ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?
ರಕ್ಷಣಾ ಮಂತ್ರಿ ನ್ರಿಮಲಾ ಸೀತಾರಾಮನ್ ನೌಕಾಪಡೆಯ ಉನ್ನತ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ನೌಕಾಪಡೆಯ ಉನ್ನತ ಅಧಿಕಾರಿಗಳನ್ನು ಕೂತುಕೊಳ್ಳಲು ಸಹ ಹೇಳದೆ ನಿಲ್ಲಿಸಿಯೇ ಮಾತನಾಡಿಸಿರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ರಕ್ಷಣಾ ಮಂತ್ರಿ ನೌಕಾಪಡೆಯ ಉನ್ನತ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಓಖೀ ಚಂಡಮಾರುತದ ನಂತರದ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ನಿರ್ಮಲಾ ಸೀತಾರಾಮ ಡಿಸೆಂಬರ್ 3ರಂದು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮಿಳುನಾಡಿನಲ್ಲಿ ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಜೊತೆಯಾಗಿ ತಮಿಳುನಾಡಿನಲ್ಲಿ ಒಖೀ ನಂತರದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ವೇಳೆ ಅದೇ ಕೊಠಡಿಯಲ್ಲಿ ಸಾಮಾನ್ಯ ರಾಜಕಾರಣಿಗಳು ಡಿವೈಎಸ್‌ಪಿ ಮಟ್ಟದ ಪೊಲೀಸ್ ಅಧಿಕಾರಿ ಕುಳಿತುಕೊಂಡೇ ಮಾತನಾಡುತ್ತಿದ್ದರೆ ನೌಕಾಪಡೆಯ ವೈಸ್ ಅಡ್ಮಿರಲ್‌ಗೆ ಸಮಾನರಾದ ಹುದ್ದೆಗಳಲ್ಲಿರುವ ಅಧಿಕಾರಿಗಳು ನಿಂತುಕೊಂಡೇ ಇದ್ದಾರೆ. ಈ ಫೋಟೊಗಳನ್ನು ನೋಡಿ ಟ್ವಿಟರಿಗರು ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಇಷ್ಟೊಂದು ಸುಶಿಕ್ಷಿತರಾಗಿದ್ದುಕೊಂಡು ಸಹ ಉನ್ನತ ಸೇನಾಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರ ರೀತಿಯಲ್ಲಿ ನಿಲ್ಲಿಸಿ ಮಾತನಾಡುತ್ತಿದ್ದಾರೆ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ ಇನ್ನೊಬ್ಬರು ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಗೌರವ ಇದೆ. ಆದರೆ ಈ ರೀತಿ ಸೇನಾಧಿಕಾರಿಗಳನ್ನು ಗುಮಾಸ್ತರಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿರುವುದು ಆಕ್ಷೇಪಾರ್ಹವಾಗಿದೆ ಎಂದು ಟ್ಟೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಲಾ ಸೀತಾರಾಮ ಅವರು ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೆ ಇದೇ ಒಖೀ ಚಂಡಮಾರುತದ ವೇಳೆ ನೌಕಾಪಡೆ ಅಧಿಕಾರಿಗಳ ಜೊತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆ ನಡೆಸುತ್ತಿರುವ ಫೋಟೊವನ್ನೂ ಸಹ ಕೆಲವರು ಪ್ರಕಟಿಸಿದ್ದಾರೆ.
ಈ ಫೋಟೊದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸಮಾನ ನೌಕಾಪಡೆ ಅಧಿಕಾರಿಗಳನ್ನು ಕೂರಿಸಿಕೊಂಡು ಸಭೆ ನಡೆಸುತ್ತಿದ್ದಾರೆ. ಈ ಫೋಟೊ ಜೊತೆ ತಮಿಳುನಾಡಿನಲ್ಲಿ ನಿರ್ಮಲಾ ಸೀತಾರಾಮ್ ನೌಕಾಪಡೆ ಅಧಿಕಾರಿಗಳ ಜೊತೆ ನಡೆಸಿದ ಫೋಟೊಗಳನ್ನು ಹೋಲಿಸಿ ಸೋಷಿಯಲ್ ಮೀಡಿಯಾ ನಿರ್ಮಲಾ ಸೀತಾರಾಮ್ ಕುರಿತು ಮತ್ತಷ್ಟು ರೊಚ್ಚಿಗೆದ್ದಿದೆ.

ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಮೆಂಟ್‌ಗಳನ್ನು ಗಮನಿಸಿದ ನಿರ್ಮಾಲಾ ಸೀತಾರಾಮನ್ ಈ ಕುರಿತು ಸ್ಪಷ್ಟನೆ ನೀಡಿದ್ದು ತಾನು ಸಭೆ ಆರಂಭವಾಗುವ ವೇಳೆ ಅಧಿಕಾರಿಗಳಿಗಾಗಿ ಕುರ್ಚಿ ತರಲು ಹೇಳಿದ್ದೆ. ಇದು ಸಭೆ ಆರಂಭವಾದ ಸಮಯದ ಫೋಟೊ. ನಂತರ ಅವರೆಲ್ಲ ಕೂತೇ ಇದ್ದರು' ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಈ ಸಭೆಯಲ್ಲಿ ಕೊನೆಯ ತನಕವೂ ಅಧಿಕಾರಿಗಳನ್ನು ಅಪರಾಧಿಗಳಂತೆ ನಿಲ್ಲಿಸಲಾಗಿತ್ತು ಎಂದ ಟ್ವೀಟರಿಗರು ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ:
http://bit.ly/2BCCiB4
►►ಸಿ.ಎಸ್. ದ್ವಾರಕನಾಥ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು: http://bit.ly/2AzTJTy
►►ಕೆಂಪಯ್ಯ ಸಲಹೆ ನೀಡಿದರೆ ತಪ್ಪೇನು? ಪ್ರತಾಪ ಸಿಂಹಗೆ ಸಿದ್ದರಾಮಯ್ಯ ಪ್ರಶ್ನೆ: http://bit.ly/2jkBCJR
►►ಮುಸ್ಲಿಮ್ ಯುವತಿಯರ ಡ್ಯಾನ್ಸ್‌ಗೆ ಬೆಂಬಲ ನೀಡಿದ ರೇಡಿಯೊ ಜಾಕಿಗೆ ಕೊಲೆ ಬೆದರಿಕೆ: http://bit.ly/2BCuOyc
►►ನಿತ್ಯಾನಂದ ಭಕ್ತರಿಂದ ವಿಚಾರವಾದಿ ನರೇಂದ್ರ ನಾಯಕ್‌ಗೆ ಬೆದರಿಕೆ: http://bit.ly/2iqYMxg
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್: http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees

Related Tags: Nirmala Seetharaman, Defence Minister, Okhi Cyclone, Navy, Officers, Insult, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ