ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ: ಕೊಹ್ಲಿ ಮತ್ತೊಂದು ದಾಖಲೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಇಲ್ಲಿನ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಿನ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಭರ್ಜರಿ  ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ ಎಂಬ ದಾಖಲೆಗೆ ಕೊಹ್ಲಿ ಭಾಜನರಾಗಿದ್ದು, ಬ್ರ್ಯಾನ್‌ ಲಾರಾ ಮತ್ತು ಗ್ರೇಮ್‌ ಸ್ಮಿತ್‌ ಅವರ ತಲಾ 5 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಅಂತೆಯೇ ಸಚಿನ್‌ ತೆಂಡುಲ್ಕರ್‌ ಮತ್ತು ಸೆಹ್ವಾಗ್‌ ಅವರ 6 ದ್ವಿಶತಕ ಸಿಡಿಸಿದ ದಾಖಲೆಗಳನ್ನು ಸರಿಗಟ್ಟಿದ್ದಾರೆ.

238 ಎಸೆತಗಳಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿದ್ದು, ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಸತತವಾಗಿ 2ನೇ ದ್ವಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ವಿನೋದ್ ಕಾಂಬ್ಳಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಸತತವಾಗಿ 2ನೇ ದ್ವಿಶತಕ ದಾಖಲಿಸಿದ್ದ ಆಟಗಾರರಾಗಿದ್ದರು.

ಮೊದಲ ದಿನದಾಟದ ಅಂತ್ಯಕ್ಕೆ 156 ರನ್‌ಗಳಿಸಿದ್ದ ಕೊಹ್ಲಿ ಇಂದು ಆಟ ಮುಂದುವರಿಸಿ  ದ್ವಿಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು. 207 ರನ್‌ಗಳಿಸಿರುವ ಕೊಹ್ಲಿ ಆಟ ಮುಂದುವಸಿದ್ದು, ತಂಡದ ಮೊತ್ತ 4 ವಿಕೆಟ್‌ ನಷ್ಟಕ್ಕೆ 458. ರೊಹಿತ್‌ ಶರ್ಮಾ 41 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 20ನೇ ಶತಕ ಸಿಡಿಸುವ ಮೂಲಕ ಹೊಸದೊಂದು ಮೈಲಿಗಲ್ಲು ದಾಖಲಿಸಿದ್ದರು. ಟೆಸ್ಟ್ ಕ್ರಿಕೆಟಿನಲ್ಲಿ ವಿರಾಟ್ ಕೊಹ್ಲಿ 5 ಸಾವಿರ ರನ್ ಪೂರೈಸಿದ ಭಾರತದ 11ನೇ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದರು.


ಇಂದು ಹೆಚ್ಚು ಓದಿದ ಸುದ್ದಿಗಳು
►►ಅಣು ವಿದ್ಯುತ್ ಘಟಕಗಳು ಅಪಾಯಕಾರಿ: ಪ್ರಶಾಂತ ಭೂಷಣ:
http://bit.ly/2ASz6Vy
►►ಶಾಂತಿಯ ಚಂದಾವರಕ್ಕೆ ಕೋಮುವಿಷ: ಕೋಮುಗಲಭೆಗೆ ಸಿಪಿಐಎಂ ಖಂಡನೆ: http://bit.ly/2jFZdnL
►►ವೈದ್ಯರಿಗೆ ಲ್ಯಾಬ್‌ಗಳಿಂದ ಸಿಕ್ಕಾಪಟ್ಟೆ ಕಮೀಷನ್: ಐ.ಟಿ ದಾಳಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: http://bit.ly/2iGsvGh
►►ಅಪರೂಪದ ರಕ್ತ ಕೊಡಲು ಕತಾರ್‌ನಿಂದ ಬಂದ ಯುವಕ: ಗರ್ಭಿಣಿಯ ಜೀವ ಉಳಿಯಿತು!: http://bit.ly/2zVdAiT
►►ಸಂಗೊಳ್ಳಿ ರಾಯಣ್ಣ ಸಂಘಟನೆಯಿಂದ ಧಿಕ್ಕಾರ: ಕೆಂಡವಾದ ಸಿಎಂ: http://bit.ly/2AAuXFt
►►ಮದರ್ ತೆರೆಸಾ ಭಾರತ ಬಡದೇಶವೆಂದು ಬಿಂಬಿಸಿದರು. ಮತಾಂತರ ಮಾಡಿದರು: ಆರೆಸ್ಸೆಸ್ ಮುಖಂಡ: http://bit.ly/2AORAXi
►►ಹೊನ್ನಾವರದಲ್ಲಿ ಕೋಮು ಸಂಘರ್ಷ. ಲಾಠಿ ಚಾರ್ಜ್. ಹಿಂದೂ ಸಂಘಟನೆ ನಾಯಕರು ವಶಕ್ಕೆ: http://bit.ly/2zVdrMx
►►ಬೈಕ್ ಮುಖಾಮುಖಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು: http://bit.ly/2zWzEtJ
►►ಓಖಿ ಮಾರುತ: ಮಂಗಳೂರಲ್ಲಿ 2 ಹಡಗು ಮುಳುಗಡೆ, 16 ಮಂದಿ ರಕ್ಷಣೆ: http://bit.ly/2j8VSht
►►ನನ್ನ ಮತವೇ ನನಗೆ ಸಿಗಲಿಲ್ಲ: ಮತ ಯಂತ್ರದ ಬಗ್ಗೆ ಪಕ್ಷೇತರ ಅಭ್ಯರ್ಥಿ ಆರೋಪ: http://bit.ly/2zWtNEG

Related Tags: India vs Sri Lanka, 3rd Test, Day 2, Virat Kohli Hits Record, Sixth Test Double Century, Kannada News, Sports News, Cricket News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ