ಮಸೀದಿ ವಿಚಾರಕ್ಕೆ ಇತ್ತಂಡಗಳ ಮಾರಾಮಾರಿ: ಮೂವರಿಗೆ ಗಂಭೀರ ಗಾಯ

ಕರಾವಳಿ ಕರ್ನಾಟಕ ವರದಿ

ಬೆಳ್ತಂಗಡಿ:
ಮಸೀದಿ ವಿಚಾರದಲ್ಲಿ ಎರಡು ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡ ಕಳವಳಕಾರಿ ಘಟನೆ ತಾಲೂಕಿನ ಗೇರುಕಟ್ಟೆ ಎಂಬಲ್ಲಿ ವರದಿಯಾಗಿದೆ.

ಗಾಯಾಳುಗಳನ್ನು ಗೇರುಕಟ್ಟೆ ನಿವಾಸಿಗಳಾದ ತಸ್ಲೀಂ, ಹಾರಿಸ್, ಶಿಹಾಬ್ ಎಂದು ಗುರುತಿಸಲಾಗಿದೆ.

ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, 10 ಜನರ ತಂಡ ಮೂವರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಮನಸೋ ಇಚ್ಛೆ ದಾಳಿ ನಡೆಸಿ ಪರಾರಿಯಾಗಿದೆ.

ಗೇರುಕಟ್ಟೆ ಬಸ್ ನಿಲ್ದಾಣ ಸಮೀಪವೇ ಈ ಘಟನೆ ನಡೆದಿದ್ದು, ಆರೋಪಿಗಳಾದ ಯಾಕೂಬ್, ಉಮರಬ್ಬ, ರವೂಫ್, ಇರ್ಫಾನ್, ರಿಝ್ವಾನ್, ಅಬೂಬಕರ್, ಆದಂ ಶಾಫಿ, ಹೈದರ್ ಮನಬಂದಂತೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಗಂಭೀರವಾಗಿ ಗಾಯಗೊಂಡ ಮೂವರು ಯುವಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಸೀದಿಯ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಮನಸ್ತಾಪವಿದ್ದು, ಕಳೆದ ಮೂರು ದಿನಗಳ ಹಿಂದಷ್ಟೆ ಎರಡೂ ತಂಡಗಳ ನಡುವೆ ಘರ್ಷಣೆ ಸಂಭವಿಸಿತ್ತು ಎನ್ನಲಾಗಿದೆ.

ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ದುರ್ಗಾಂಬಾ-ಕೆಎಸ್ಆರ್‌ಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ: ಮೂವರು ಮೃತ್ಯು:
http://bit.ly/2AvAN8w
►►ಶರದ್ ಯಾದವ್, ಅಲಿ ಅನ್ಸಾರಿ ರಾಜ್ಯಸಭಾ ಸದಸ್ಯತ್ವ ರದ್ದು: http://bit.ly/2ArshJV
►►ಕುಮಾರಣ್ಣ ಸಿಎಂ ಆಗುವ ತನಕ ಮುಂಡನ ಮಾಡಿಸಲ್ಲ: ಪೋಕಳೆ: http://bit.ly/2BELgi1
►►ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ: http://bit.ly/2A0ZwVk
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು: http://bit.ly/2ATe4Gi

Related Tags: Beltangady, Gang War, Gerukatte, Three serious Injuries, Beltangady Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ