ಹದಿಯಾ ಮದುವೆಗೆ ಮೊದಲೆ ಶೆಫಿನ್ ಜಹಾನ್‌ಗೆ ಉಗ್ರರ ಸಂಪರ್ಕ: ಎನ್‌ಐಎ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಇಸ್ಲಾಂಗೆ ಮತಾಂತರಗೊಂಡ ಅಖಿಲಾ ಯಾನೆ ಹದಿಯಾಳನ್ನು ಮದುವೆಯಾಗುವ ಮೊದಲೆ ಶೆಫಿನ್ ಜಹಾನ್ ಉಗ್ರರ ಸಂಪರ್ಕದಲ್ಲಿದ್ದ ಎಂದು ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ ಎನ್ನಲಾಗಿದೆ.

ಎಸ್‌ಡಿಪಿಐಯ ರಾಜಕೀಯ ಸಂಘಟನೆ ಪೊಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಒಳಗೊಂಡ ಫೇಸ್‌ಬುಕ್ ಗುಂಪು ಮತ್ತು ವಾಟ್ಸ್ಯಾಪ್ ಗುಂಪುಗಳ ಮೂಲಕ ಐಸಿಸ್ ಓಮರ್-ಅಲ್-ಹಿಂದಿ ಪ್ರಕರಣದಲ್ಲಿ ಒಳಗೊಂಡಿರುವ ಇಬ್ಬರು ಉಗ್ರರಾದ ಮನ್ಸೀದ್ ಮತ್ತು ಪಿ. ಸಫ್ವಾನ್ ಜೊತೆ ಶೆಫಿನ್ ಜಹಾನ್ ಸಂಪರ್ಕದಲ್ಲಿದ್ದ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಒಮರ್-ಅಲ್-ಹಿಂದಿ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಉಗ್ರರಾದ ಮನ್ಸೀದ್ ಮತ್ತು ಪಿ. ಸಫ್ವಾನ್  ಮೇಲೆ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಈ ಪ್ರಕರಣ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾರತದಲ್ಲಿ ಹೈ ಕೋರ್ಟ್ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಸಾರ್ವಜನಿಕ ಮಹತ್ವದ ಸ್ಥಳಗಳ ಮೇಲೆ ದಾಳಿ ಮಾಡುವ ಸಂಚು ಹೂಡಿದ ಕುರಿತಾಗಿದೆ.

ಎನ್‍ಐಎ ತನಿಖೆಯ ಪ್ರಕಾರ ಶೆಫಿನ್ ಜಹಾನ್ ಮತ್ತು ಹದಿಯಾ ಭೇಟಿಯಾಗಿದ್ದು ಯಾವುದೇ ವೈವಾಹಿಕ ಸೈಟ್‌ಗಳ ಮೂಲಕ ಅಲ್ಲ. ಬದಲಾಗಿ ಐಸಿಸ್ ಉಗ್ರ ಮನ್ಸೀದ್ ಮತ್ತು ಶೆಫಿನ್ ಜಹಾನ್‌ನ ಸ್ನೇಹಿತ ಮುನೀರ್ ಸೇರಿದಂತೆ ಇತರ ಎಸ್‌ಡಿಪಿಐ ಕಾರ್ಯಕರ್ತರ ಮೂಲಕ ಶೆಫಿನ್ ಜಹಾನ್ ಮತ್ತು ಹದಿಯಾ ಒಂದಾಗಿದ್ದಾರೆ. ಇಬ್ಬರೂ ಡಿಸೆಂಬರ್ 2016ರಲ್ಲಿ ಮದುವೆಯಾಗಿದ್ದಾರೆ. ಕೇರಳ ಹೈಕೋರ್ಟ್ ಈ ಮದುವೆಯನ್ನು 'ಲವ್ ಜಿಹಾದ್' ಎಂದು ಅನೂರ್ಜಿತಗೊಳಿಸಿತ್ತು.
ಎನ್‌ಐಎ ಮೂಲಗಳ ಪ್ರಕಾರ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತೆಯಾದ ಸೈನಾಬಾ ಎಂಬಾಕೆಗೆ ಮುನೀರ್ ಪರಿಚಯವಿತ್ತು. ಐಸಿಸ್ ಉಗ್ರರು ಎನ್ನಲಾದ ಮನ್ಸೀದ್ ಮತ್ತು ಸಫ್ವಾನ್ ಶೆಫಿನ್ ಜಹಾನ್ ಜ್ಜೊತೆ ಸಂಪರ್ಕದಲ್ಲಿದ್ದರು.

ಶೆಫಿನ್ ಜಹಾನ್ ಆಗ ಎಸ್‌ಡಿಪಿಐಯ ಸಕ್ರಿಯ ಕಾರ್ಯಕರ್ತನಾಗಿದ್ದ ಮತ್ತು ಎಸ್‌ಡಿಪಿಐನ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯನೂ ಆಗಿದ್ದ. ಇಬ್ಬರೂ ಸಹ 'ತನಲ್' ಎಂಬ ಹೆಸರಿನ ಎಸ್‌ಡಿಪಿಐ ಕಾರ್ಯಕರ್ತರ ಫೇಸ್‌ಬುಕ್ ಗುಂಪಿನಲ್ಲೂ ಸಕ್ರಿಯರಾಗಿದ್ದರು ಮತ್ತು 'ಎಸ್‌ಡಿಪಿಐ ಕೇರಳಮ್' ಎಂಬ ಗುಂಪಿನ ಎಡ್ಮಿನ್‌ಗಳೂ ಆಗಿದ್ದರು ಎಂದು ತಿಳಿದುಬಂದಿದೆ.

ಎನ್‌ಐಎ ತನಿಖೆಯಲ್ಲಿ ಹದಿಯಾ ಮತ್ತು ಶೆಫಿನ್ ಜಹಾನ್ ಹೇಳಿಕೆಗೂ ಬಹಳ ವ್ಯತ್ಯಾಸಗಳು ಕಂಡುಬಂಡಿವೆ. ಶೆಫಿನ್ ಜಹಾನ್ ಸೆಪ್ಟೆಂಬರ್ 19, 2015ರಂದು 'waytonikah.com' ಎಂಬ ಮುಸ್ಲಿಂ ವೈವಾಹಿಕ ಸಂಬಂಧಗಳ ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಹದಿಯಾಳನ್ನು ಆ ಸೈಟ್‌ನಲ್ಲಿ ಪಿಎಫ್‌ಐನ ಮಹಿಳಾ ಘಟಕದ ಕಾರ್ಯಕರ್ತೆ ಸೈನಾಬಾ ಏಪ್ರಿಲ್ 17, 2016ರಲ್ಲಿ ನೋಂದಣಿ ಮಾಡಿದ್ದಳು.

ಈ ಸೈಟ್ಟ್‍ನಲ್ಲಿ ಹದಿಯಾ  ಏಪ್ರಿಲ್ 17 ಮತ್ತು ಏಪ್ರಿಲ್ 23ರ ನಡುವೆ 49 ಯುವಕರ ಪ್ರೊಫೈಲ್‌ಗಳನ್ನು ನೋಡಿದ್ದು ಶೆಫಿನ್ ಜಹಾನ್ ಪ್ರೊಫೈಲ್ ಅನ್ನು ಆಕೆ ನೋಡಿರಲೇ ಇಲ್ಲ. ಶೆಫಿನ್ ಜಹಾನ್ ಇದೇ ಸೈಟ್‌ನಲ್ಲಿ 67 ಪ್ರೊಫೈಲ್‌ಗಳನ್ನು ನೋಡಿದ್ದು ಆತ ಹದಿಯಾ ಪ್ರೊಫೈಲ್‌ ಅನ್ನು ನೋಡಿರಲೇ ಇಲ್ಲ.

ಡಿಸೆಂಬರ್ 31, 2016ರಂದು ಮದುವೆಯಾಗುವ ತನಕವೂ ಅವರಿಬ್ಬರಿಗೆ ಪರಿಚಯವೇ ಇರಲಿಲ್ಲ ಎಂದು ಎನ್‌ಐಎ ಹೇಳುತ್ತಿದೆ. ಈ ಮದುವೆಯ ಬಗ್ಗೆ ಮುನೀರ್ ಆಗಸ್ಟ್ 2016ರಲ್ಲಿ ಪ್ರಸ್ತಾಪಿಸಿದ್ದ್ದು ಶೆಫಿನ್ ಜಹಾನ್ ಐಸಿಸ್ ಸಂಪರ್ಕ ಹೊಂದಿದ್ದ ಮನ್ಸೀದ್ ಮತ್ತು ಸಫ್ವಾನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಎನ್‌ಐಎ ಅಧಿಕಾರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಸಂಬಂಧಿತ ಸುದ್ದಿಗಳು ಇಲ್ಲಿವೆ
►►ಗಂಡನಿಗೆ ಹದಿಯಾ ಫೋನ್: ಹದಿಯಾ ತಂದೆ ಅಶೋಕನ್ ಆಕ್ರೋಶ. ಸುಪ್ರೀಂಗೆ ದೂರು:
http://bit.ly/2irbaRR
►►ಕುಟುಂಬದಲ್ಲೊಬ್ಬಳು ಉಗ್ರಗಾಮಿ ಬೇಡ: ಹದಿಯಾ ತಂದೆ ಅಶೋಕನ್: http://bit.ly/2iZHXdH
►►ಹದಿಯಾಳನ್ನು ಭೇಟಿಯಾಗಲು ಗಂಡನಿಗೆ ಅನುಮತಿ ನೀಡುವುದಿಲ್ಲ: ಕಾಲೇಜು ಪ್ರಾಂಶುಪಾಲರ ಹೇಳಿಕೆ: http://bit.ly/2hYTxoE
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ http://bit.ly/2fMuHuz
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!: http://bit.ly/2hBmN7O
►►ನಾನು ಮತಾಂತರದ ವಿರೋಧಿ ಅಲ್ಲ. ಆದರೆ ಇದರಲ್ಲೇನೋ ಮೋಸವಿದೆ: ಅಶೋಕನ್: http://bit.ly/2wZczzX
►►ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ: http://bit.ly/2wk36DP
►►ಮರುಮತಾಂತರಕ್ಕೆ ಚಿತ್ರಹಿಂಸೆ. ಯೋಗ ಕೇಂದ್ರದ ವಿರುದ್ಧ ಆರೋಪ ನಿರಾಕರಿಸಿದ ಅದಿರಾ: http://bit.ly/2wj94Fj
►►ಇಸ್ಲಾಂ ಸ್ವೀಕರಿಸದಿದ್ದರೆ ನರಕಕ್ಕೆ ಹೋಗುತ್ತೇನೆಂದು ಭಯಗೊಂಡಿದ್ದೆ: ಅದಿರಾ: http://bit.ly/2fHnKYy
►►ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡೆ: ಮರಳಿ ಹಿಂದೂ ಧರ್ಮಕ್ಕೆ ಸೇರಿದ ಅದಿರಾ: http://bit.ly/2jQxiVH
►►ಬೇಲೂರಿನ ಬಾಲೆ, ಪ್ಲೇಟ್ ತಿರುವಿದ ಮೇಲೆ: http://bit.ly/1fIcvf6
►►ಮತಾಂತರಗೊಂಡ ಮಗನ ಕೊಲೆ ಮಾಡಿದ್ದ ಆರೆಸ್ಸೆಸ್: ಈಗ ತಂದೆಯೂ ಮತಾಂತರ: http://bit.ly/2hexdKB
►►ಲವ್ ಜಿಹಾದ್ ತನಿಖೆ: ಅಖಿಲಾ ಯಾನೆ ಹದಿಯಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ: http://bit.ly/2vDOIJ0
►►ಮತಾಂತರದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡ? ಎನ್ಐಎಯಿಂದ ಲವ್ ಜಿಹಾದ್ ತನಿಖೆ: http://bit.ly/2wLwsyD
►►ಮತಾಂತರದ ಮದುವೆ ಕೇಸ್: ‘ಲವ್ ಜಿಹಾದ್’ ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ: http://bit.ly/2i5tC1t
►►ಐಎಎಸ್ ಟಾಪರ್ಸ್ ಟೀನಾ-ಆಮೀರುಲ್ ವಿವಾಹಕ್ಕೆ ಹಿಂದೂ ಮಹಾಸಭಾ ಅಡ್ಡಿ: http://bit.ly/2gXx3WA
►►ಸಂಘಪರಿವಾರದಿಂದ "ಲವ್ ಜಿಹಾದ್" ಎಂದು ಕೋಲಾಹಲ: ಕೊನೆಗೂ ಒಂದಾದರು ಪ್ರೇಮಿಗಳು: http://bit.ly/2glfgpg
►►ಲವ್ ಜಿಹಾದ್, ಅಂತರ್ಜಾತಿ ವಿವಾಹ. 2 ನೈಜ ಘಟನೆಗಳು: http://bit.ly/1zth4z0
►►ಗುಜರಾತ್‌ನಲ್ಲಿ ಲವ್ ಜಿಹಾದ್‌ಗೆ ಲಕ್ಷಲಕ್ಷ ಆಫರ್. ಕಿಡಿಗೇಡಿಗಳ ಕೃತ್ಯ ಶಂಕೆ: http://bit.ly/1R10iRa
►►ಸಂಘಪರಿವಾರದ ಕೇಸರಿ ಲವ್ ಧೋಖಾ! ಪಿಎಫ್ಐ: http://bit.ly/2esfiPe
►►ಬಸ್ಸಿನಲ್ಲಿ ಭಿನ್ನ ಕೋಮಿನ ಜೋಡಿ. ದಾಳಿಗೆ ಹೊಂಚು. ಪೊಲೀಸರಿಂದ ಭದ್ರತೆ: http://bit.ly/2fBakzz
►►ಹಿಂದೂ ಹುಡುಗಿ ಮಾತಾಡಿದಳೆಂದು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಎಬಿವಿಪಿ ಕಾರ್ಯಕರ್ತ: http://bit.ly/2dDMfaP
►►ಬಾಡಿಗೆಗೆ ವಸತಿ ಸಿಗದೆ ಹಿಂದೂ ಹೆಸರಿಟ್ಟುಕೊಂಡು ಐಎಎಸ್ ಪಾಸ್ ಮಾಡಿದ ಮುಸ್ಲಿಂ ಯುವಕ: http://bit.ly/1T6DyBD
►►ಮಂಗಳೂರಿನಲ್ಲಿ ಇನ್ನೊಂದು ಅನೈತಿಕ ಪೊಲೀಸ್‌ಗಿರಿ. ಈ ಬಾರಿ ಮುಸ್ಲಿಂ ಹುಡುಗಿ-ಹಿಂದೂ: http://bit.ly/1OvglEF

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು:
http://bit.ly/2ATe4Gi
►►ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್: http://bit.ly/2BwVX5y
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!: http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5
►►ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ: ಕೊಹ್ಲಿ ಮತ್ತೊಂದು ದಾಖಲೆ: http://bit.ly/2zZ3T3j
►►ಅಣು ವಿದ್ಯುತ್ ಘಟಕಗಳು ಅಪಾಯಕಾರಿ: ಪ್ರಶಾಂತ ಭೂಷಣ: http://bit.ly/2ASz6Vy

Related Tags: Akhila, Hadiya, Love Jehad, Shefin Jehan, NIA, ISIS Link
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ