ಅಪರೂಪದ ರಕ್ತ ಕೊಡಲು ಕತಾರ್‌ನಿಂದ ಬಂದ ಯುವಕ: ಗರ್ಭಿಣಿಯ ಜೀವ ಉಳಿಯಿತು!

ಕರಾವಳಿ ಕರ್ನಾಟಕ ವರದಿ

ದೋಹಾ:
ಅಪರೂಪದ ರಕ್ತ ಎಂದೇ ಕರೆಯಲ್ಪಡುವ ಬಾಂಬೆ ಗ್ರೂಪ್ ರಕ್ತ ದಾನ ಮಾಡಲು ಕತಾರ್‍‍ನಿಂದ ಕುವೈತ್‍ಗೆ ಪ್ರಯಾಣ ಬೆಳೆಸಿ ಗರ್ಭಿಣಿಯ ಪ್ರಾಣ ಉಳಿಸಿದ ಯುವಕನ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕತಾರ್‍‍ನ ಅಲ್ ಅನ್ಸಾರ್ ಗ್ಯಾಲರಿಯಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ನಿದೀಶ್ ರಘುನಾಥ್ ನಾಗರಿಕರ ಪ್ರಶಂಸೆಗೆ ಪಾತ್ರರಾದ ಯುವಕ.

ನೆರವಾದ ವಾಟ್ಸ್ಯಾಪ್ ಸಂದೇಶ
ಕುವೈತ್‍ನ ಅದಾನ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೊಳಪಡಲಿದ್ದ ಕರ್ನಾಟಕ ಮೂಲದ ಗರ್ಭಿಣಿಯೊಬ್ಬರಿಗೆ ಅಪರೂಪದ ರಕ್ತ ಎಂದೇ ಕರೆಯಲ್ಪಡುವ ಬಾಂಬೆ ಗ್ರೂಪ್ ರಕ್ತದ ಅವಶ್ಯವಿತ್ತು. ಕೂಡಲೇ ವಾಟ್ಸ್ಯಾಪ್ ಸೇರಿದಂತೆ ಇತರ ಸಾಮಾಜಿಕ ತಾಣದಲ್ಲಿಯೂ ರಕ್ತದಾನಿಗಳಿಗಾಗಿ ಹುಡುಕಾಟ ನಡೆಯಿುತು.

ಈ ಸಂದೇಶ ಕತಾರ್‍‍ನ ಅಲ್ ಅನ್ಸಾರ್ ಗ್ಯಾಲರಿಯಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ನಿದೀಶ್ ರಘುನಾಥ್ ಅವರಿಗೂ ತಲುಪಿತು. ಬಿಡಿಕೆ - ಕತಾರ್ ಚಾಪ್ಟರ್ ಈ ಹಿಂದೆ ರಕ್ತ ಪರೀಕ್ಷೆ ಮಾಡಿದಾಗ ನಿದೀಶ್ ಅವರ ರಕ್ತದ ಗುಂಪು ಬಾಂಬೆ ಗ್ರೂಪ್ ಎಂದು ತಿಳಿದುಬಂದಿದ್ದು, ತಕ್ಷಣವೇ ನಿದೀಶ್ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆದು ಅವರನ್ನು ಕತಾರ್‍‍ಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಯಿತು.

ತಾಯಿ ಮಗುವಿನ ಪ್ರಾಣ ಉಳಿಸಿದ ನಿದೀಶ್
ವೀಸಾ ಪ್ರಕ್ರಿಯೆಗಳನ್ನೆಲ್ಲ ಪೂರ್ಣಗೊಳಿಸಿ ಗುರುವಾರ ಮಧ್ಯಾಹ್ನ ನಿದೀಶ್ ಕುವೈತ್ ತಲುಪಿದ್ದು, ರಕ್ತ ಪರೀಕ್ಷೆ ನಡೆಸಿದ ನಂತರ ಜಾಬಿರಿಯಾ ರಕ್ತ ನಿಧಿಯಲ್ಲಿ ರಕ್ತದಾನ ಮಾಡಲಾಯಿತು. ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ನಿತೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ತಿಳಿಸಿದ್ದಾರೆ.

ಕುವೈತ್‍ನ  ಆರೋಗ್ಯ ವಿಭಾಗ ನಿದೀಶ್ ಅವರನ್ನು ಸನ್ಮಾನಿಸಿದ್ದು, ಇಂದು ಕತಾರ್‍‍ಗೆ ಮರಳುವ ನಿತೀಶ್‍ಗೆ ಬಿಡಿಕೆ ಚಾಪ್ಟರ್ ಸದಸ್ಯರು ಸ್ವಾಗತ ಕೋರಲಿದ್ದಾರೆ. ರಕ್ತದಾನ ಮಾಡುವ ಮೂಲಕ ನಿದೀಶ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಿಡಿಕೆ ಕತಾರ್ ಚಾಪ್ಟರ್ ಅಧ್ಯಕ್ಷ ಶಾಜಿ ವೆಟ್ಟುಕಾಟ್ಟಿಲ್ ಹೇಳಿದ್ದಾರೆ.

ಏನಿದು ಬಾಂಬೆ ರಕ್ತ?
ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಜಿಟನ್‌, ಬಿ ಗುಂಪಿನಲ್ಲಿ ಬಿ-ಆ್ಯಂಜಿಟನ್‌, ಎಬಿಯಲ್ಲಿ ಎಬಿ-ಆ್ಯಂಜಿಟನ್‌ ಮತ್ತು ಒ ಗುಂಪಿನಲ್ಲಿ ಎಚ್‌ ಆ್ಯಂಜಿಟನ್‌ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್‌-ಆ್ಯಂಜಿಟನ್‌ ಅಂಶ ಇರುವುದಿಲ್ಲವೋ ಅಂತಹವರು ಬಾಂಬೆ ರಕ್ತದ ಗುಂಪಿನವರು ಎಂದು ಗುರುತಿಸಲಾಗುತ್ತದೆ.

ಈ ರಕ್ತದ ಮಾದರಿ ಮೊದಲು ಪತ್ತೆಯಾಗಿದ್ದು ಮುಂಬೈಯಲ್ಲಿ. ಹಾಗಾಗಿ ಮುಂಬೈನ ಹಳೆಯ ಹೆಸರು ಬಾಂಬೆ ಬ್ಲಡ್‌ ಎಂದು ನಾಮಕರಣ ಮಾಡಲಾಗಿದೆ. 1952ರಲ್ಲಿ ಮುಂಬೈನಲ್ಲಿ ವೈ.ಆರ್‌. ಭೇಂಡೆ ಎಂಬುವವರು ಈ ರಕ್ತದ ಗುಂಪನ್ನು ಪತ್ತೆ ಮಾಡಿದರು. ಎ, ಬಿ, ಎಬಿ ಒ ರಕ್ತ ಗುಂಪಿನಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಇದ್ದಂತೆ ಬಾಂಬೆ ರಕ್ತದಲ್ಲಿಯೂ ಪಾಸಿಟಿವ್‌ ಮತ್ತು ನೆಗೆಟಿವ್‌ ಗುಂಪು ಇರುತ್ತದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಸಂಗೊಳ್ಳಿ ರಾಯಣ್ಣ ಸಂಘಟನೆಯಿಂದ ಧಿಕ್ಕಾರ: ಕೆಂಡವಾದ ಸಿಎಂ:
http://bit.ly/2AAuXFt
►►ಮದರ್ ತೆರೆಸಾ ಭಾರತ ಬಡದೇಶವೆಂದು ಬಿಂಬಿಸಿದರು. ಮತಾಂತರ ಮಾಡಿದರು: ಆರೆಸ್ಸೆಸ್ ಮುಖಂಡ: http://bit.ly/2AORAXi
►►ಹೊನ್ನಾವರದಲ್ಲಿ ಕೋಮು ಸಂಘರ್ಷ. ಲಾಠಿ ಚಾರ್ಜ್. ಹಿಂದೂ ಸಂಘಟನೆ ನಾಯಕರು ವಶಕ್ಕೆ: http://bit.ly/2zVdrMx
►►ಬೈಕ್ ಮುಖಾಮುಖಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು: http://bit.ly/2zWzEtJ
►►ಓಖಿ ಮಾರುತ: ಮಂಗಳೂರಲ್ಲಿ 2 ಹಡಗು ಮುಳುಗಡೆ, 16 ಮಂದಿ ರಕ್ಷಣೆ: http://bit.ly/2j8VSht
►►ನನ್ನ ಮತವೇ ನನಗೆ ಸಿಗಲಿಲ್ಲ: ಮತ ಯಂತ್ರದ ಬಗ್ಗೆ ಪಕ್ಷೇತರ ಅಭ್ಯರ್ಥಿ ಆರೋಪ: http://bit.ly/2zWtNEG
►►ಕಲ್ಲಿದ್ದಲು ಸರಬರಾಜಿನಲ್ಲೂ ರಾಜಕೀಯ: ಕೇಂದ್ರ ಸರ್ಕಾರದ ಮೇಲೆ ಡಿಕೆಶಿ ಆರೋಪ: http://bit.ly/2kklziQ
►►ಹಿಂದೂ ಗುಂಪುಗಳ ನಡುವೆ ಘರ್ಷಣೆ. ಭಗತ್ ಸಿಂಗ್ ಗುಂಪಿನ ಹುಡುಗರು ಗಂಭೀರ: http://bit.ly/2ANLWEK
►►ಪ್ರಧಾನಿ ಮೋದಿಗೆ ಖಾಸಗಿಯಾಗಿ ಸಹಿಷ್ಣುತೆಯ ಪಾಠ ಮಾಡಿದ ಒಬಾಮಾ!: http://bit.ly/2jBrFqN

Related Tags: Bombay Blood Group, Donor, Qtara, Mumbai, Nidhish Raghunath, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ