ಇಲೆಕ್ಟ್ರಾನಿಕ್ ಮತಯಂತ್ರ ಬಳಸಿದರೆ ಕರ್ನಾಟಕ ಚುನಾವಣೆಗೆ ಬಹಿಷ್ಕಾರ?

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಯಾರಿಗೆ ವೋಟ್ ಒತ್ತಿದರೂ ಬಿಜೆಪಿಗೆ ಹೋಗುತ್ತಿರುವ ಪ್ರಕರಣಗಳು ಪದೇಪದೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತಯಂತ್ರಗಳ ಬಳಕೆಯ ಕುರಿತು ರಾಜಕೀಯ ಪಕ್ಷಗಳು ತೀವ್ರ ಚಿಂತನೆಗೆ ಬಿದ್ದಿವೆ.

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಸಿದ್ದ ನಗರ ಪ್ರದೇಶಗಳಲ್ಲಿ ಬಿಜೆಪಿಗೆ 46% ಸ್ಥಾನಗಳು ಸಿಕ್ಕಿ ಮತಯಂತ್ರಗಳನ್ನು ಬಳಸದೆ ಪೇಪರ್ ಬ್ಯಾಲೆಟ್ ಬಳಸಿದ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ಬಿಜೆಪಿಗೆ ಕೇವಲ 15% ಸ್ಥಾನಗಳು ಲಭಿಸಿರುವ ಸಂಗತಿ ಬ್ಯಾಲೆಟ್ ಪೇಪರ್ ಬಳಕೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂದಿನ ವರ್ಷದ ಮೇ ತಿಂಗಳ ವೇಳೆ ಕರ್ನಾಟಕದ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಈ ಸಂದರ್ಭದಲ್ಲಿ ಮತಯಂತ್ರಗಳನ್ನು ಬಳಸಿದರೆ ಚುನಾವಣೆಗೆ ಬಹಿಷ್ಕಾರ ಹಾಕುವ ಕುರಿತು ಹಲವು ಪಕ್ಷಗಳು ಒಮ್ಮತಕ್ಕೆ ಬರಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗಿದೆ.

ಬಹುಜನ ಸಮಾಜ ಪಕ್ಷದ ಮಾಯಾವತಿ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷ ಮತ್ತು ಎಡ ಪಕ್ಷಗಳು ಈಗಾಗಲೇ ಈ ಕುರಿತು ಮಾತುಕತೆ ನಡೆಸಲು ಮುಂದಾಗಿವೆ.

ಈ ಎಲ್ಲ ಪಕ್ಷಗಳು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬ ಬಗ್ಗೆಯೂ ಕಾಂಗ್ರೆಸ್ ಪಕ್ಷವನ್ನು ಕೇಳಿವೆ ಎನ್ನಲಾಗಿದೆ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈ ಕುರಿತು ಹೆಚ್ಚಿನ ಚರ್ಚೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.ಬಿಜೆಪಿ ಹೊರತುಪಡಿಸಿ ಇತರ ಹೆಚ್ಚಿನ ಪಕ್ಷಗಳು ಮತಯಂತ್ರಗಳ ಬದಲಿಗೆ ಮತಪತ್ರಗಳ ಬಳಕೆಯ ಕುರಿತು ಒಲವು ವ್ಯಕ್ತಪಡಿಸಿದ್ದು ಒಂದು ವೇಳೆ ವಿಪಕ್ಷಗಳು ಒಗ್ಗಟ್ಟಿನಿಂದ ಮತಪತ್ರಗಳ ಬಳಕೆಗೆ ಆಗ್ರಹಿಸಿದರೆ ಚುನಾವಣಾ ಅಯೋಗ ಅನಿವಾರ್ಯವಾಗಿ ಮತಪತ್ರಗಳನ್ನು ಬಳಸಬೇಕಾಗುತ್ತದೆ ಎಂದು ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಯಾವುದೇ ಯೋಚನೆ ಯಶಸ್ವಿಯಾಗಬೇಕಾದರೆ ಕಾಂಗ್ರೆಸ್ ಇದಕ್ಕೆ ಒಪ್ಪಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟಿವೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ:
http://bit.ly/2ingT7f
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು: http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV
►►ಕುಮಾರಣ್ಣ ಸಿಎಂ ಆಗುವ ತನಕ ಮುಂಡನ ಮಾಡಿಸಲ್ಲ: ಪೋಕಳೆ: http://bit.ly/2BELgi1
►►ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ: http://bit.ly/2A0ZwVk
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು: http://bit.ly/2ATe4Gi

Related Tags: EVM Boycott, Karnataka Elections, Opposition Parties, UP POlls
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ