ವೈದ್ಯರಿಗೆ ಲ್ಯಾಬ್‌ಗಳಿಂದ ಸಿಕ್ಕಾಪಟ್ಟೆ ಕಮೀಷನ್: ಐ.ಟಿ ದಾಳಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರೋಗಿಗಳನ್ನು ವಿವಿಧ ಪರೀಕ್ಷೆಗಳಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವ ವೈದ್ಯರುಗಳಿಗೆ ಅಲ್ಲಿಂದ ಕೋಟ್ಯಂತರ ರೂಪಾಯಿಗಳು ಕಮೀಷನ್ ರೂಪದಲ್ಲಿ ಸಂದಾಯವಾಗಿರುವ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಐದು ವೈದ್ಯಕೀಯ ಪರೀಕ್ಷಾ ಕೇಂದ್ರಗಳ ಮೇಲೆ (ಡಯಗ್ನೊಸ್ಟಿಕ್ ಸೆಂಟರ್ಸ್) ಆದಾಯ ತೆರಿಗೆ ದಾಳಿ ನಡೆದ ಸಮಯದಲ್ಲಿ ವೈದ್ಯರಿಗೆ ಭಾರೀ ಮೊತ್ತದ ಕಮೀಷನ್ ಸಂದಾಯವಾಗಿರುವುದು ತಿಳಿದುಬಂದಿದೆ.

ರೋಗಿ ವೈದ್ಯರಲ್ಲಿ ಚಿಕಿತ್ಸೆಗೆ ಹೋದಾಗ ಅನಗತ್ಯ ಪರೀಕ್ಷೆಗಳಿಗಾಗಿಯೂ ಪ್ರಯೋಗಾಲಯಕ್ಕೆ ವೈದ್ಯರು ಶಿಫಾರಸು ಮಾಡಿ ಕಮೀಷನ್ ಗಳಿಸುತ್ತಾರೆ ಎಂಬ ಆರೋಪಗಳಿಗೆ ಈ ದಾಳಿ ಸಾಕ್ಷ್ಯ ಒದಗಿಸಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕೆಪಿಎಂಇ ವೈದ್ಯಕೀಯ ಕಾಯ್ದೆ ತಿದ್ದುಪಡಿಯ ವೇಳೆ ವೈದ್ಯರ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಈ ಅನಗತ್ಯ ಪರೀಕ್ಷೆಗಳ ವಿಷಯವೂ ಪ್ರಸ್ತಾಪವಾಗಿತ್ತು.

ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿರುವ ಕೆಲ ವಿಚಾರಗಳೆಂದರೆ ಸಿಟಿ ಸ್ಕ್ಯಾನ್‌ಗೆ 20-25 ಶೇಕಡಾ ಕಮಿಷನ್ ಸಿಗುತ್ತಿದ್ದರೆ ಎಂಆರ್‌ಐ ಮುಂತಾದ ಕೆಲ ಪರೀಕ್ಷೆಗಳನ್ನು ಶಿಫಾರಸು ಮಾಡಿದ ವೈದ್ಯರಿಗೆ ಪರೀಕ್ಷಾ ವೆಚ್ಚದ 35 ಶೇಕಡಾ ಹಣವನ್ನು ಕಮೀಷನ್ ರೂಪದಲ್ಲಿ ನೀಡಲಾಗುತ್ತದೆ.

ಈ ಕಮೀಷನ್ ಅನ್ನು ಪ್ರತಿಯೊಬ್ಬ ವೈದ್ಯರಿಗೂ ಹದಿನೈದು ದಿನಗಳಿಗೊಮ್ಮೆ ನಗದು ರೂಪದಲ್ಲಿ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಕೆಲವೊಂದು ಪ್ರಕರಣಗಳಲ್ಲಿ ವೈದ್ಯರಿಗೆ ಪರೀಕ್ಷೆಗಳಿಗೆ ಮುನ್ನವೇ ಮುಂಗಡ ಪಾವತಿ ಮಾಡಲಾಗಿದ್ದು ರೋಗಿಗಳನ್ನು ಶಿಫಾರಸು ಮಾಡಿದ ಬಳಿಕ ಅದನ್ನು ಹೊಂದಿಸಿಕೊಳ್ಳಲಾಗಿದೆ.

ಕೆಲವೊಂದು ವೈದ್ಯರಿಗೆ ಚೆಕ್ ಮೂಲಕ ಪಾವತಿ ಮಾಡಲಾಗಿದ್ದು ಆ ವೈದ್ಯರಿಗೆ ನೀಡಿದ ಹಣವನ್ನು 'ವೃತ್ತಿಪರ ಶುಲ್ಕ' ಎಂದು ನಮೂದಿಸಲಾಗಿದೆ. ಆದರೆ ಈ ವೈದ್ಯರು ಆ ಪ್ರಯೋಗಾಲಯಗಳಿಗೆ ಎಂದೂ ಭೇಟಿ ನೀಡಿಲ್ಲ ಎಂಬುದೂ ತನಿಖೆಯಲ್ಲಿ ಕಂಡುಬಂದಿದೆ.

ಪರೀಕ್ಷಾ ಕೇಂದ್ರಗಳಿಗೆ ವೈದ್ಯರು ಅಗತ್ಯ ಮತ್ತು ಅನಗತ್ಯ ಪರೀಕ್ಷೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಲು ದಲ್ಲಾಳಿಗಳನ್ನೂ ಸಹ ಪ್ರಯೋಗಾಲಯಗಳು ನೇಮಿಸಿವೆ. ಈ ದಲ್ಲಾಳಿಗಳು (ಏಜೆಂಟ್) ಪ್ರತಿಯೊಂದು ಪ್ರಯೋಗಾಲಯಗಳಲ್ಲಿ ಒಂದು ಲಕೋಟೆಯನ್ನು ಪ್ರತಿ ವೈದ್ಯರ ಹೆಸರಿನಲ್ಲಿ ಇಟ್ಟಿರುತ್ತಾರೆ. ಈ ಲಕೋಟೆಗಳಲ್ಲಿ ವೈದ್ಯರ ಹೆಸರು, ಅವರು ಶಿಫಾರಸು ಮಾಡಿದ ರೋಗಿಗಳ ಹೆಸರು, ಪರೀಕ್ಷೆಗಳ ವಿವರ, ವೆಚ್ಚ, ಕಮೀಷನ್ ಹಣ ಎಲ್ಲವನ್ನೂ ಇದರಲ್ಲಿ ನಮೂದಿಸಲಾಗುತ್ತದೆ.

ಕಮೀಷನ್ ಮಾವತಿ ಮಾಡುವಾಗ ಮೊತ್ತದಲ್ಲಿ ವ್ಯತ್ಯಾಸವಾಗಿದ್ದರೆ ಹೆಚ್ಚಿನ ವೈದ್ಯರು ಏಜೆಂಟರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ ಬಳಿಕ ಪ್ರಯೋಗಾಲಯವನ್ನು ಸ್ವತಃ ಸಂಪರ್ಕಿಸಿ ತಮ್ಮ ಕಮೀಷನ್ ಮೊತ್ತವನ್ನು ಅಂತಿಮಗೊಳಿಸುತ್ತಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಆಘಾತಕಾರಿ ವಿಷಯೆಂದರೆ ಕೇವಲ  ಒಂದು ಲ್ಯಾಬ್‌ ಬರೋಬ್ಬರಿ 200 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ಕಮೀಷನ್ ರೂಪದಲಿ ಪಾವತಿಸಿದೆ. ಇದೇ ಲ್ಯಾಬ್ ಈ ಹಿಂದಿನ ಸಾಲಿನಲ್ಲಿ ಸುಮಾರು 100 ಕೋಟಿ ರೂಪಾಯಿಗಳನ್ನು ಆದಾಯದಲ್ಲಿಯೂ ಕಾಣಿಸಿಲ್ಲ.

ಆದಾಯ ತೆರಿಗೆ ದಾಳಿಗಳ ವೇಳೆ ಅಪಾರ ಪ್ರಮಾಣದ ಹಣ, ಆಭರಣಗಳು, ಚಿನ್ನದ ಬಿಸ್ಕಿಟ್‌ಗಳು ಪತ್ತೆಯಾಗಿದ್ದು ಕೋಟ್ಯಂತರ ಹಣ ಜಮೆಯಾಗಿರುವ ವಿದೇಶಿ ಬ್ಯಾಂಕ್ ಖಾತೆಗಳ ವಿವರಗಳೂ ಪತ್ತೆಯಾಗಿವೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಅಪರೂಪದ ರಕ್ತ ಕೊಡಲು ಕತಾರ್‌ನಿಂದ ಬಂದ ಯುವಕ: ಗರ್ಭಿಣಿಯ ಜೀವ ಉಳಿಯಿತು!:
http://bit.ly/2zVdAiT
►►ಸಂಗೊಳ್ಳಿ ರಾಯಣ್ಣ ಸಂಘಟನೆಯಿಂದ ಧಿಕ್ಕಾರ: ಕೆಂಡವಾದ ಸಿಎಂ: http://bit.ly/2AAuXFt
►►ಮದರ್ ತೆರೆಸಾ ಭಾರತ ಬಡದೇಶವೆಂದು ಬಿಂಬಿಸಿದರು. ಮತಾಂತರ ಮಾಡಿದರು: ಆರೆಸ್ಸೆಸ್ ಮುಖಂಡ: http://bit.ly/2AORAXi
►►ಹೊನ್ನಾವರದಲ್ಲಿ ಕೋಮು ಸಂಘರ್ಷ. ಲಾಠಿ ಚಾರ್ಜ್. ಹಿಂದೂ ಸಂಘಟನೆ ನಾಯಕರು ವಶಕ್ಕೆ: http://bit.ly/2zVdrMx
►►ಬೈಕ್ ಮುಖಾಮುಖಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು: http://bit.ly/2zWzEtJ
►►ಓಖಿ ಮಾರುತ: ಮಂಗಳೂರಲ್ಲಿ 2 ಹಡಗು ಮುಳುಗಡೆ, 16 ಮಂದಿ ರಕ್ಷಣೆ: http://bit.ly/2j8VSht
►►ನನ್ನ ಮತವೇ ನನಗೆ ಸಿಗಲಿಲ್ಲ: ಮತ ಯಂತ್ರದ ಬಗ್ಗೆ ಪಕ್ಷೇತರ ಅಭ್ಯರ್ಥಿ ಆರೋಪ: http://bit.ly/2zWtNEG

Related Tags: IT Raids on Doctors, Bengaluru, Doctors and Diagnostic Centres, Commission, Tests, KPME Act
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ