ಉಗ್ರ ಪ್ರತಿಭಟನೆಗೆ ಅಮಿತ್ ಷಾ ಸೂಚಿಸಿಲ್ಲ: ಪ್ರತಾಪ ಸಿಂಹ ಗಲಾಟೆಗೆ ಬಿಜೆಪಿ ಸ್ಪಷ್ಟನೆ
ಪ್ರತಾಪ್ ಸಿಂಹ ಫೇಸ್ಬುಕ್ ನಲ್ಲಿ ಹಾಕಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಮಿತ್ ಷಾ ಹೆಸರು ಪ್ರಸ್ತಾಪವಾಗುತ್ತಿರುವುದಕ್ಕೆ ಯಡಿಯೂರಪ್ಪ ಸೇರಿ ಇತರ ನಾಯಕರ ವಿರೋಧ.

ಕರಾವಳಿ ಕರ್ನಾಟಕ ವರದಿ

ಮೈಸೂರು:
‘ಉಗ್ರ ಹೋರಾಟ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ನೀಡಿದ್ದರು’ ಎಂದು ಬಿಜೆಪಿ ಸಂಸದ, ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಫೇಸ್ಬುಕ್ ನಲ್ಲಿ ಹಾಕಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಮಿತ್ ಷಾ ಹೆಸರು ಪ್ರಸ್ತಾಪವಾಗುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಇತರ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಹೊಸ ಬೆಳವಣಿಗೆ ನಡೆದಿದೆ.

ಉಗ್ರಸ್ವರೂಪದ ಪ್ರತಿಭಟನೆ ನಡೆಸುವಂತೆ ಅಮಿತ್ ಷಾ ಸೂಚಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ ವಿಡಿಯೊ ವೈರಲ್ ಆಗಿದೆ ಎನ್ನುವುದು ಅರ್ಥಹೀನ. ಇದು ಸುಳ್ಳು ಮಾಹಿತಿ. ವಿನಾಕಾರಣ ಅಮಿತ್ ಷಾ ಹೆಸರು ಎಳೆದು ತರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಲಬುರ್ಗಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ರತಾಪ್ ಸಿಂಹ ವಿಡಿಯೊ ಹೇಳಿಕೆ ನಾನು ನೋಡಿಲ್ಲ. ಅಮಿತ್ ಷಾ ಅವರಿಗೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಉಗ್ರ ಹೋರಾಟ ಎನ್ನುವುದು ಪಕ್ಷದ ನೀತಿಯಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಉಗ್ರ ರೀತಿಯ ಹೋರಾಟ ನಡೆಸಬೇಕು ಎಂಬುದು ಪಕ್ಷದ ನೀತಿ ಆಗಲು ಸಾಧ್ಯವೆ? ಸಮಯ, ಸಂದರ್ಭ ನೋಡಿಕೊಂಡು ನಾಯಕರಾದವರು ಹೋರಾಟದ ಮುಂದಿನ ಹೆಜ್ಜೆ ಇಡುತ್ತಾರೆ. ನಮ್ಮ ಪಕ್ಷದ ಸಂವಿಧಾನದಂತೆ ಅಮಿತ್ ಷಾ ಸುಪ್ರೀಂ ಬಾಸ್. ಅವರು ಹೇಳಿದ್ದನ್ನು ಪಾಲನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

 ಅಮಿತ್ ಷಾ, ಯುವ ಮೋರ್ಚಾ ಹೋರಾಟದ ಬಗ್ಗೆ ಬೆಂಗಳೂರಿಗೆ ಬಂದಿದ್ದಾಗ ವಿವರಣೆ ಪಡೆದಿದ್ದರು. ಇದ್ಯಾವ ಸೀಮೆ ಹೋರಾಟ, ಸರ್ಕಾರವನ್ನು ಎಚ್ಚರಿಸುವ ರೀತಿ ಹೋರಾಟ ಮಾಡಿ ಎಂದಿದ್ದರು. ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಸಿಡಿಸುವ ಹೋರಾಟ ನಡೆಸಿ ಎಂದಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಹೇಳಿದ್ದಾರೆ.

ಉಗ್ರ ಹೋರಾಟ ಎಂಬುದು ಪಕ್ಷದ ನೀತಿಯಲ್ಲ. ಪ್ರತಾಪ್ ಸಿಂಹ ವಿಡಿಯೊ ಎಲ್ಲಿ ಹಾಕಿದ್ದಾರೆ? ಫೇಸ್ ಬುಕ್ನಲ್ಲಾ? ಸಾಂಕೇತಿಕ ಹೋರಾಟದಿಂದ ಪ್ರಯೋಜನವಿಲ್ಲ. ಜನರ ಕಷ್ಟಗಳಿಗೆ ಪರಿಹಾರ ಸಿಗುವಂತೆ ಪರಿಣಾಮಕಾರಿ ಹೋರಾಟ ನಡೆಸಿ ಎಂದು ಅಮಿತ್ ಷಾ ಅವರು ಹೇಳಿದ್ದಿರಬೇಕು. ಅದರ ಅರ್ಥ ಉಗ್ರ ಹೋರಾಟ ಎಂದಲ್ಲ ಎಂದು ಮಾಜಿ ಕಾನೂನು ಸಚಿವ, ಶಾಸಕ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಪ್ರಮುಖ ನಾಯಕರು ಪ್ರಕರಣದಲ್ಲಿ ಅಮಿತ್ ಷಾ ಹೆಸರು ಎಳೆದುತರುವುದನ್ನು ಮತ್ತು  ‘ಉಗ್ರ’ ಸ್ವರೂಪದ ಹೋರಾಟವನ್ನು ಸಮರ್ಥಿಸಿಕೊಳ್ಳದೇ ಇರುವುದು ಈ ವಿಷಯದಲ್ಲಿ ಪ್ರತಾಪ ಸಿಂಹ ಪಕ್ಷದಲ್ಲೇ ಒಂಟಿಯಾದರೆ ಎಂಬ ಭಾವನೆಗೆ ಕಾರಣವಾಗಿದೆ.

ಪ್ರತಾಪ್ ಸಿಂಹ ವಿಡೀಯೋದಲ್ಲೇನಿದೆ? 
ನವೆಂಬರ್ 30ರಂದು ಫೇಸ್ಬುಕ್ನಲ್ಲಿ 24 ನಿಮಿಷದ ವಿಡಿಯೊವನ್ನು ಸಂಸದ ಪ್ರತಾಪ ಸಿಂಹ ಅಪ್ ಲೋಡ್ ಮಾಡಿದ್ದರು. ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ ಯುವ ಮೋರ್ಚಾ ಸಭೆ ಕರೆದಿದ್ದರು. ಆ ಸಭೆಯಲ್ಲಿ ಯುವ ಮೋರ್ಚಾದಿಂದ ಏನೇನು ಹೋರಾಟ ಕೈಗೊಂಡಿದ್ದೀರಿ ಎಂದು ಕೇಳಿದರು. ನಾವು ನಡೆಸಿದ ಹೋರಾಟಗಳನ್ನು ವಿವರಿಸಿದ ಬಳಿಕ, ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಆಗುವಂತಹ ಹೋರಾಟ ನಡೆಸಿಲ್ಲ. ಆ ಥರ ನಡೆಯಬೇಕು ಎಂದರೆ ಉಗ್ರ ಹೋರಾಟ ಮಾಡಬೇಕು ಎಂದು ಸೂಚಿಸಿದ್ದರು. ಮುಂದಿನ ದಿನಗಳಲ್ಲಿ ಅಂತಹ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದೆ ಎಂದು ವಿಡಿಯೊದಲ್ಲಿ ವಿವರಿಸಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದ್ದು, ಪ್ರತಾಪ ಸಿಂಹ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಮೆಚ್ಚಿಸಲಿಕ್ಕಾಗಿಯೇ ತಮ್ಮ ವಾಹನವನ್ನು ಪೊಲೀಸ್ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆಸಿ ಮುಂದೆ ಸಾಗಿದ್ದರೆ ಎಂದು ವ್ಯಾಪಕ ಚರ್ಚೆಯಾಗುತ್ತಿದೆ.

ಪ್ರತಾಪ್ ಸಿಂಹ ಕಾರನ್ನು ಮುಂದೆ ಬಿಡಲು ತನ್ನ ಚಾಲಕರಿಗೆ ಸೂಚಿಸಿದ್ದರೂ, ರಾಜ್ಯಸರ್ಕಾರಕ್ಕೆ ಸೇರಿದ್ದ ಕಾರು ಆಗಿದ್ದರಿಂದ ಚಾಲಕ ಹಿಂಜರಿದಿದ್ದರು. ಆಗ ಚಾಲಕನ ಸ್ಥಾನದಲ್ಲಿ ಕುಳಿತ ಪ್ರತಾಪ್ ಸಿಂಹ  ಬ್ಯಾರಿಕೇಡ್ ಲೆಕ್ಕಿಸದೇ ಕಾರನ್ನು ಮುನ್ನುಗ್ಗಿಸಿದರು. ಇದರಿಂದ  ಬ್ಯಾರಿಕೇಡ್ ಪಕ್ಕದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಗಾಯವಾಗಿತ್ತು. ಅದೃಷ್ಟವಸಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದರು.  ಕರ್ತವ್ಯಕ್ಕೆ ಅಡ್ಡಿ ಹಾಗೂ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಪ್ರತಾಪ್ ಅವರನ್ನು ಬಂಧಿಸಿದ ಪೊಲೀಸರು ಮೊಕದ್ದಮೆ ದಾಖಲಿಸಿ ಅವರನ್ನು ಬಿಡುಗಡೆ ಮಾಡಿದ್ದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►'ಮೇರೆ ಪಾಸ್ ಮಾ ಹೈ' ಖ್ಯಾತಿಯ ಮೇರು ನಟ ಶಶಿ ಕಪೂರ್ ಇನ್ನಿಲ್ಲ
http://bit.ly/2jKImAk
►►ದೇವಾಲಯಕ್ಕೆ ಝಹೀರ್ ಖಾನ್ ದಂಪತಿ ಭೇಟಿ: 'ಘರ್ ವಾಪ್ಸಿ' ಎಂದು ಕಿಡಿಗೇಡಿಗಳಿಂದ ಪೋಸ್ಟ್: http://bit.ly/2npw7hx
►►ಬೈಕ್ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು: http://bit.ly/2AqxPUC
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ: http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್ಗೆ ಉಗ್ರರ ಸಂಪರ್ಕ: ಎನ್ಐಎ: http://bit.ly/2iLmh8j
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು: http://bit.ly/2ATe4Gi
►►ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್: http://bit.ly/2BwVX5y
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!: http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5

Related Tags: Pratap Simha Arrested, Hunsur, Hanuma Jayanthi, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಹುಣಸೂರು ಬಂದ್ ಕರೆ ವಾಪಾಸ್ , ಗೋರಿ ಕಲ್ಲು ಕಿತ್ತ ಕಿಡಿಗೇಡಿ, ಪ್ರತಾಪ ಸಿಂಹ, ಯಡಿಯೂರಪ್ಪ, ಅಮಿತ್ ಷಾ, ಜಗದೀಶ್ ಶೆಟ್ಟರ್, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ