ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ದಾಳಿ: ಅಮೇರಿಕದಲ್ಲಿ ಮಂಗಳೂರು ಮಹಿಳೆ ಸಾವು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಅಮೆರಿಕದ ಕೋಸ್ಟರಿಕಾ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ನೆಸುತ್ತಿದ್ದ ವೇಳೆಯಲ್ಲಿ ಶಾರ್ಕ್‌ ಒಂದು ದಾಳಿ ನಡೆಸಿದ ಪರಿಣಾಮ ಮಂಗಳೂರು ಮೂಲದ ಮಹಿಳೆಯೋರ್ವರು ಸಾವನ್ನಪ್ಪಿದ ಖೇದಕರ ಘಟನೆ ವರದಿಯಾಗಿದೆ.

ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ಫೈನಾನ್ಸ್‌ -ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಪ್ರೊಫೆಶನಲ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು ಮೂಲದ ರೊಹಿನಾ ಭಂಡಾರಿ (49) ಸಾವನ್ನಪ್ಪಿದ ದುರ್ದೈವಿ.

ರೊಹಿನಾ 19 ಮಂದಿಯ ತಂಡದೊಂದಿಗೆ ವಿಹಾರಕ್ಕೆ ತೆರಳಿದ್ದರು. ಕೋಸ್ಟ ರಿಕಾದ ಕೋಕೋಸ್‌ ದ್ವೀಪದ ಬಳಿ ಸಾಗರದಲ್ಲಿ ಸ್ಕೂಬಾ ಡೈವಿಂಗ್‌ನಲ್ಲಿ ರೊಹಿನಾ ನಿರತರಾಗಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದೆ.

ಪುರುಷ ಮಾರ್ಗದರ್ಶಿಯೋರ್ವರು ಗೈಡ್‌ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಶಾರ್ಕ್‌ವೊಂದು ರೊಹಿನಾ ಹಾಗೂ ಗೈಡ್‌ ಮೇಲೆ ದಾಳಿ ನಡೆಸಿತ್ತು. ಪರಿಣಾಮ ಶಾರ್ಕ್‌ ರೊಹಿನಾ ಅವರ ಎರಡೂ ಕಾಲುಗಳಿಗೆ ಕಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡ ಆಗಮಿಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನು ಘಟನೆಯಲ್ಲಿ ಗಾಯಗೊಡಿದ್ದ ಮಾರ್ಗದರ್ಶಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಸ್ಕೂಬಾ ಡೈವಿಂಗ್‌ ಅವಕಾಶಕ್ಕೆ ನಿರ್ಬಂಧ
ಕೋಸ್ಟರಿಕಾ ದ್ವೀಪ ಪ್ರದೇಶದಲ್ಲಿ ಕೆಲವು ಸಮಯದ ಹಿಂದೆ 2 ಗಂಡು ಹಾಗೂ 1 ಹೆಣ್ಣು ಟೈಗರ್‌ ಶಾರ್ಕ್‌ಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಶಾರ್ಕ್‌ಗಳು ಕಂಡುಬಂದಿದ್ದ  ಪ್ರದೇಶದಲ್ಲಿ ಮಾರ್ಕ್‌ ಮಾಡಿ ಅಲ್ಲಿ ಸ್ಕೂಬಾ ಡೈವಿಂಗ್‌ ಅವಕಾಶ ನಿರ್ಬಂಧಿಸಲಾಗಿತ್ತು ಎನ್ನಲಾಗಿದೆ.

ಮಂಗಳೂರು ಕೋಟೆಕಾರಿನ ನಿವಾಸಿ
ರೊಹಿನಾ ಭಂಡಾರಿ ಅವರು ಮೂಲತಃ ಮಂಗಳೂರಿನ ಕೋಟೆಕಾರಿನ ನಿವಾಸಿಯಾಗಿದ್ದು, ಪ್ರಸ್ತುತ ರೊಹಿನಾ ಕುಟುಂಬದವರು ಮುಂಬಯಿ ಹಾಗೂ ಅಮೆರಿಕದಲ್ಲಿ ನೆಲೆಸಿದ್ದಾರೆ.

ರೊಹಿನಾ ಭಂಡಾರಿಯವರು ಜಾರ್ಜ್‌ ವಾಷಿಂಗ್ಟನ್‌ ಯೂನಿವರ್ಸಿಟಿಯಲ್ಲಿ ಮಾಸ್ಟರ್‌ ಆಫ್‌ ಸೈನ್ಸ್‌ ಇನ್‌ ಫಿನಾನ್ಸ್‌ ಪದವಿ ಹಾಗೂ ಏಷಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಪದವಿಗಳನ್ನು ಪಡೆದಿದ್ದರು.

ಚೆನ್ನೈಯಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದ ಬಾಲಕೃಷ್ಣ ಶೆಟ್ಟಿ ಅವರ ಮೊಮ್ಮಗಳಾದ ರೊಹಿನಾ ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ ಅಪ್ಪರ್‌ ಇಸ್ಟ್‌ ಸೈಡ್‌ನ‌ಲ್ಲಿ ವಾಸಿಸುತ್ತಿದ್ದು, ಡಬ್ಲ್ಯು ಆ್ಯಂಡ್‌ ಕಂಪೆನಿಯಲ್ಲಿ ಹಿರಿಯ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್:
http://bit.ly/2BwVX5y
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!: http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5
►►ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ: ಕೊಹ್ಲಿ ಮತ್ತೊಂದು ದಾಖಲೆ: http://bit.ly/2zZ3T3j
►►ಅಣು ವಿದ್ಯುತ್ ಘಟಕಗಳು ಅಪಾಯಕಾರಿ: ಪ್ರಶಾಂತ ಭೂಷಣ: http://bit.ly/2ASz6Vy

Related Tags: Scuba Diving, Costa Rica, Rohina Bhandari, Isla del Coco, Death
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ