಬಡವರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ನಮ್ಮ ಸರ್ಕಾರ 6 ಮೆಡಿಕಲ್ ಕಾಲೇಜು ಸ್ಥಾಪಿಸಿ 900 ಮೆರಿಟ್ ಸೀಟ್ ನೀಡಿದೆ. ಇದಲ್ಲದೇ ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರದಿಂದಲೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಾತನಾಡಿ, ಈ ಹಿಂದಿನ ಸರ್ಕಾರಗಳು ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಜಿಎಲ್‌ಇ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಬಳಿಕ ಜಾಗದ ಸಮಸ್ಯೆ ಸೇರಿದಂತೆ ವಿವಿಧ ಕಾರಣ ನೀಡಿ ಅನೇಕ ವರ್ಷ ಕಳೆದರೂ ಕಾಲೇಜು ಸ್ಥಾಪನೆ ವಿಚಾರ ನೆನೆಗುದಿಗೆ ಬಿದ್ದಿತ್ತು.

ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಬಜೆಟ್‌ನಲ್ಲಿಯೇ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿದೆ. ಅದರಿಂದಾಗಿ ಈಗ ಭವ್ಯ ಕಟ್ಟಡ ತಲೆ ಎತ್ತಿದೆ. ಅನೇಕ ಸೇತುವೆ ಕಾಮಗಾರಿಗಳನ್ನು ಸರ್ಕಾರ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಮಂಜೂರು ಮಾಡಿಸುವ ಮೂಲಕ ಜನಪರ ಆಡಳಿತ ನೀಡಿದೆ ಎಂದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಪತ್ರಕರ್ತ ರವಿ ಬೆಳಗೆರೆಗೆ ಶಿಕ್ಷೆ ಜಾರಿಗೆ ಹೈಕೋರ್ಟ್ ತಡೆ:
http://bit.ly/2B4G9L6
►►ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು: ಸಿದ್ದರಾಮಯ್ಯ: http://bit.ly/2nzI9VC
►►ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?: http://bit.ly/2jj8inh
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ: http://bit.ly/2BCCiB4
►►ಸಿ.ಎಸ್. ದ್ವಾರಕನಾಥ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು: http://bit.ly/2AzTJTy
►►ಕೆಂಪಯ್ಯ ಸಲಹೆ ನೀಡಿದರೆ ತಪ್ಪೇನು? ಪ್ರತಾಪ ಸಿಂಹಗೆ ಸಿದ್ದರಾಮಯ್ಯ ಪ್ರಶ್ನೆ: http://bit.ly/2jkBCJR
►►ಮುಸ್ಲಿಮ್ ಯುವತಿಯರ ಡ್ಯಾನ್ಸ್‌ಗೆ ಬೆಂಬಲ ನೀಡಿದ ರೇಡಿಯೊ ಜಾಕಿಗೆ ಕೊಲೆ ಬೆದರಿಕೆ: http://bit.ly/2BCuOyc
►►ನಿತ್ಯಾನಂದ ಭಕ್ತರಿಂದ ವಿಚಾರವಾದಿ ನರೇಂದ್ರ ನಾಯಕ್‌ಗೆ ಬೆದರಿಕೆ: http://bit.ly/2iqYMxg
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್: http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees

Related Tags: Siddaramiah, Uttara Kannada, Karwar News, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ