ಸಂವಿಧಾನದ ಆಶಯದಂತೆ ಕೆಲಸ: ಸಂಸದ ಪ್ರತಾಪ್ ಸಿಂಹ ಟೀಕೆಗೆ ರವಿ ಚೆನ್ನಣ್ಣನವರ್ ಉತ್ತರ

ಕರಾವಳಿ ಕರ್ನಾಟಕ ವರದಿ

ಮೈಸೂರು:
ನಾವು ಎಂದೂ ಪರಿಪೂರ್ಣರಲ್ಲ, ಎಲ್ಲರಿಂದಲೂ ಕಲಿಯೋದು ಸಾಕಷ್ಟಿವೆ. ನಾವು ಯಾರ ಆಣತಿಯಂತೆ ಕೆಲಸ ಮಾಡುವುದಿಲ್ಲ ಎಂದು ಮೈಸೂರು ಎಸ್ಪಿ ರವಿ ಚೆನ್ನಣ್ಣನವರ್ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಾನು ಅಣ್ಣಾಮಲೈ, ನಮ್ಮ ಸಹೋದ್ಯೋಗಿಗಳಿಂದ, ಪೊಲೀಸ್ ಪೇದೆಯಿಂದಲೂ ಕಲಿಯಬೇಕಾಗಿದೆ. ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇವೆ. ನಾವು ಸತ್ಯದ ಪರ, ಬಡವರ ಪರ ಹಾಗೆಯೇ ಸರ್ವರ ಹಿತ ನಮಗೆ ಮುಖ್ಯ. ನಮಗೆ ಸಂಸದರ ಬಗ್ಗೆ ಅತೀವ ಗೌರವವಿದೆ.  ಏನಾದರೂ ಆಕ್ಷೇಪ, ತೊಂದರೆಗಳಿದ್ದಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಹೇಳಿದ್ದಾರೆ.

ಮೈಸೂರಿನ ಹುಣಸೂರು ಹನುಮ ಜಯಂತಿ ಮೆರವಣಿಗೆ ಗೊಂದಲದ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸರ್..? ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ, ದತ್ತ ಜಯಂತಿಯನ್ನು ಶಾಂತಿಯುತವಾಗಿ ನಡೆಸಿಕೊಟ್ಟ ಎಸ್ಪಿ ಅಣ್ಣಾಮಲೈ ಅವರನ್ನು ನೋಡಿ ಕಲಿಯಿರಿ ಎಂದು ಎಸ್ಪಿ ರವಿ ಚನ್ನಣ್ಣನವರ್ ಬಗ್ಗೆ ಟೀಕಿಸಿದ್ದರು.

ಭಾನುವಾರ ಕಾರಿನಲ್ಲಿ ಬ್ಯಾರಿಕೇಡ್‌ಗೆ ಗುದ್ದಿ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಉದ್ಧಟತನ ಪ್ರದರ್ಶನ ಮಾಡಿದ್ದಕ್ಕೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು, ನರಸೀಪುರ ಸೇರಿದಂತೆ ಮೊದಲಾದ ಕಡೆ ಸುಮಾರು 8 ಗಂಟೆ ಕಾಲ ರೌಂಡ್ ಹೊಡೆಸಿದ ನಂತರ ರಾತ್ರಿ 11 ಗಂಟೆ ಹೊತ್ತಿಗೆ ಟೀ ನರಸೀಪುರ ಪಟ್ಟಣ ಠಾಣೆಗೆ ಕರೆತಂದಿದ್ದರು. ಅಲ್ಲಿ ಪ್ರತಾಪ್ ಸಿಂಹ ಸ್ಟೇಷನ್ ಬೇಲ್ ಪಡೆದು ರಿಲೀಸ್ ಆಗಿದ್ದರು.

ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿಮಗೆ ನಿಮ್ಮ ಅಹಂ ದೊಡ್ಡದಾಗಿತ್ತು. ಆದರೆ ಅದು ನಿಮ್ಮ ಮನಸ್ಥಿತಿಯಲ್ಲಿರುವ ಲೋಪ. ಅದನ್ನು ಅಡ್ಡ ತಂದು ನಮ್ಮ ಮೇಲೆ ಗಧಾಪ್ರಹಾರ ಮಾಡಬೇಡಿ. 2015ರಲ್ಲಿ ನೀವು ಬ್ಯಾನ್ ಮಾಡಿದ 3 ರಸ್ತೆಯಲ್ಲಿ ಸುಸೂತ್ರವಾಗಿ ಹನುಮ ಜಯಂತಿ ನಡೆದಿತ್ತು.

ಆದರೆ ಇದೀಗ ಅವಕಾಶವೇ ಕೊಡುತ್ತಿಲ್ಲ. ನಾನೊಬ್ಬ ಸಂಸದನಾಗಿ ಹುಣಸೂರಿಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತೀನಿ ಎಂದು ನಿಮಗೆ ಕನಸು ಬಿದ್ದಿತ್ತಾ ಎಂದು ಸರ್ಕಾರವನ್ನ ಪ್ರಶ್ನಿಸಿದ್ದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್‌ಗೆ ಉಗ್ರರ ಸಂಪರ್ಕ: ಎನ್‌ಐಎ:
http://bit.ly/2iLmh8j
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು: http://bit.ly/2ATe4Gi
►►ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್: http://bit.ly/2BwVX5y
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!: http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5

Related Tags: Pratap Simha, Hunsur, Hanuma Jayanthi, SP Ravi Channannavar, Annamali, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ