ಮುಸ್ಲಿಮ್ ಯುವತಿಯರ ಡ್ಯಾನ್ಸ್‌ಗೆ ಬೆಂಬಲ ನೀಡಿದ ರೇಡಿಯೊ ಜಾಕಿಗೆ ಕೊಲೆ ಬೆದರಿಕೆ

ಕರಾವಳಿ ಕರ್ನಾಟಕ ವರದಿ

ತಿರುವನಂತಪುರಂ:
ಇತ್ತೀಚೆಗೆ ಕೇರಳದಲ್ಲಿ ಫ್ಲ್ಯಾಶ್ ಮೊಬ್‌ ನಡೆಸಿ ರಸ್ತೆಯಲ್ಲಿ ನರ್ತಿಸಿದ್ದ ಮುಸ್ಲಿಮ್ ಹುಡುಗಿಯರನ್ನು ಬೆಂಬಲಿಸಿದ್ದ ರೇಡಿಯೊ ಜಾಕಿಯ ಬೆನ್ನು ಬಿದ್ದಿರುವ ಮುಸ್ಲಿಂ ಮೂಲಭೂತವಾದಿಗಳು ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ.

ದೋಹಾದಲ್ಲಿ 98.6 ಎಫ್ಎಮ್‌ನಲ್ಲಿ ರೇಡಿಯೋ ಜಾಕಿ ಆಗಿ ಕಾರ್ಯನಿರ್ವಹಿಸುತ್ತಿರುವ ಆರ್.ಜೆ ಸೂರಜ್‌ಗೆ ಸುಟ್ಟು ಹಾಕುವ, ಜೈಲಿಗೆ ಕಳಿಸುವ ಬೆದರಿಕೆಯನ್ನೂ ಒಡ್ಡಲಾಗಿದೆ.

ಡಿಸೆಂಬರ್ 1ರಂದು ವಿಶ್ವ ಏಯ್ಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಜಾಗ್ರತಿ ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ಕಾಲೇಜಿನ ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರು ಸಹ ಭಾಗವಹಿಸಿದ್ದರು.

ಮೆರವಣಿಗೆ ನಡೆಯುತ್ತಿದ್ದ ವೇಳೆ ರಸ್ತೆಯೊಂದರ ಬಳಿ ಈ ಮೂವರು ಯುವತಿಯರು ಫ್ಲ್ಯಾಶ್ ಮೊಬ್ ನಡೆಸಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು. ತಲೆಯ ಮೇಲೆ ಶಿರವಸ್ತ್ರ ಧರಿಸಿರುವ ಈ ಮೂವರು ಹುಡುಗಿಯರು ಜನಪ್ರಿಯ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ  ವ್ಯಾಪಕವಾಗಿ ವೈರಲ್ ಆಗಿತ್ತು. ಹಲವರು ಮುಸ್ಲಿಂ ಹುಡುಗಿಯರನ್ನು ಬೆಂಬಲಿಸಿದ್ದರೆ ಅನೇಕ ಮುಸ್ಲಿಂ ಮೂಲಭೂತವಾದಿಗಳು ಡ್ಯಾನ್ಸ್ ಮಾಡಿದ ಹುಡುಗಿಯರ ಕುರಿತು ಆಕ್ರೋಶ ವ್ಯಕ್ತಪಡಿಸಿ ಕೀಳಾಗಿ ನಿಂದಿಸಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು.

ಇದೇ ಡ್ಯಾನ್ಸ್ ವಿಡಿಯೊವನ್ನು ಬೆಂಬಲಿಸಿದ್ದ ಆರ್.ಜೆ ಸೂರಜ್ ಹುಡುಗಿಯರು ಡ್ಯಾನ್ಸ್ ಮಾಡುವುದನ್ನು ಬೆಂಬಲಿಸಿ ಹುಡುಗಿಯರ ಧೈರ್ಯವನ್ನು ಕೊಂಡಾಡಿದ್ದರು. ಆದರೆ ಸೂರಜ್ ವಿರುದ್ಧ ತಿರುಗಿ ಬಿದ್ದ ಮುಸ್ಲಿಂ ಮೂಲಭೂತವಾದಿಗಳು ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ. ದೋಹಾದಲ್ಲೆ ಕೊಂದು ಸುಟ್ಟು ಹಾಕುತ್ತೇವೆ, ದೋಹಾದಲ್ಲಿ ಜೈಲಿಗೆ ಕಳುಹಿಸುತ್ತೇವೆ ಎಂದೂ ಸೂರಜ್‌ಗೆ ಬೆದರಿಕೆ ಒಡ್ಡಲಾಗಿದೆ.

ಡ್ಯಾನ್ಸ್ ಮಾಡುವುದನ್ನು ವಿರೋಧಿಸಿದ್ದ ಮುಸ್ಲಿಂ ಮೂಲಭೂತವಾದಿಗಳನ್ನು ಟೀಕಿಸಿದ್ದ ಸೂರಜ್ 'ಕೆಲ ದಿನಗಳ ಹಿಂದೆ ನೀವು ಹದಿಯಾಳಿಗೆ ಸ್ವಾತಂತ್ರ್ಯ ಕೊಡಿ ಎಂದು ಕೇಳಿದ್ದೀರಲ್ಲವೆ ಬ್ರದರ್ಸ್? ನೀವು ಅದಕ್ಕಾಗಿ ಸುಪ್ರೀಂ ಕೋರ್ಟ್‌ಗೂ ಹೋದಿರಿ. ಈ ಹುಡುಗಿಯರಿಗೂ ಹದಿಯಾಳ ಹಾಗೆಯೆ ಹಕ್ಕಿದೆ ಅಲ್ಲವೆ? ನೀವು ಹದಿಯಾ ಹೇಗೆ ಸ್ವತಂತ್ರಳಾಗಿ ಬದುಕಬೇಕೆಂದು ಬಯಸುತ್ತೀರೊ ಹಾಗೆಯೆ ಈ ಹುಡುಗಿಯರೂ ಸಹ ಸ್ವತಂತ್ರರಾಗಿ ಏಕೆ ಬದುಜಬಾರದು? ವೈಯಕ್ತಿಕ ಸ್ವಾತಂತ್ರ್ಯ ಎನ್ನುವುದು ನೀವು ನಿಮ್ಮ ಧರ್ಮಕ್ಕೆ ಮತಾಂತರ ಆಗುವ ಹುಡುಗಿಯರಿಗೆ ಕೊಡುವ ಉಡುಗೊಗೆರೆಯೆ? ಎಂದು ಆರ್.ಜೆ ಸೂರಜ್ ಪ್ರಶ್ನಿಸಿದ್ದರು.

 


ಹಿಂದಿನ ವರದಿ
ಮಲ್ಲಪ್ಪುರಂ(ಕೇರಳ):
ಮೂವರು ಮುಸ್ಲಿಮ್ ಹುಡುಗಿಯರು ಸಾರ್ವಜನಿಕ ರಸ್ತೆಯೊಂದರಲ್ಲಿ ಮಾಡಿದ ಡ್ಯಾನ್ಸ್ ಒಂದು ಈಗ ಮುಸ್ಲಿಮ್ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೇರಳದಲ್ಲೀಗ ಸೋಷಿಯಲ್ ಮೀಡಿಯಾದಲ್ಲಿ ಇದೇ ದೊಡ್ಡ ಸುದ್ದಿಯಾಗಿದೆ.

ಮುಸ್ಲಿಮ್ ಮೂಲಭೂತವಾದಿಗಳ ಪ್ರತಿಕ್ರಿಯೆ ಎಷ್ಟರ ಮಟ್ಟಿಗೆ ಇದೆ ಎಂದರೆ ಕೆಲವರಂತೂ ;ಜಗತ್ತಿನ ಅಂತ್ಯ ಹತ್ತಿರದಲ್ಲೆ ಇದೆ' ಎಂಬಂತೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು 'ದಿ ನ್ಯೂಸ್‌ಮಿನಿಟ್' ವರದಿ ಮಾಡಿದೆ.

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ಕಾಲೇಜಿನ ಈ ಮೂವರು ಮುಸ್ಲಿಮ್ ವಿದ್ಯಾರ್ಥಿನಿಯರು ಸಹ ಭಾಗವಹಿಸಿದ್ದರು.

ಮೆರವಣಿಗೆ ನಡೆಯುತ್ತಿದ್ದ ವೇಳೆ ರಸ್ತೆಯೊಂದರ ಬಳಿ ಈ ಮೂವರು ಯುವತಿಯರು ಫ್ಲ್ಯಾಶ್ ಮೊಬ್ ನಡೆಸಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು. ತಲೆಯ ಮೇಲೆ ಶಿರವಸ್ತ್ರ ಧರಿಸಿರುವ ಈ ಮೂವರು ಹುಡುಗಿಯರು ಜನಪ್ರಿಯ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಈಗ ವ್ಯಾಪಕವಾಗಿ ವೈರಲ್ ಆಗಿದೆ.

ಈ ಡ್ಯಾನ್ಸ್ ವಿಡಿಯೊ ನೋಡಿದ ಹಲವು ಮುಸ್ಲಿಂ ಯುವಕರು ಹುಡುಗಿಯರ ನರ್ತನವನ್ನು ಖಂಡಿಸಿದ್ದಾರೆ. ಮಾತ್ರವಲ್ಲ ಅವರನ್ನು ಇಷ್ಟು ಸ್ವತಂತ್ರರಾಗಿ ಬಿಟ್ಟಿರುವುದಕ್ಕಾಗಿ ಅವರ ಪೋಷಕರ ಮೇಲೂ ಕೆಂಡಕಾರಿದ್ದಾರೆ. ಇನ್ನು ಕೆಲವರು ಆ ಹುಡುಗಿಯರು ತಮ್ಮ ಧರ್ಮದಿಂದ ದೂರವಾಗುತ್ತಿದ್ದಾರೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿದರೆ ಜನಗತ್ತಿನ ಅಂತ್ಯ ದೂರವಿಲ್ಲ ಎಂದು ಅರ್ಥವಾಗುತ್ತದೆ ಎಂದೂ ಸಹ ಕಮೆಂಟ್‌ಗಳನ್ನು ಮಾಡಲಾಗಿದೆ.

ಒಂದು ಕಂಮೆಂಟ್‌ನಲ್ಲಿ 'ಈ ಹುಡುಗಿಯರನ್ನು ಮನೆಯಲ್ಲಿ ಕಟ್ಟಿ ಹಾಕಿಡಲು ಜಾಗ ಇಲ್ಲ ಎಂದು ಅನಿಸುತ್ತದೆ. ಅದಕ್ಕಾಗಿ ಹೀಗೆ ಅವರನು ಸ್ವತಂತ್ರರಾಗಿ ಬಿಟ್ಟುಬಿಡಲಾಗಿದೆ' ಎಂದು ಹೇಳಲಾಗಿದೆ.
ಅಚ್ಚರಿ ಎಂದರೆ ಹೀಗೆ ಕಮೆಂಟ್ ಮಾಡಿದವರಲ್ಲಿ ಕೆಲವರು ಕೇರಳದಲ್ಲಿ ಇಸ್ಲಾಂಗೆ ಮತಾಂತರಗೊಂಡ ಅಖಿಲಾ ಯಾನೆ ಹದಿಯಾಳನ್ನು ಮನೆಯಿಂದ ಬಿಡುಗಡೆಗೊಳಿಸಬೇಕೆಂದು ನಿತ್ಯವೂ ಪೋಸ್ಟ್‌ಗಳನ್ನು ಹಾಕುತ್ತಿದ್ದವರು! (ಹದಿಯಾ ಎಂಬ ಕೇರಳದ ಯುವತಿ  ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಶೆಫಿನ್ ಜಹಾನ್ ಎಂಬ ಯುವಕನನ್ನು ಮದುವೆಯಾಗಿ ಬಳಿಕ ಮದುವೆ  ಕೇರಳದ ಹೈಕೋರ್ಟ್ ಮೂಲಕ ರದ್ದಾಗಿ ತನ್ನ ತಂದೆತಾಯಿಯ ಜೊತೆ 'ಗೃಹ ಬಂಧನದಲ್ಲಿದ್ದಾಳೆ' ಎಂದು ಇತ್ತೀಚೆಗೆ ದೇಶದಾದ್ಯಂತ ಸುದ್ದಿಯಾಗಿತ್ತು)

ಮೂಲಭೂತವಾದಿಗಳ ಈ ರೀತಿಯ ಅನಿಸಿಕೆಗಳಿಗೆ ಕೆಲವು ಮುಸ್ಲಿಮ್ ಯುವಕರೇ ವಿರೋಧ ವ್ಯಕ್ತಪಡಿಸಿದ್ದರೆ. ಹದಿಯಾಳನ್ನು ಮನೆಯಿಂದ ಬಿಡುಗಡೆಗೊಳಿಸಬೇಕೆಂದು ಹೋರಾಡಿದವರು ಈಗ ಈ ಮುಸ್ಲಿಮ್ ಹುಡುಗಿಯರ ಡ್ಯಾನ್ಸ್ ಕುರಿತು ಅಸಂಬದ್ದ ಕಮೆಂಟ್ ಮಾಡುತ್ತಿರುವುದು ಆಷಾಡಭೂತಿತನ ಎಂದು ಟೀಕಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೀಗ ಈ ಕುರಿತು ಅನೇಕ ಮೆಮೆಗಳು ಮಲಯಾಳಂನಲ್ಲಿ ವೈರಲ್ ಆಗಿದೆ.

ಮೆಮೆ 1:ಮುಸ್ಲಿಮ್ ಮೂಲಭೂತವಾದಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನನಾಗಿ ದಾಖಲಾಗಿರುತ್ತಾನೆ.
ವ್ಯಕ್ತಿ 1: ಹೀಗೇಕಾಯಿತು?
ವ್ಯಕ್ತಿ 2: ಅವನು ಒಂದು ವೀಡಿಯೊ ನೋಡಿದ
ವ್ಯಕ್ತಿ 1: ಅಂತಹ ಭಯಾನಕ ವಿಡಿಯೊ ಯಾವುದದು?
ವ್ಯಕ್ತಿ 2: ಅವನು 'ಹದಿಯಾಳನ್ನು ಬಿಡುಗಡೆಗೊಳಿಸಿ' ಎಂಬ ಪೋಸ್ಟ್ ಅಪ್‌ಡೇಟ್ ಮಾಡಲು ಫೇಸ್‌ಬುಕ್‌ಗೆ ಲಾಗಿನ್ ಆಗಿದ್ದ. ಆದರೆ ಅಲ್ಲಿ ಅವನಿಗೆ ತನ್ನ ಸಹೋದರಿಯ ಫ್ಳ್ಯಾಶ್ ಮೊಬ್ ವಿಡಿಯೊ ಕಂಡಿತು. ಅದನ್ನು ಕಂಡು ಅವನು ಪ್ರಜ್ಞಾಹೀನನಾದ.

ಮೆಮೆ 2:ಸುದು: ಫ್ಲ್ಯಾಶ್ ಮೊಬ್ ನಡೆಸುವ ಸ್ವಾತಂತ್ರ್ಯವನ್ನು ಮುಸ್ಲಿಮ್ ಹುಡುಗಿಯರಿಗೆ ಕೊಟ್ಟಿಲ್ಲ.
ಜಗದೀಶ್:  ಹದಿಯಾಳನ್ನು ಬಿಡುಗಡೆಗೊಳಿಸಬೇಕು ಎಂದು ಹೋರಾಟ ಮಾಡಿದ್ದು ಇದೇ ಜನರಲ್ಲವೆ? ಅದಕ್ಕಾಗಿಯೇ ಇವರನ್ನು ಯಾರೂ ನಂಬುವುದಿಲ್ಲ.

ಇದನ್ನೂ ಓದಿ
ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!:
http://bit.ly/2ATS5iD

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್:
http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV

Related Tags: Muslim Girls. Flash Mob, Dance, Mallappurama, Social Media, Viral Video, Radio Jockey, R J Suraj, Death Threat, Muslim Fundamentalists
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ