ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ

ಕರಾವಳಿ ಕರ್ನಾಟಕ ವರದಿ

ಲಕ್ನೊ:
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾರ್ಷಿಕ ಪುಣ್ಯತಿಥಿಗೆ ಕೊಡುತ್ತಿದ್ದ ಡಿಸೆಂಬರ್ 6ರ ಸಾರ್ವಜನಿಕ ರಜೆಯನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ.

ಅಂಬೇಡ್ಕರ್ ಮಹಾಪರಿನಿರ್ವಾಣ ದಿನವೆಂದೇ ಕರೆಯಲ್ಪಡುವ ಅಂಬೇಡ್ಕರ್ ಅವರ ವಾರ್ಷಿಕ ಪುಣ್ಯ ತಿಥಿ ಡಿಸೆಂಬರ್ 6 ಈ ತನಕ ಸಾರ್ವಜನಿಕ ರಜಾದಿನವಾಗಿತ್ತು. ಆದರೆ ಈ ರಜೆಯನ್ನು ರದ್ದು ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕುರಿತು ಎಲ್ಲ ಸರ್ಕಾರಿ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಿದೆ.

ಉತ್ತರ ಪ್ರದೇಶ ಸರ್ಕಾರ ಅಂಬೇಡ್ಕರ್ ಅವರ ಹೆಸರನ್ನು ಜನಮಾನಸದಿಂದ ದೂರಮಾಡುತ್ತಿದ್ದು ದಲಿತ ವಿರೋಧಿ ನಿಲುವನ್ನು ಹೊಂದಿದೆ ಎಂಬ ಟೀಕೆಗಳು ವ್ಯಾಪಕವಾಗಿರುವ ಸಮಯದಲ್ಲೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ನಿರ್ಣಯ ಕೈಗೊಂಡಿರುವುದು ಮುಖ್ಯವಾಗಿ ಬಹುಜನ ಸಮಾಜ ಪಕ್ಷದಿಂದ ಆಕ್ಷೇಪಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾರ್ವಜನಿಕ ರಜೆಗಳನ್ನು ರದ್ದು ಮಾಡಿರುವುದು ಇದೇ ಮೊದಲಲ್ಲ. ಸುಮಾರು 15ಕ್ಕೂ ಹೆಚ್ಚು ಸಾರ್ವಜನಿಕ ರಜೆಗಳನ್ನು ಸರ್ಕಾರ ಈಗಾಗಲೇ ರದ್ದು ಮಾಡಿದೆ. ಅದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ಚರಣ್ ಸಿಂಗ್ ಜನ್ಮ ದಿನ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಥಾಕೂರ್, ಪರಶುರಾಮ ಜಯಂತಿ, ಮಹಾರಾಣಾ ಪ್ರತಾಪ್ ಜಯಂತಿ, ಮಹಾರಾಜ ಅಗರ್ಸೇನ್ ಜಯಂತಿ, ಮಹಾರಾಜಾ ವಾಲ್ಮೀಕಿ ಜಯಂತಿ, ವಿಶ್ವ ಕರ್ಮ ಪೂಜಾ, ಛತ್ ಪೂಜಾ, ಮೊಹಿದ್ದೀನ್ ಚಿಸ್ತಿ ಉರೂಸ್ ಮತ್ತು ಜಮಾತ್-ಉಲ್-ಅಲ್ವಿದಾ (ರಂಝಾನ್ ತಿಂಗಳ ಕೊನೆಯ ಶುಕ್ರವಾರ) ಸೇರಿದೆ.

ಶೈಕ್ಷಣಿಕ ದಿನಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಅದನ್ನು ಹೆಚ್ಚಿಸಲು ಈ ರಜೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಸರ್ಕಾರ ಈ ಮೊದಲು ಹೇಳಿತ್ತು. ಮಹಾಪುರುಷರ ವಿಶೇಷ ದಿನಗಳಂದು ಶಾಲೆಗಳಿಗೆ ರಜೆ ಕೊಡದೆ ಅವರ ಜೀವನದ ಕುರಿತು ಶಾಲಾ ಕಾಲೇಜುಗಳಲ್ಲಿ ಪಾಠ ಮಾಡಲಾಗುವುದು ಎಂದು ಈ ಹಿಂದೆ ಸರ್ಕಾರ ಟ್ವೀಟ್ ಮಾಡಿತ್ತು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್: 
http://bit.ly/2A8H6lC
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ? http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV
►►ಕುಮಾರಣ್ಣ ಸಿಎಂ ಆಗುವ ತನಕ ಮುಂಡನ ಮಾಡಿಸಲ್ಲ: ಪೋಕಳೆ: http://bit.ly/2BELgi1
►►ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ: http://bit.ly/2A0ZwVk
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j

Related Tags: Ambedkar Death Anniversary, Mahaparinirvan Divas, Holiday Scrapped, Uttar Pradesh, Yogi Adityanath, BJP Government
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ