ನಿತ್ಯಾನಂದ ಭಕ್ತರಿಂದ ವಿಚಾರವಾದಿ ನರೇಂದ್ರ ನಾಯಕ್‌ಗೆ ಬೆದರಿಕೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ವಿಚಾರವಾದಿ ನರೇಂದ್ರ ನಾಯಕ್ ಸ್ವಾಮಿ ನಿತ್ಯಾನಂದನ ಅದ್ಭುತ ಶಕ್ತಿಯನ್ನು ಒಂದು ಪರಸ್ಪರ ಒಪ್ಪಿಗೆಯ ಸ್ಥಳದಲ್ಲಿ ಸಾಬೀತು ಪಡಿಸುವಂತೆ ಸವಾಲೆಸೆದಿದ್ದು, ಇದಕ್ಕೆ ಪ್ರತಿಯಾಗಿ ನಿತ್ಯಾನಂದ ಭಕ್ತರಿಂದ ನರೇಂದ್ರ ನಾಯಕ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಸಂಗತಿ ವರದಿಯಾಗಿದೆ.

ನಿತ್ಯಾನಂದರ ಶಿಷ್ಯೆ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಎಂಬಾಕೆ ನರೇಂದ್ರ ನಾಯಕ್ ಅವರಿಗೆ ಅವರ ಫೇಸ್‍‌ಬುಕ್ ಪೇಜ್‌ನಲ್ಲಿ ಶಪಿಸಿದ್ದಾರೆ.

ಚಿಕಿತ್ಸೆಗಾಗಿ, ದಯಮಾಡಿ ಸ್ವಾಮಿಯ ಬಳಿಗೆ ಬನ್ನಿ, ಅದೊಂದೇ ಈ ಸಮಸ್ಯೆಗೆ ಪರಿಹಾರವಾಗಿದೆ. ನಮ್ಮ ಆಶ್ರಮವು ಬೆಂಗಳೂರಿನ ಬಿಡದಿಯಲ್ಲಿದೆ. ನಿಮಗೆ ಮಾರ್ಗದರ್ಶನ ನೀಡಲು ಹೆದ್ದಾರಿಗಳಲ್ಲಿ ಸಾಕಷ್ಟು ಫಲಕಗಳಿವೆ. ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಂದು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ನರೇಂದ್ರ ನಾಯಕ್ ಅವರು ನಿತ್ಯಾನಂದ ಅಥವಾ ಆತನ ಶಿಷ್ಯರು 90 ಶೇಕಡಾ ಫಲಿತಾಂಶ ನೀಡಿದರೆ ತಾನು 5 ಲಕ್ಷ ರೂ. ನೀಡಲು ಸಿದ್ದನಿದ್ದೇನೆ ಎಂದು ಸವಾಲು ಹಾಕಿದ್ದರು.

ನವೆಂಬರ್ 26 ರಂದು ಫೇಸ್‌ಬುಕ್‌ನಲ್ಲಿ ನಿತ್ಯಾನಂದ ಭಕ್ತೆ ಪೋಸ್ಟ್ ಮಾಡಿದ ಸಂದೇಶದಲ್ಲಿ, ಗುರುವನ್ನು ನಿಂದಿಸುವವರು ಅವರ ಮೂರನೇ ಕಣ್ಣಿನ ಬಿಸಿಗೆ ತುತ್ತಾಗಬೇಕು, ಅವರ ಮೆದುಳಿನಲ್ಲಿ ಗೆಡ್ಡೆ ಬೆಳೆಯುತ್ತದೆ ಎಂದು ಶಪಿಸಲಾಗಿದೆ.

ನರೇಂದ್ರ ನಾಯಕ್ ಅವರು ಮಹಾಯೋಗಿನಿ ಅವರ ಫೇಸ್‌ಬುಕ್ ಸಂದೇಶದ ವಿರುದ್ಧ ಬೆದರಿಕೆ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ನಿತ್ಯಾನಂದ ಮತ್ತು ಅವರ ಶಿಷ್ಯರು ಜನರಿಗೆ ರೋಗ ಮತ್ತು ಬೆದರಿಕೆಗಳನ್ನು ಹಾಕುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.

ಈ ಸಂಬಂಧ ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸುವ ಮೂಲಕ ನಾನು ಇದನ್ನೆಲ್ಲಾ ಅಂತ್ಯಗೊಳಿಸಲು ನಿರ್ಧರಿಸಿದ್ದೇನೆ ಎಂದು ನಿರ್ಭೀತ ವಿಚಾರವಾದಿ ಖ್ಯಾತಿಯ ನರೇಂದ್ರ ನಾಯಕ್ ಹೇಳಿದ್ದು, ಪೊಲೀಸ್ ಅಧಿಕಾರಿಗಳು ಬೆದರಿಕೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತಾರೆ ಎಂದು ನಿರೀಕ್ಷಿಸಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ನಿಂತ ಬಸ್ಸಿಗೆ ಲಾರಿ ಢಿಕ್ಕಿ: ಬಸ್ ಚಾಲಕ ಸಾವು:
http://bit.ly/2iVR1ng
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್: http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV

Related Tags: Narendra Nayak, Rationalist, Nityananda, Abuse, Kannada News, Karnataka News, Coastal Karnataka News, Karavali News, Karavali Karnataka, Latest Kannada News, ನರೇಂದ್ರ ನಾಯಕ್ ,ಸ್ವಾಮಿ ನಿತ್ಯಾನಂದ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ