ನಿಂತ ಬಸ್ಸಿಗೆ ಲಾರಿ ಢಿಕ್ಕಿ: ಬಸ್ ಚಾಲಕ ಸಾವು
ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ವರ್ಗಾಯಿಸುವುದರಲ್ಲಿ ಬಸ್ ಚಾಲಕ ಮತ್ತು ಕ್ಲೀನರ್ ನಿರತರಾಗಿದ್ದಾಗ ಲಾರಿ ಗುದ್ದಿದೆ.

ಕರಾವಳಿ ಕರ್ನಾಟಕ ವರದಿ

ಆನೇಕಲ್:
ಅಪಘಾತಕ್ಕೀಡಾಗಿ ನಿಲ್ಲಿಸಿದ್ದ ಬಸ್ಸಿಗೆ ಇಂದು ಮುಂಜಾನೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಸಾವಪ್ಪಿದ ಕಳವಳಕಾರಿ ಘಟನೆ ವರದಿಯಾಗಿದೆ. ಬಸ್ ಸಿಬ್ಬಂದಿ ಮತ್ತು ಲಾರಿ ಕ್ಲೀನರ್ ಕೂಡ ಗಂಭೀರ ಗಾಯಗೊಂಡಿದ್ದಾರೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ತಿರುಮಗೊಂಡನಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ವರ್ಗಾಯಿಸುವುದರಲ್ಲಿ ಬಸ್ ಚಾಲಕ ಮತ್ತು ಕ್ಲೀನರ್ ನಿರತರಾಗಿದ್ದಾಗ ಲಾರಿ ಗುದ್ದಿದೆ.

ಸೂರ್ಯ ಸಿಟಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ:
ಕಾರವಾರ ತಾಲೂಕಿನ ಕಿನ್ನರದಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಒಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಿನ್ನರ ನಿವಾಸಿ ಪ್ರಮೋದ್ ತಳೇಕರ್(45) ಮೃತಪಟ್ಟ ದುರ್ದೈವಿ.

ಪ್ರಮೋದ್ ಕಿನ್ನರದಿಂದ ಕಾರವಾರದ ಕಡೆ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ನೇರವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಪ್ರಮೋದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತ ಪ್ರಮೋದ್ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆಯ ನಡುಭಾಗದಲ್ಲಿ ನಡೆದ ಘಟನೆಯಿಂದಾಗಿ ಸುಮಾರು 2 ಗಂಟೆಗಳವರೆಗೆ ರಸ್ತೆಯ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಆ ಬಳಿಕ ಶವ ಸಾಗಿಸಿದ ನಂತರದಲ್ಲಿ ಪೊಲೀಸರ ಸಹಕಾರದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್:
http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV

Related Tags: Anekal Bus Accident, Kannada News, Karnataka News, Coastal Karnataka News, ಆನೇಕಲ್ ಅಪಘಾತ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ