ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು'

ಕರಾವಳಿ ಕರ್ನಾಟಕ ವರದಿ

ಅಹ್ಮದಾಬಾದ್
: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಾಡ್ಗಾಮ್ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಿಗ್ನೇಶ್ ಮೇವಾನಿ ಕ್ಷೇತ್ರದಾದ್ಯಂತ ತೆರೆದ ಜೀಪ್‌ನಲ್ಲಿ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಅಹ್ಮದಾಬಾದ್‌ನಿಂದ ಕೇವಲ 140 ಕಿಲೊಮೀಟರ್ ದೂರದಲ್ಲಿರುವ ಈ ಕ್ಷೇತ್ರವೀಗ ರಾಷ್ಟ್ರದ ಗಮನ ಸೆಳೆದಿದೆ.

ತಮ್ಮ ಎಂದಿನ ಜೀನ್ಸ್ ಮತ್ತು ಕುರ್ತಾದಲ್ಲಿ ತೀರಾ ಸರಳರಾಗಿ ಕಾಣಿಸುವ ಜಿಗ್ನೇಶ್ ಮೇವಾನಿ ವಾಡ್ಗಾಮ್ ಕ್ಷೇತ್ರದಲ್ಲಿ ಈಗಾಗಲೇ ವ್ಯಾಪಕ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ದಲಿತರ ಜೊತೆ ಅಪಾರ ಸಂಖ್ಯೆಯ ಹಿಂದುಳಿದ ವರ್ಗಗಳ ಮತ್ತು ವಿಶೇಷವಾಗಿ ಮುಸ್ಲಿಮರೂ ಸಹ ಜಿಗ್ನೇಶ್ ಮೇವಾನಿ ಅವರಿಗೆ ಬೆಂಬಲ ಸೂಚಿಸುತ್ತಿರುವುದು ಜಿಗ್ನೇಶ್ ಸಭೆಗಳಲ್ಲಿ ಕಂಡುಬಂದಿದೆ, ಜಿಗ್ನೇಶ್ ಪ್ರಚಾರ ಸಭೆಗಳಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.

'ಸೋಲಲಿ ಗೆಲ್ಲಲಿ ನನ್ನ ಹೋರಾಟ ಸದಾ ಜಾರಿಯಲ್ಲಿರುತ್ತದೆ' ಎಂದು ಜಿಗ್ನೇಶ್ ಮೇವಾನಿ ಹೇಳುತ್ತಾರೆ. ಮತದಾರರೊಂದಿಗೆ ಆತ್ಮೀಯವಾಗಿ ಮತ್ತು ಮುಕ್ತವಾಗಿ ಮಾತನಾಡುವ ಜಿಗ್ನೇಶ್ ಅವರ ಮಾತಿನ ವೈಖರಿ ಇಲ್ಲಿನ ಮತದಾರರನ್ನು ಆಕರ್ಷಿಸುವಲ್ಲಿ ಸಫಲವೂ ಆಗಿದೆ.

'ನಾವು ಮೊದಲು ಹೋರಾಟಗಾರರು, ಜನ ಹೋರಾಟಗಳ ನಡುವಿನಿಂದ ನಾವು ಬಂದಿದ್ದೇವೆ. ಮತ್ತು ಅದೇ ನಮಗೆ ಸರಿಯಾದ ಜಾಗ. ಆದರೆ ದಲಿತ ಸಮುದಾಯ ಮತ್ತು ಇತರರಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಗ್ರಹ ಬಲವಾದಾಗ ನಾನು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡೆ. ಯಾವುದೇ ಮುಲಾಜಿಲ್ಲದೆ ಜನರ ಅಹವಾಲುಗಳ ಕುರಿತು ಮಾತನಾಡಲು ಇದೂ ಸಹ ಒಂದು ಅವಕಾಶ ಎಂದು ಚುನಾವಣೆಗೆ ನಿಂತೆ' ಎಂದು ಜಿಗ್ನೇಶ್ ಮೇವಾನಿ ಹೇಳುತ್ತಾರೆ. ದೇಶದ ರಾಜಕಾರಣದಲ್ಲಿ ದಲಿತರು ಮತ್ತು ಮುಸ್ಲಿಮರು ಒಂದಾಗಬೇಕೆಂದು ಸಹ ಜಿಗ್ನೇಶ್ ಹೇಳುತ್ತಾರೆ.

ಜಿಗ್ನೇಶ್ ಮೇವಾನಿ ಅವರ ಪ್ರಚಾರ ಕಣ ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಕುತೂಹಲಕಾರಿಯಾಗಿದೆ. ಇದಕ್ಕೆ ಕಾರಣ ಜಿಗ್ನೇಶ್ ಪರವಾಗಿ ಪ್ರಚಾರಕ್ಕೆ ದೇಶದ ಹಲವೆಡೆಯಿಂದ ಬಂದಿರುವ ಜಿಗ್ನೇಶ್ ಅವರ ಅಭಿಮಾನಿಗಳು, ಜಿಗ್ನೇಶ್ ಅವರ ಸಹಪಾಠಿಗಳು ಮತ್ತು ವಿಶೇಷವಾಗಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ತಂಡ ಮತ್ತು ಜೈ ಭೀಮ್ ಆರ್ಮಿ. ಇವರೆಲ್ಲರೂ ಗುಜರಾತ್ ಚುನಾವಣೆಯ ಎರಡನೆಯ ಹಂತದಲ್ಲಿ ವಾಡ್ಗಾಮ್ ಕ್ಷೇತ್ರದ ಮತದಾನ ಮುಗಿದ ಬಳಿಕವೇ ನಾವು ಇಲ್ಲಿಂದ ಮರಳುವುದು ಎಂದು ಖಚಿತವಾಗಿ ಹೇಳುತ್ತಾರೆ. ಜಿಗ್ನೇಶ್ ಇಲ್ಲಿಂದ ಖಂಡಿತ ಗೆಲ್ಲುತ್ತಾರೆ ಎಂಬುದು ಇವರೆಲ್ಲರ ಭಿಮತ.

'ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟಕ್ಕಾಗಿ ಇಲ್ಲಿಗೆ ಬಂದಿದ್ದೇವೆ' ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕರು ಹೇಳಿದ್ದಾರೆ. ದೇಶದಾದ್ಯಂತ ಜನಪ್ರಿಯವಾಗಿದ್ದ ಜೆಎನ್‌ಯು ವಿದ್ಯಾರ್ಥಿಗಳ ಆಝಾದಿ ಘೋಷಣೆಯ ರೀತಿಯಲ್ಲೆ ವಾಡ್ಗಾಮ್‌ನಲ್ಲಿ ಜಿಗ್ನೇಶ್ ಪರವಾಗಿ ಘೋಷಣೆಗಳನ್ನು ಅವರು ಕೂಗುತ್ತಿದ್ದಾರೆ. "ಕಹಾಂ ಪಡೇ ಹೋ ಚಕ್ಕರ್ ಮೆ, ಕೋಯಿ ನಹಿ ಹೈ ಟಕ್ಕರ್ ಮೆ"  ಎಂದು ಜೆಎನ್‌ಯು ವಿದ್ಯಾರ್ಥಿಗಳು ಕೂಗುವ ಘೋಷಣೆ ಇಲ್ಲೀಗ ಮತದಾರರನ್ನು ಆಕರ್ಷಿಸುತ್ತಿದೆ.

ಜಿಗ್ನೇಶ್ ಮೇವಾನಿ ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಅವರ ಮುಖ್ಯ ಉದ್ದೇಶ ಬಿಜೆಪಿಯನ್ನು ಸೋಲಿಸುವುದೇ ಆಗಿದೆ. ಕಾಂಗ್ರೆಸ್ ಜಿಗ್ನೇಶ್ ಅವರ ಎದುರು ಯಾವುದೇ ಅಭ್ಯರ್ಥಿಯನ್ನು ಈ ಸಾರಿ ಕಣಕ್ಕೆ ಇಳಿಸಿಲ್ಲ. ಹಿಂದಿನ ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿನಿಧಿಸುತ್ತಿತ್ತು.


                               ವಾಡ್ಗಾಮ್‌ನಲ್ಲಿ ಒಂದು ಪಾನ್ ಅಂಗಡಿ


                           ಜಿಗ್ನೇಶ್ ಕಾರನ್ನು ಅಡ್ಡಗಟ್ಟಿರುವ ಬಿಜೆಪಿ ಕಾರ್ಯಕರ್ತರು


                                     ತೆರೆದ ಜೀಪಿನಲ್ಲಿ ಜಿಗ್ನೇಶ್ ಪ್ರಚಾರ


                                ಸಣ್ಣ ಸಭೆ ನಡೆಸುತ್ತಿರುವ ಜಿಗ್ನೇಶ್ ಮೇವಾನಿ


ಮೇವಾನಿಗೆ ಹಲವೆಡೆ ಬಿಜೆಪಿ ಕಾರ್ಯಕರ್ತರಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಹಲವೆಡೆ ಜಿಗ್ನೇಶ್ ಮೇವಾನಿ ಅವರ ಕಾರನ್ನು ತಡೆಯುವ ಹಲ್ಲೆ ಮಾಡುವ ಯತ್ನವೂ ನಡೆಯುತ್ತಿದೆ. ಒಂದು ಹಳ್ಳಿಯಲ್ಲಿ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದರೆ ಮಾತ್ರ ಹಳ್ಳಿಗೆ ಪ್ರವೇಶ ನೀಡಲಾಗುವುದು ಎಂದು ಗ್ರಾಮಸ್ಥರು ಹಟ ಹಿಡಿದ ವಿದ್ಯಮಾನವೂ ನಡೆದಿದೆ. ಎಷ್ಟೇ ಸಮಜಾಯಿಷಿ ನೀಡಿದರೂ ಜನರು ಒಪ್ಪದ ಕಾರಣ ಮೇವಾನಿ ಆ ಹಳ್ಳಿಗೆ ಹೋಗದೆ ಹಿಂದಿರುಗಿ ಬಂದಿದ್ದಾರೆ. ಆದರೆ ಒಟ್ಟಾರೆಯಾಗಿ ಜಿಗ್ನೇಶ್ ಮೇವಾನಿ ವಾಡ್ಗಾಮ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವೆ ಜಿದ್ದಾಜಿದ್ದಿನ ಸ್ಪರ್ದೆ ನಡೆಯುವ ಎಲ್ಲ ಲಕ್ಷಣಗಳೂ ಇಲ್ಲಿ ಕಂಡುಬಂದಿದೆ. ಊನಾ ಚಳವಳಿಯ ನಾಯಕ, ದಲಿತರ ಹೊಸ ಭರವಸೆಯ ನೇತಾರ ಈ ಚುನಾವಣೆಯ ಮೂಲಕ ಗುಜರಾತ್ ವಿಧಾನ್ಸಭೆಯನ್ನು ಪ್ರವೇಶಿಸುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ. 
 
ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ:
http://bit.ly/2jV3Ees
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್:  http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV
►►ಕುಮಾರಣ್ಣ ಸಿಎಂ ಆಗುವ ತನಕ ಮುಂಡನ ಮಾಡಿಸಲ್ಲ: ಪೋಕಳೆ: http://bit.ly/2BELgi1
►►ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ: http://bit.ly/2A0ZwVk
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j

Related Tags: Vadgam, Jignesh Mevani, Gujarath Elections, BJP, Dalit Leader, JNU, Koyi Nahi Hai Takkar Me, Kahan Pade ho Chakkar Me
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ