ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಇತಿಹಾಸದಲ್ಲಿ ಶ್ರೀರಾಮ ಹುಟ್ಟಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ನಡೆದ ‘ಬಾಬರಿ ಮಸೀದಿ ಧ್ವಂಸ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ದ್ವಾರಕನಾಥ್, ಇತಿಹಾಸದಲ್ಲಿ ಬುದ್ಧ, ಕ್ರೈಸ್ತ, ಪೈಗಂಬರ್ ಇರುವಿಕೆಗೆ ಸಾಕಷ್ಟು ಪುರಾವೆಗಳಿವೆ. ಆದರೆ ಶ್ರೀರಾಮ ಹುಟ್ಟಿರುವುದಕ್ಕೆ ಯಾವುದೇ ದಾಖಲೆಗಳು ಸಹ ಇಲ್ಲ.

ನಮ್ಮ ತಾತನ ಹೆಸರು ಹೇಳಿ ಎಂದರೆ ಹೇಳಬಹುದು. ಅವರ ಅಪ್ಪನ ಹೆಸರು ಹೇಳಿ ಎಂದರೆ ಆಗುತ್ತಾ. ಆದರೆ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಮಗೆ ಜ್ಞಾನ ಬಂದ ನಂತರ ದಾಖಲಾತಿಗಳ ಪ್ರಕಾರ ನಾನು ಜಗತ್ತಿನಲ್ಲಿ ಮೂರು ವ್ಯಕ್ತಿಗಳನ್ನು ಗುರುತಿಸಬಹುದು. ಮೊದಲನೆಯದ್ದಾಗಿ ಬುದ್ದ. ಇವರು ಸುಮಾರು 2600 ವರ್ಷಗಳ ಹಿಂದೆ ಇದ್ದರು ಎಂಬುದಕ್ಕೆ ದಾಖಲಾತಿಗಳಿವೆ.

ಎರಡನೆಯದಾಗಿ ಜೀಸಸ್. ಇವರು ಸುಮಾರು 1600 ವರ್ಷಗಳ ಹಿಂದೆ ಇದ್ದರು, ಇದಕ್ಕೂ ಪುರಾವೆಗಳಿವೆ. ಇನ್ನು ಮೂರನೆಯದಾಗಿ ಪೈಗಂಬರ್. ಇವರು ಸುಮಾರು 600 ವರ್ಷಗಳ ಹಿಂದೆ ಇದ್ದರು ಎಂಬುವುದಕ್ಕೆ ದಾಖಲಾತಿಗಳಿವೆ. ಇವುಗಳನ್ನು ಹೊರತುಪಡಿಸಿದರೆ ಇನ್ನು ಯಾವ ದಾಖಲಾತಿಗಳೂ ವಿಜ್ಞಾನದ ಕಣ್ಣಿಗೆ ಸಿಗುತ್ತಿಲ್ಲ ಎಂದಿದ್ದಾರೆ.

ದ್ವಾರಕನಾಥ್ ಹೇಳಿಕೆಗೆ ಹಿಂದೂತ್ವ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ:
http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ