ಭಯೋತ್ಪಾದನೆ ಸೃಷ್ಟಿಸುವ ಫೇಕ್ ನ್ಯೂಸ್ ಬಗ್ಗೆ ಎಚ್ಚರ: ವಂ. ಚೇತನ್ ಲೋಬೊ
ನಮಾನ್ ಬಾಳೊಕ್ ಜೆಜುಕೊಂಕಣಿ ಮಾಸಿಕದ 9ನೇ ವಾರ್ಷಿಕ ದಿನಾಚರಣೆಯಲ್ಲಿ ಚಿಂತಕ ಫಾ. ಚೇತನ್ ಲೋಬೊ ಭಯೋತ್ಪಾದಕ ಸುಳ್ಳು ಸುದ್ದಿಗಳ ಕುರಿತು ಕಳವಳ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಫೇಕ್ ನ್ಯೂಸ್ ಎಂದಿಗೂ ಗುಡ್ ನ್ಯೂಸ್ ಆಗಲು ಸಾಧ್ಯವಿಲ್ಲ. ಈ ಪದವನ್ನು 'ವರ್ಷದ ಪದ' ಎಂದು ಪರಿಗಣಿಸಲಾಗಿದೆ. ಈ ಪದವನ್ನು ತನ್ನ ವಿರುದ್ಧ ಮಾಡಲಾದ ಅಪಪ್ರಚಾರದ ವೇಳೆ 'ಫೇಕ್' ಎಂದು ಎಲ್ಲವನ್ನು ಹೀಗಳೆದು ಅತೀ ಹೆಚ್ಚಾಗಿ ಬಳಸಿದವರು ಅಮೇರಿಕಾದ ಅಧ್ಯಕ್ಶ ಡೊನಾಲ್ಡ್ ಟ್ರಂಪ್ ಆದರೂ ಅದನ್ನು ಪ್ರಚಾರಕ್ಕೆ ಬಳಸಿಕೊಂಡದ್ದು ಮಾಧ್ಯಮ ಮಂದಿ. ಅವರ ಜತೆ ಸೇರಿ ವಾಟ್ಸ್ಯಾಪ್ ಮೂಲಕ ಅಲ್ಲಸಲ್ಲದ ಸುಳ್ಳು ಸುದ್ದಿಗಳನ್ನೆಬ್ಬಿಸಿ ಜನರಲ್ಲಿ ಭಯೋತ್ಪಾದನೆ ಉಂಟು ಮಾಡುವಂತಹ ಕಾರ್ಯವನ್ನುಅನೇಕರು ವಾಟ್ಸ್ಯಾಪ್ ಮೂಲಕವೂ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳ ಮೇಲೆ ನಿಗಾ ಇಡಬೇಕು. ಯಾವುದೆ ಸುದ್ಧಿಯನ್ನು ವಸ್ತುನಿಷ್ಟವಾಗಿ ಪ್ರಕಟಿಸುವ ಹೊಣೆಗಾರಿಕೆ ನಮ್ಮದಾಗಬೇಕು ಎಂದು ಉಜ್ವಾಡ್ ಕೊಂಕಣಿ ಪತ್ರಿಕೆಯ ಸಂಪಾದಕ, ಚಿಂತಕ ವಂದನೀಯ ಚೇತನ್ ಲೋಬೊ ಹೇಳಿದರು.

ಅವರು ನಮಾನ್ ಬಾಳೊಕ್ ಜೆಜುಕೊಂಕಣಿ ಮಾಸಿಕದ 9ನೇ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಬಿಕರ್ನಕಟ್ಟೆ, ಬಾಲಯೇಸುವಿನ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.

ದುರದೃಷ್ಟವಶಾತ್ ಸುಳ್ಳು ಸುದ್ದಿಯೇ ಇಂದು ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. ಇದು ಸದ್ದಿಲ್ಲದ ಭಯೋತ್ಪಾದನೆಯಾಗಿದ್ದು ಜನರಲ್ಲಿ ಭಾರೀ ಭಯವನ್ನು ಬಿತ್ತುತ್ತಿದೆ. ಸುಳ್ಳು ಸುದ್ದಿಯು ಭಯೋತ್ಪಾದನೆಯ ಹೊಸ ಮುಖವಾಗಿದ್ದು, ಇದು ಜನ ಸಾಮಾನ್ಯರಲ್ಲಿ ಭಯ ಮತ್ತು ಸಂದೇಹವನ್ನು ಉಂಟುಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಮಾನ್ ಬಾಳೊಕ್ ಜೆಜು, ಕೊಂಕಣಿ ಮಾಸಿಕದ 9ನೇ ವಾರ್ಷಿಕ ದಿನಾಚರಣೆ ಬಿಕರ್ನಕಟ್ಟೆಯ ಬಾಲಯೇಸು ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.

ಕ್ರಿಸ್ಟೋಫರ್ ನೀನಾಸಂರವರ ಪಂಗಡದ 'ಕಾವ್ಯಕಥಾರಂಗ್' ಕಾರ್ಯಕ್ರಮ(ಬತ್ತಿ ಕೆಲರಾಯ್ ಅವರ ‘ಅಂಬಾಡ್ಯಾಚಿ ಸೊಸಿ’, ರೊನಿ ಅರುಣ್ ಅವರ ‘ಬೀದರ್’ಸಣ್ಣ ಕತೆಗಳು,  ಖ್ಯಾತ ಕೊಂಕಣಿ ಕವಿ ಚಾ. ಫ್ರಾ. ಡಿಕೊಸ್ತಾ ಅವರ ಎರಡು ಕವಿತೆಗಳ ಪ್ರಸ್ತುತಿ) ದ ಮೂಲಕ ಆರಂಭಗೊಂಡ ದಿನಾಚರಣೆಯ ಸಂದರ್ಭದಲ್ಲಿ, 2017 ಸಾಲಿನ ಯುವ ಪ್ರತಿಭಾ ಪುರಸ್ಕಾರವು ಫ್ರಿವಿಟಾಡಿಸೊಜಾ (ಎನ್ ಬಿ ಜೆ-ಅಮೂಲ್ಯಆಕಾಶ್ ಕಲಾ ಪ್ರಶಸ್ತಿ 2017) ಹಾಗೂ ನಿವಿಟಾ ಕಾರ್ಡೋಜಾರವರಿಗೆ (ಎನ್ಬಿಜೆ –ಅಮೂಲ್ಯಆಕಾಶ್ ಕ್ರೀಡಾ ಪ್ರಶಸ್ತಿ 2017) ಹಸ್ತಾಂತರಿಸಲಾಯಿತು.
'ಗೋಡ್ವಿನ್ ಸುಶ್ಮಾ ರಸ್ಕೀನ್ಹಾ ಕುಟುಂಬ ವರ್ಷದ ವ್ಯಕ್ತಿ 2017 ಪ್ರಶಸ್ತಿ' ಪರಿಸರವಾದಿ ಜೀತ್ ಮಿಲನ್ ರೋಚ್ ಅವರಿಗೆ ಹಸ್ತಾಂತರಿಸಲಾಯಿತು.

‘ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೋಚ್ ಅವರು, ಚರ್ಚ್ ಬಡವರು ಮತ್ತು ಅವಶ್ಯಕತೆ ಇರುವ ಜನರಿಗಾಗಿ ಅಮೋಘ ಸೇವೆ ನೀಡುತ್ತಿದೆ. ಆದರೆ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಿದೆ. ಗಿಡಗಳನ್ನು ನೆಟ್ಟು ಪರಿಸರವನ್ನು ಪ್ರೀತಿಸಲು ಜನರು ಮತ್ತು ಕ್ರೈಸ್ತರನ್ನು ಹುರಿದುಂಬಿಸಲು ‘ಹಸಿರು ವಾರ’ ಆಚರಣೆ ಸೂಕ್ತ ಎಂದು ಈ ಸಂದರ್ಭ ಸಲಹೆ ನೀಡಿದರು.

ಕೊಂಕಣಿ ಲೇಖಕ ಹೆರೊಲ್ಪಿಯಸ್ ಅವರ ಕೊಂಕಣಿ ಪುಸ್ತಕ, 'ಆಮ್ಶೆಂತಿಕ್ಶೆಂ ಲೊಣ್ಚೆಂ' ಲೋಕಾರ್ಪಣೆ ಮಾಡಲಾಯಿತು.

ಗಣ್ಯಅತಿಥಿಯಾಗಿ ಆಗಮಿಸಿದ್ದ ‘ದಾಯ್ಜಿವರ್ಲ್ಡ್ ವೀಕ್ಲಿ’ಯ ಸಂಪಾದಕ ಹೇಮಾಚಾರ್ಯ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಾ, ಕ್ರೈಸ್ತರಿಗೆ 'ಶಾಂತಿಪ್ರಿಯರು' ಎಂಬ ಹಣೆಪಟ್ಟೆಕಟ್ಟಿಬಿಟ್ಟು, ಯಾವುದೇ ಸಂದರ್ಭದಲ್ಲಿ ಕ್ರೈಸ್ತರು ಪ್ರತಿಭಟನೆಗೆ ತೊಡಗಿದರೆ, 'ನೀವು ಶಾಂತಿಪ್ರಿಯರು' ಎಂದು ಅಭಿವ್ಯಕ್ತಿಯನ್ನುದಮನಿಸುವ ಮಂದಿ ಹೆಚ್ಚಾಗಿದ್ದಾರೆ. ಆ ಹಣೆಪಟ್ಟಿ ಕಿತ್ತೊಗೆದು ಅನ್ಯಾಯಗಳನ್ನು ಧೈರ್ಯದಿಂದ ಎದುರಿಸುವಂತಾಗಬೇಕು ಎಂದು ಹಿತನುಡಿಯನ್ನಿತ್ತರು.

ನಮ್ಮ ಹಕ್ಕುಗಳ ಬಗ್ಗೆ ಮಾತಾಡದೇ, ಹೋರಾಟ ಮಾಡದೇ ಇರುವುದರಿಂದ ಈ ಖ್ಯಾತಿಯೇ ಸಮುದಾಯಕ್ಕೆ ದೊಡ್ಡ ಹಾನಿ ಎಸಗಿದೆ. ಈ ಭ್ರಮೆಯಿಂದ ನಾವು ಹೊರಬರಬೇಕಿದೆ. ಧರ್ಮಗುರುಗಳು ಮತ್ತು ಧಾರ್ಮಿಕ ವ್ಯಕ್ತಿಗಳು ಸಾಮಾಜಿಕ ಸಮಸ್ಯೆಗಳ ವಿರುದ್ಧ ನಿರ್ಭೀತಿಯಿಂದ ಹೋರಾಡಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ವಂದನೀಯ ಪಿಯುಸ್ ಡಿ’ ಸೊಜಾರವರು ಪತ್ರಿಕೆ ದಶಮಾನೋತ್ಸವದ ಕಡೆಗೆ ದಾಪುಗಾಲು ಹಾಕುತ್ತಿರುವಾಗ ಸಾಂಕೇತಿಕವಾಗಿ ಗಡಿಯಾರದ ಮುಳ್ಳನ್ನು 9ರಿಂದ 10 ಕ್ಕೆ ತಿರುಗಿಸಿ ದಶಮಾನೋತ್ಸವಕ್ಕೆ ಚಾಲನೆಯಿತ್ತರು.

ವೇದಿಕೆಯಲ್ಲಿ ಗಣ್ಯ ಅತಿಥಿಗಳೊಂದಿಗೆ ಪ್ರಶಸ್ತಿಗಳ ಪ್ರಾಯೋಜಕರಾದ ಮೇವಿಸ್ ರೋಡ್ರಿಗಸ್, ಸುಷ್ಮಾ ರಸ್ಕಿನ್ಹಾ, ದಯಾ ವಿಕ್ಟರ್ ಲೋಬೊ, ಹಾಗೂ ಪತ್ರಿಕೆಯ ಸಂಚಾಲಕರಾದ ವಂದನೀಯ ವಿಲ್ಫ್ರೆಡ್ ರೊಡ್ರಿಗಸ್ ಮತ್ತು ಸಂಪಾದಕರಾದ, ವಂದನೀಯ ಜೊ.ಸಿ.ಸಿದ್ದಕಟ್ಟೆ ಉಪಸ್ಥಿತರಿದ್ದರು.

ಬಜ್ಜೋಡಿ OCDS ಘಟಕದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಪಾದಕ ಫಾ. ಜೊಸಿ ಸಿದ್ಧಕಟ್ಟೆ ಸ್ವಾಗತಿಸಿ, ಇದು ಪತ್ರಿಕೆಯ ಓದುಗರು ಮತ್ತು ಬರಹಗಾರರ ಸಂಭ್ರಮಾಚರಣೆ ಎಂದರು.

ಸಹಸಂಪಾದಕರಾದ ವಂ. ಐವನ್ ಡಿ ಸೊಜಾ ವಂದಿಸಿದರು, ಕಾರ್ಯನಿರ್ವಾಹಕ ಹಾಗೂ ಲೇಖಕರಾದ  ಆಲ್ವಿನ್ ದಾಂತಿ ಪೆರ್ನಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು':
http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV

Related Tags: Fake News is New Face of Terrorism, Fr Chetan Lobo, 9th Anniversary of ‘Naman Ballok Jesu’, Fr Jocy Siddakatte, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ