ಸಂಗೊಳ್ಳಿ ರಾಯಣ್ಣ ಸಂಘಟನೆಯಿಂದ ಧಿಕ್ಕಾರ: ಕೆಂಡವಾದ ಸಿಎಂ
ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಧಿಕ್ಕಾರ ಕೂಗಿದಾಗ ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳಬೇಕು ಎಂದು ಮುನ್ನಡೆದ ಸಿಎಂ.

ಕರಾವಳಿ ಕರ್ನಾಟಕ ವರದಿ

ಬಾಗಲಕೋಟೆ:
ಬಸವೇಶ್ವರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಸದಸ್ಯರು ಧಿಕ್ಕಾರ ಕೂಗಿದ್ದರಿಂದ ಕೋಪಗೊಂಡ ಘಟನೆ ವರದಿಯಾಗಿದೆ.

ಮುಖ್ಯಮಂತ್ರಿ ಸಾರ್ವಜನಿಕ ಅಹವಾಲು ಸ್ವೀಕರಿಸಲು ಮುಂದಾದ ವೇಳೆ ಈ ಘಟನೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವಿರುದ್ಧ ಸಿಎಂ ಹರಿಹಾಯ್ದರು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ ವೇಳೆ ಮುಖ್ಯಮಂತ್ರಿ, ಪರಿಶಿಷ್ಟ ಪಂಗಡಕ್ಕೆ ಈಗಿರುವ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂದರು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರ ನೀವೇ ನೆಟ್ಟ ಸಸಿ. ಆದರೆ ಈಗ ನೀವೇ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಸಂಘಟನೆಯ ಕಾರ್ಯಾಧ್ಯಕ್ಷ ವೀರಣ್ಣ ಹಳೇಗೌಡರ ಅವರು ಹೇಳಿದಾಗ ಮುಖ್ಯಮಂತ್ರಿ ಸಿಟ್ಟಾದರು.

ಯಾರೋ ನೀನು, ನಿನಗೆ ಇದೆಲ್ಲಾ ಯಾರ್ ಹೇಳಿ ಕೊಟ್ಟಿದ್ದು, ಪರಿಶಿಷ್ಟ ಪಂಗಡ ಅಂದರೆ ಏನು ಗೊತ್ತಾ ನಿನಗೆ? ನೀನು ಹೇಳಿದ ಹಾಗೇ ನಾನು ಮಾಡೋಕಾಗಲ್ಲ ಎಂದು ಕಾರಿನತ್ತ ತೆರಳಿದರು.ಈ ವೇಳೆ ಸಿ.ಎಂ ವಿರುದ್ಧ ಧಿಕ್ಕಾರ ಕೇಳಿ ಬಂದಾಗ ಸಿಎಂ ಮತ್ತಷ್ಟು ಕೋಪಗೊಂಡರು. ಕಾಂಗ್ರೆಸ್ ಮುಖಂಡ ಡಾ.ದೇವರಾಜ ಪಾಟೀಲ ಸಮಾಧಾನ ಪಡಿಸಲು ಯತ್ನಿಸಿದರೂ ಸಿದ್ದರಾಮಯ್ಯ ನಿಲ್ಲದೇ ಮುಂದೆ ನಡೆದರು.

ಕಾರಿನ ಬಳಿ ತೆರಳಿದಾಗ ಎಸ್ಪಿ ರಿಷ್ಯಂತ್ ಅವರಿಗೆ ಸಿ.ಎಂ, ಯಾರ್ರೀ ಅವರನ್ನು ಒಳಗೆ ಬಿಟ್ಟಿದ್ದು. ಕೂಡಲೇ ಅವ್ರನ್ನೆಲ್ಲಾ ಕರೆದುಕೊಂಡು ಹೋಗಿ ಎಂದರು.

ಸಿ.ಎಂ ಜೊತೆ ವಾಗ್ವಾದ ನಡೆಸಿದ ಕಾರಣ ನನ್ನನ್ನು ಸೇರಿದಂತೆ ಸಂಘಟನೆಯ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದು ಅಮೀನಗಡ ಪೊಲೀಸ್ ಠಾಣೆಗೆ ತಂದಿದ್ದಾರೆ ಎಂದು ವೀರಣ್ಣ ಹಳೇಗೌಡರ, ವಾಟ್ಸ್ಆ್ಯಪ್ ಮೂಲಕ ಪತ್ರಕರ್ತರಿಗೆ ಸಂದೇಶ ಕಳುಹಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮದರ್ ತೆರೆಸಾ ಭಾರತ ಬಡದೇಶವೆಂದು ಬಿಂಬಿಸಿದರು. ಮತಾಂತರ ಮಾಡಿದರು: ಆರೆಸ್ಸೆಸ್ ಮುಖಂಡ:
http://bit.ly/2AORAXi
►►ಹೊನ್ನಾವರದಲ್ಲಿ ಕೋಮು ಸಂಘರ್ಷ. ಲಾಠಿ ಚಾರ್ಜ್. ಹಿಂದೂ ಸಂಘಟನೆ ನಾಯಕರು ವಶಕ್ಕೆ: http://bit.ly/2zVdrMx
►►ಬೈಕ್ ಮುಖಾಮುಖಿ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಸಾವು: http://bit.ly/2zWzEtJ
►►ಓಖಿ ಮಾರುತ: ಮಂಗಳೂರಲ್ಲಿ 2 ಹಡಗು ಮುಳುಗಡೆ, 16 ಮಂದಿ ರಕ್ಷಣೆ: http://bit.ly/2j8VSht
►►ನನ್ನ ಮತವೇ ನನಗೆ ಸಿಗಲಿಲ್ಲ: ಮತ ಯಂತ್ರದ ಬಗ್ಗೆ ಪಕ್ಷೇತರ ಅಭ್ಯರ್ಥಿ ಆರೋಪ: http://bit.ly/2zWtNEG
►►ಕಲ್ಲಿದ್ದಲು ಸರಬರಾಜಿನಲ್ಲೂ ರಾಜಕೀಯ: ಕೇಂದ್ರ ಸರ್ಕಾರದ ಮೇಲೆ ಡಿಕೆಶಿ ಆರೋಪ: http://bit.ly/2kklziQ
►►ಹಿಂದೂ ಗುಂಪುಗಳ ನಡುವೆ ಘರ್ಷಣೆ. ಭಗತ್ ಸಿಂಗ್ ಗುಂಪಿನ ಹುಡುಗರು ಗಂಭೀರ: http://bit.ly/2ANLWEK
►►ಪ್ರಧಾನಿ ಮೋದಿಗೆ ಖಾಸಗಿಯಾಗಿ ಸಹಿಷ್ಣುತೆಯ ಪಾಠ ಮಾಡಿದ ಒಬಾಮಾ!: http://bit.ly/2jBrFqN
►►ಮೊಟ್ಟೆ ದರ ಏರಿಕೆ: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ: http://bit.ly/2iwqgoU
►►'ಲವ್ ಜಿಹಾದ್' ಎಂದು ಹಿಂದೂ ಹುಡುಗಿಯದ್ದೇ ಮಾನ ಹರಾಜು ಹಾಕಿದ ಸಂಘಟನೆಗಳು: http://bit.ly/2niHU17

Related Tags: Bagalkote, Chief Minister, Sangolli Rayanna Yuva Gharjane Sanghatane, protesters arrested, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ