ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ ನೈಜ ಚಿತ್ರಣ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ವಿಜಯ ಸಾಧಿಸಿದೆ ಎಂದು ಮುಖ್ಯವಾಹಿನಿಯ ಇಂಗ್ಲೀಷ್ ಮತ್ತು ಹಿಂದಿ ಮಾಧ್ಯಮಾಗಳು ವರದಿ ಮಾಡಿದ್ದವು. ಆದರೆ ನಿಜ ಸಂಗತಿ ಏನು ಗೊತ್ತೆ?

ಕರಾವಳಿ ಕರ್ನಾಟಕ ವರದಿ

ಲಕ್ನೋ:
ಉತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಇತರ ಪಕ್ಷಗಳನ್ನು ಧೂಳಿಪಟ ಮಾಡಿದೆ ಎನ್ನಲಾದ ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲ ಎಂಬ ಸಂಗತಿ ಈಗ ಬೆಳಕಿಗೆ ಬರುತ್ತಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ವಿಜಯ ಸಾಧಿಸಿದೆ ಎಂದು ಮುಖ್ಯವಾಹಿನಿಯ ಇಂಗ್ಲೀಷ್ ಮತ್ತು ಹಿಂದಿ ಮಾಧ್ಯಮಾಗಳು ವರದಿ ಮಾಡಿದ್ದವು. ಆದರೆ ವಾಸ್ತವ ಸಂಗತಿ ಅದಕ್ಕೆ ದೂರವಾಗಿದೆ ಎಂದು ಇತ್ತೀಚಿನ ವಿಶ್ಲೇಷಣೆಗಳು ತೋರಿಸಿಕೊಟ್ಟಿವೆ.

ಫಲಿತಾಂಶಗಳ ವಿವರಗಳನ್ನು ನೋಡಿದರೆ ಉತ್ತರ ಪ್ರದೇಶದ ಮುನಿಸಿಪಲ್ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಗೆಲುವು ಮಾಧ್ಯಮದ ಸೃ಼ಷ್ಟಿ ಎಂಬುದು ಸ್ಪಷ್ಟವಾಗಿದೆ. ಕೇವಲ ಮಹಾನಗರ ಪ್ರದೇಶಗಳಲ್ಲಿ ಮಾತ್ರ ಬಿಜೆಪಿ ಇತರ ಪಕ್ಷಗಳಿಗೆ ಹೋಲಿಸಿದರೆ ಮೇಲುಗೈ ಸಾಧಿಸಿದೆ.

1.53 ಕೋಟಿ ಮತದಾರರಿದ್ದ 16 ಕಾರ್ಪೊರೇಷನ್‌ಗಳಲ್ಲಿ  ಬಿಜೆಪಿ ಶೇ. 46 ರಷ್ಟು ವಾರ್ಡುಗಳಲ್ಲಿ ಗೆದ್ದಿದೆ. 14  ಕಾರ್ಪೊರೇಷನ್‌ಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಲಕ್ನೊ, ಕಾನ್ಪುರ, ಗಾಝಿಯಾಬಾದ್ ಮುಂತಾದ ಮಹಾನಗರಗಳಲ್ಲಿ ಬಿಜೆಪಿ ನಿಜಕ್ಕೂ ಭಾರೀ ಮುನ್ನಡೆ ಸಾಧಿಸಿದೆ.

ಆರೆಸ್ಸೆಸ್ ಪ್ರಭಾವ ಇಲ್ಲೆಲ್ಲ ಎದ್ದು ಕಾಣುತ್ತಿದೆ. 1300 ವಾರ್ಡ್‌ಗಳಲ್ಲಿ ಬಿಜೆಪಿ 596 ವಾರ್ಡುಗಳಲ್ಲಿ ಗೆದ್ದಿದೆ. ಆದರೆ ಮಹಾನಗರಗಳ ಆಚೆ ಹೋದರೆ ಬಿಜೆಪಿ ಸಾಧನೆ ಅಷ್ಟಕ್ಕಷ್ಟೆ ಎಂಬುದು ಕಂಡುಬರುತ್ತದೆ.


1.2 ಕೋಟಿ ಮತದಾರರಿರುವ 198 ಮುನಿಸಿಪಲ್ ಕೌನ್ಸಿಲುಗಳಲ್ಲಿ  ಬಿಜೆಪಿ ಕೇವಲ ಶೇ. 18 ರಷ್ಟು ವಾರ್ಡುಗಳಲ್ಲಿ ಗೆದ್ದಿದೆ. 5261 ವಾರ್ಡ್‌ಗಳ ಪೈಕಿ ಬಿಜೆಪಿ ಗೆದ್ದಿರುವುದು ಕೇವಲ 922 ವಾರ್ಡ್‌ಗಳಲ್ಲಿ ಮಾತ್ರ. ಇಲ್ಲಿ 3442 ಪಕ್ಷೇತರರು ಗೆದ್ದಿದ್ದಾರೆ.

ಈ ಪಕ್ಷೇತರ ಅಭ್ಯರ್ಥಿಗಳು ವಿಜೇತರಾದ ಬಳಿಕ ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸುವುದು ಸಾಮಾನ್ಯ ಪ್ರವೃತ್ತಿಯಾದರೂ ಸಹ ಹೆಚ್ಚಿನ ಪಕ್ಷೇತತ ಅಭ್ಯರ್ಥಿಗಳು ಗೆದ್ದಿದ್ದು ಬಿಜೆಪಿ ಅಭ್ಯರ್ಥಿಗಳ ಎದುರು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.

ಇನ್ನೂ ಕೆಳ ಹಂತಕ್ಕೆ ಹೋದರೆ ಬಿಜೆಪಿಯ ಸ್ಥಿತಿ ಇನ್ನೂ ದಯನೀಯವಾಗಿದೆ. 57.3 ಲಕ್ಷ ಮತದಾರರಿರುವ 439 ಮುನಿಸಿಪಲ್ ಪಂಚಾಯತುಗಳಲ್ಲಿ  ಬಿಜೆಪಿ ಕೇವಲ ಶೇ. 12 ರಷ್ಟು ವಾರ್ಡುಗಳಲ್ಲಿ ಗೆದ್ದಿದೆ. ಒಟ್ಟು 5446 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿರುವುದು ಕೇವಲ 664 ವಾರ್ಡ್‌ಗಳಲ್ಲಿ ಮಾತ್ರ. ಇಲ್ಲಿಯೂ 3985 ಸ್ಥಾನಗಳನ್ನು ಅಂದರೆ ಸುಮಾರು ಶೇಕಡಾ 71ರಷ್ಟು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ. ಇಲ್ಲಿಯೂ ಪಕ್ಷೇತರರು ಹೆಚ್ಚಿನವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಎದುರೇ ಗೆದ್ದಿದ್ದಾರೆ ಎನ್ನುವುದು ಗಮನಾರ್ಹವಾಗಿದೆ.

ಎರಡನೆಯ ಮತ್ತು ಮೂರನೆಯ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆಯಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ 80 ಸ್ಥಾನಗಳಲ್ಲಿ 71 ಸ್ಥಾನಗಳನ್ನು ಅಂದರೆ 89 ಶೇಕಡಾ ಸ್ಥಾನಗಳನ್ನು ಗಳಿಸಿತ್ತು. ಆದರೆ ಈಗ ಒಟ್ಟಾರೆಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 28% ಸಾಧನೆ ಮಾಡೂವಲ್ಲಿಯೂ ಬಿಜೆಪಿ ಎಡವಿದೆ. 28 ಶೇಕಡಾ ಸ್ಥಾನ ಗಳಿಸಿದ ಬಿಜೆಪಿಯ ವಿಜಯವನ್ನು ಬೃಹತ್ ವಿಜಯ ಎಂದು ಬಣ್ಣಿಸುವುದು ಹೇಗೆ ಸಾಧ್ಯ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ 16 ಕಾರ್ಪೊರೇಶನ್‌ಗಳಲ್ಲಿ ಮಾತ್ರ ಮತಯಂತ್ರಗಳನ್ನು ಬಳಸಲಾಗಿತ್ತು. ಉಳಿದ 198 ಮುನಿಸಿಪಲ್ ಕೌನ್ಸಿಲುಗಳಲ್ಲಿ ಮತ್ತು 439 ಮುನಿಸಿಪಲ್ ಪಂಚಾಯತುಗಳಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ಚುನಾವಣೆ ನಡೆಸಲಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ:
http://bit.ly/2Ans5v5
►►ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ: ಕೊಹ್ಲಿ ಮತ್ತೊಂದು ದಾಖಲೆ: http://bit.ly/2zZ3T3j
►►ಅಣು ವಿದ್ಯುತ್ ಘಟಕಗಳು ಅಪಾಯಕಾರಿ: ಪ್ರಶಾಂತ ಭೂಷಣ: http://bit.ly/2ASz6Vy
►►ಶಾಂತಿಯ ಚಂದಾವರಕ್ಕೆ ಕೋಮುವಿಷ: ಕೋಮುಗಲಭೆಗೆ ಸಿಪಿಐಎಂ ಖಂಡನೆ: http://bit.ly/2jFZdnL
►►ವೈದ್ಯರಿಗೆ ಲ್ಯಾಬ್‌ಗಳಿಂದ ಸಿಕ್ಕಾಪಟ್ಟೆ ಕಮೀಷನ್: ಐ.ಟಿ ದಾಳಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: http://bit.ly/2iGsvGh
►►ಅಪರೂಪದ ರಕ್ತ ಕೊಡಲು ಕತಾರ್‌ನಿಂದ ಬಂದ ಯುವಕ: ಗರ್ಭಿಣಿಯ ಜೀವ ಉಳಿಯಿತು!: http://bit.ly/2zVdAiT
►►ಸಂಗೊಳ್ಳಿ ರಾಯಣ್ಣ ಸಂಘಟನೆಯಿಂದ ಧಿಕ್ಕಾರ: ಕೆಂಡವಾದ ಸಿಎಂ: http://bit.ly/2AAuXFt
►►ಮದರ್ ತೆರೆಸಾ ಭಾರತ ಬಡದೇಶವೆಂದು ಬಿಂಬಿಸಿದರು. ಮತಾಂತರ ಮಾಡಿದರು: ಆರೆಸ್ಸೆಸ್ ಮುಖಂಡ: http://bit.ly/2AORAXi
►►ಹೊನ್ನಾವರದಲ್ಲಿ ಕೋಮು ಸಂಘರ್ಷ. ಲಾಠಿ ಚಾರ್ಜ್. ಹಿಂದೂ ಸಂಘಟನೆ ನಾಯಕರು ವಶಕ್ಕೆ: http://bit.ly/2zVdrMx
►►ಬೈಕ್ ಮುಖಾಮುಖಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು: http://bit.ly/2zWzEtJ

Related Tags: Uttar Pradesh, Local Body Elections, BJP Victory, Landslide Victory, Reality Check
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ