ಬೈಕ್‌ಗೆ ಲಾರಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.

ಕಿನ್ನರ ನಿವಾಸಿ ಪ್ರಮೋದ್ ತಳೇಕರ್(45) ಮೃತಪಟ್ಟ ದುರ್ದೈವಿ.

ಪ್ರಮೋದ್ ಕಿನ್ನರದಿಂದ ಕಾರವಾರದ ಕಡೆ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ನೇರವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಪ್ರಮೋದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತ ಪ್ರಮೋದ್ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆಯ ನಡುಭಾಗದಲ್ಲಿ ನಡೆದ ಘಟನೆಯಿಂದಾಗಿ ಸುಮಾರು 2 ಗಂಟೆಗಳವರೆಗೆ ರಸ್ತೆಯ ಎರಡೂ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಆ ಬಳಿಕ ಶವ ಸಾಗಿಸಿದ ನಂತರದಲ್ಲಿ ಪೊಲೀಸರ ಸಹಕಾರದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.



ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ:
http://bit.ly/2jdyKhS
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್‌ಗೆ ಉಗ್ರರ ಸಂಪರ್ಕ: ಎನ್‌ಐಎ: http://bit.ly/2iLmh8j
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು: http://bit.ly/2ATe4Gi
►►ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್: http://bit.ly/2BwVX5y
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!: http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5

Related Tags: Karwar Accident, Tipper Bike Accident, Pramodh Talekar Death, Kinnar Accident, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ