ಸಮಾನ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಕಾನೂನು ಆಯೋಗದ ಮುಖ್ಯಸ್ಥ ನ್ಯಾ. ಚೌಹಾಣ್

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಪ್ರತಿ ಚುನಾವಣೆಯಲ್ಲೂ ಸಮಾನ ನಾಗರಿಕ ಸಂಹಿತೆಯ ಕುರಿತು ಮಾತನಾಡುವ ಬಿಜೆಪಿಗೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅದನ್ನು ಜಾರಿಗೆ ತರಲಾಗದು ಎಂಬ ವಾಸ್ತವದ ಅರಿವಾದಂತಿದೆ. ಮುಸ್ಲಿಮರ ತ್ರಿವಳಿ ತಲಾಖ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆ ಮತ್ತೆ ಕಾವು ಪಡೆದುಕೊಂಡಿತ್ತು.

"ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಅಸಾಧ್ಯ ಮಾತ್ರವಲ್ಲ ಅದೊಂದು ಆಯ್ಕೆ ಕೂಡ ಅಲ್ಲ" ಎಂದು ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಲಬೀರ್ ಸಿಂಗ್ ಚೌಹಾನ್ ಹೇಳಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಸಂವಿಧಾನದಿಂದ ರಕ್ಷಣೆ ಪಡೆದಿರುವ ವೈಯಕ್ತಿಕ ಕಾನೂನುಗಳನ್ನು ರದ್ದು ಮಾಡಲು ಅಥವಾ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಚೌಹಾನ್ ಹೇಳಿದ್ದಾರೆ.

ಸದ್ಯಕ್ಕೆ ಸಮಾನ ನಾಗರಿಕ ಸಂಹಿತೆಯ ಯೋಚನೆಯನ್ನು ಕೈಬೀಡಲಾಗಿದ್ದು ವೈಯಕ್ತಿಕ ಕಾನೂನುಗಳಲ್ಲಿ ಕೆಲವು ತಿದ್ದುಪಡಿಗಳನ್ನು ತರಲು 21ನೆ ಕಾನೂನು ಆಯೋಗವು ಯೋಚಿಸುತ್ತಿದೆ. "ಸಮಾನ ನಾಗರಿಕ ಸಂಹಿತೆ ಜಾರಿ ಮಾಡಲು ಸಾಧ್ಯವಿಲ್ಲ. ಆದರೆ ಪ್ರತಿಯೊಂದು ಧರ್ಮೀಯರ ವೈಯಕ್ತಿಕ ಕಾನೂನುಗಳಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲು ಸಲಹೆ ನೀಡಲಾಗುತ್ತಿದೆ. ಹಿಂದೂ ಕಾನೂನು, ಮುಸ್ಲಿಂ ಕಾನೂನು, ಕ್ರೈಸ್ತರ ಕಾನೂ ಹೀಗೆ ಎಲ್ಲ ಧರ್ಮೀಯರ ಕಾನೂನುಗಳಲ್ಲಿ ಹಲವಾರು ತಿದ್ದುಪಡಿಗಳು ಆಗಬೇಕಿವೆ.  ಪ್ರತಿಯೊಂದು ಧರ್ಮೀಯರ ಕಾನೂನುಗಳಲ್ಲಿ ಇರುವ ತೊಂದರೆಗಳನ್ನು ಅಧ್ಯಯನ ಮಾಡಿ ಅದಕ್ಕೆ ಅನುಗುಣವಾಗಿ ತಿದ್ದುಪಡಿಗಳನ್ನು ಮಾಡಲಾಗುವುದು" ಎಂದು ಜಸ್ಟೀಸ್ ಚೌಹಾಣ್ ಹೇಳುತ್ತಾರೆ.

"ಸಂವಿಧಾನವನ್ನು ಗೌರವಿಸಲೇಬೇಕಾಗಿದೆ. ಸಂವಿಧಾನವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಸಂವಿಧಾನವೇ ಹಲವಾರು ಸಮುದಾಯ, ಬುಡಕಟ್ಟು ಮುಂತಾದ ಜನರಿಗೆ ಸಾಕಷ್ಟು ವಿನಾಯಿತಿಗಳನ್ನು ನೀಡಿದೆ. ಅವುಗಳನ್ನೆಲ್ಲ ಗೌರವಿಸಲೇಬೇಕಾಗುತ್ತದೆ. ಸಂವಿಧಾನವನ್ನು ಮರೆಯಲಾಗದು ಮತ್ತು ಆರನೆಯ ಪರಿಚ್ಛೇದವನ್ನು ರದ್ದು ಮಾಡಲಾಗದು. ಸಮಾನ ನಾಗರಿಕ ಸಂಹಿತೆ ಒಂದು ಪರಿಹಾರವೇ ಅಲ್ಲ" ಎಂದು ಜಸ್ಟೀಸ್ ಚೌಹಾಣ್ ಹೇಳುತ್ತಾರೆ.

"ವೈಯಕ್ತಿಕ ಕಾನೂನುಗಳು ಆರ್ಟಿಕಲ್ 25ರ ಅಡಿಯಲ್ಲಿ ಸಂವಿಧಾನದ ಭಾಗವಾಗಿವೆ. ಇವುಗಳನ್ನು ಯಾರೂ ಸಹ ಮುಟ್ಟಲು ಸಾಧ್ಯವಿಲ್ಲ. ವೈಯಕ್ತಿಕ ಕಾನೂನುಗಳಲ್ಲಿ ಯಾರಾದರೂ ಬದಲಾವಣೆ ಮಾಡಿದರೂ ಸಹ ಅಂತಹ ಬದಲಾವಣೆಗಳು ರದ್ದಾಗುತ್ತವೆ" ಎಂದು ಜಸ್ಟೀಸ್ ಚೌಹಾಣ್ ಹೇಳಿದ್ದಾರೆ.

ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ಧವಿದೆ ಎಂಬ ಮಾಧ್ಯಮ ವರದಿಗಳನ್ನೂ ಸಹ ಜಸ್ಟೀಸ್ ಚೌಹಾಣ್ ತಳ್ಳಿ ಹಾಕಿದ್ದಾರೆ.

ಸಮಾನ ನಾಗರಿಕ ಸಂಹಿತೆ ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಜಸ್ಟೀಸ್ ಚೌಹಾಣ್ ಅವರು ಒಂದು ಉದಾಹರಣೆಯನ್ನೂ ನೀಡಿದ್ದಾರೆ. "ಈಶಾನ್ಯ ಭಾರತದಲ್ಲಿ ಒಂದು ಸಮುದಾಯವಿದೆ. ಆ ಸಮುದಾಯದಲ್ಲಿ ಸಂಪೂರ್ಣ ಆಸ್ತಿ ಕಿರಿಯ ಮಗಳ ಪಾಲಿಗೆ ಹೋಗುತ್ತದೆ. ಅಳಿಯ ಬಂದು ಅಲ್ಲಿಯೇ ವಾಸಿಸುತ್ತಾನೆ ಮತ್ತು ಆತ ಕೇವಲ ಹುಡುಗಿಗೆ ಮಾತ್ರವಲ್ಲದೆ ಹುಡುಗಿಯ ತಾಯಿಗೂ ಗಂಡನಾಗುತ್ತಾನೆ. ಆಸ್ತಿ ಮಾತ್ರವಲ್ಲದೆ ಕುಟುಂಬದ ಎಲ್ಲ ವಿಷಯಗಳಲ್ಲೂ ಅಳಿಯನೇ ಮಾವನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಇದಕ್ಕೆ ನೀವು ಸಮಾನ ನಾಗರಿಕ ಸಂಹಿತೆಯ ಅಡಿಯಲ್ಲಿ ಏನು ಮಾಡಲು ಸಾಧ್ಯ? ಇದಕ್ಕೆ ಸಂವಿಧಾನದ ರಕ್ಷಣೆಯೂ ಇದೆ" ಎಂದು ಜಸ್ಟೀಸ್ ಚೌಹಾಣ್ ವಿವರಿಸುತ್ತಾರೆ.

ಪ್ರತಿಯೊಂದು ಧರ್ಮದಲ್ಲಿಯೂ ಪ್ರತ್ಯೇಕ ವೈಯಕ್ತಿಕ ಕಾನೂನುಗಳು ಇರುವ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯವೆ ಎಬುದನ್ನು ಪರೀಶಿಲಿಸಲು ಕಾನೂನು ಸಚಿವಾಲಯವು ಕಾನೂನು ಆಯೋಗವನ್ನು ಕೇಳಿತ್ತು.ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ?
http://bit.ly/2iT7qbN
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ: http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV
►►ಕುಮಾರಣ್ಣ ಸಿಎಂ ಆಗುವ ತನಕ ಮುಂಡನ ಮಾಡಿಸಲ್ಲ: ಪೋಕಳೆ: http://bit.ly/2BELgi1
►►ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ: http://bit.ly/2A0ZwVk
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j

Related Tags: Uniform Civil Code, Impossible, Justice Chouhan
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ