ಹದಿಯಾ 'ಗೃಹ ಬಂಧನ' ಅಂತ್ಯ. ಶಿಕ್ಷಣ ಮುಂದುವರಿಸಲು ಕಾಲೇಜಿಗೆ: ಸುಪ್ರೀಂ ಆದೇಶ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ನನ್ನ ಸ್ವಾತಂತ್ರ್ಯ ನನಗೆ ಮರಳಿ ಬೇಕು ಎಂದ ಅಖಿಲಾ ಯಾನೆ ಹದಿಯಾಳ ಮಾತಿಗೆ ಮನ್ನಣೆ ಕೊಟ್ಟ ಸುಪ್ರೀಂ ಕೋರ್ಟ್ ಆಕೆಯ ಕಾಲೇಜು ಶಿಕ್ಷಣ ಮುಂದುವರಿಸಲು ಅನುಮತಿ ನೀಡಿದೆ. ಈ ಮೂಲಕ ಕಳೆದ ಹನ್ನೊಂದು ತಿಂಗಳ 'ಗೃಹ ಬಂಧನ' ಹದಿಯಾ ಪಾಲಿಗೆ ಅಂತ್ಯ ಕಂಡಿದ್ದು ಆಕೆ ತನ್ನ ಹೋಮಿಯೊಪತಿ ಕೋರ್ಸ್ ಅನ್ನು ಮುಗಿಸಲು ತಮಿಳುನಾಡಿನ ಸೇಲಂಗೆ ತೆರಳಲಿದ್ದಾಳೆ.

ಹದಿಯಾಳ ಇಸ್ಲಾಂಗೆ ಮತಾಂತರ ಮತ್ತು ಶೆಫಿನ್ ಜಹಾನ್ ಎಂಬ ಯುವಕನ ಜೊತೆಗೆ ಮದುವೆ 'ಲವ್ ಜಿಹಾದ್' ಪ್ರಕರಣ ಎಂದು ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಕೇರಳ ಹೈಕೋರ್ಟ್ ಹದಿಯಾ ಮತ್ತು ಶೆಫಿನ್ ಜಹಾನ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಬಳಿಕ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ 'ಲವ್ ಜಿಹಾದ್' ಎಂಬ ಪರಿಕಲ್ಪನೆ ಇರುವುದು ನಿಜವೆ ಎಂದು ತನಿಖೆ ಮಾಡಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಆದೇಶಿಸಿತ್ತು.

ಇಂದು ಸುಪ್ರೀಮ್ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾದ ಹದಿಯಾ ತನ್ನನ್ನು ಕಾನೂನುಬಾಹಿರವಾಗಿ ಹನ್ನೊಂದು ತಿಂಗಳಿನಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ನ್ಯಾಯಾಧೀಶರ ಎದುರು ಹೇಳಿಕೆ ನೀಡಿದಳು.

ನಾನು ಒಳ್ಳೆಯ ನಾಗರಿಕಳು ಮತ್ತು ವೈದ್ಯಳಾಗಬಯಸುತ್ತೇನೆ, ನನಗೆ ನನ್ನ ಸ್ವಾತಂತ್ರ್ಯ ಮರಳಿ ಬೇಕಾಗಿದೆ ಎಂದು ಹದಿಯಾ ಹೇಳಿದ್ದಾಳೆ. ಶಿಕ್ಷಣ ಮುಂದುವರಿಸುವ ಬಗ್ಗೆ ನ್ಯಾಯಾಧೀಶರು ಕೇಳಿದಾಗ ಶಿಕ್ಷಣವನ್ನು ಮುಂದುವರಿಸುವ ಬಯಕೆಯನ್ನು ಹದಿಯಾ ವ್ಯಕ್ತಪಡಿಸಿದ್ದಾಳೆ. ಕೇರಳ ಸರ್ಕಾರದ ಸರ್ಕಾರಿ ವೆಚ್ಚದಲ್ಲಿ ಶಿಕ್ಷಣ ಮುಂದುವರಿಸಲು ಬಯಸುವಿರಾ ಎಂದು ಕೋರ್ಟ್ ಕೇಳಿದಾಗ 'ನನ್ನ ಪತಿ ಶೆಫಿನ್ ಜಹಾನ್ ನನ್ನ ಶಿಕ್ಷಣದ ವೆಚ್ಚ ಭರಿಸಲು ಸಮರ್ಥರಿದ್ದಾರೆ, ಸರ್ಕಾರದ ಹಣ ಬೇಡ' ಎಂದು ಹದಿಯಾ ಹೇಳಿದ್ದಾಳೆ.

ಪತಿಯನ್ನು ಪಾಲಕನಾಗಿ ಮಾಡಬೇಕೆಂದು ಮನವಿ ಮಾಡಿದ ಹದಿಯಾ
ತನ್ನ ಮುಂದಿನ ಶಿಕ್ಷಣದ ಅವಧಿಯಲ್ಲಿ ತನ್ನ ತಂದೆಯ ಬದಲು ತನ್ನ ಪತಿಯನ್ನೇ ಪಾಲಕನನ್ನಾಗಿ ಎಂದು ಪರಿಗಣಿಸಬೇಕು ಎಂದು ಹದಿಯಾ ಮನವಿ ಮಾಡಿದಳು. ಆದರೆ ಈ ಮನವಿಯನ್ನು ತಳ್ಳಿ ಹಾಕಿದ ಕೋರ್ಟ್ ಹದಿಯಾ ಕಲಿಯುತ್ತಿರುವ ಶಿವರಾಜ್ ಹೋಮಿಯೊಪತಿಕ್ ಮೆಡಿಕಲ್ ಕಾಲೇಜ್‌ನ ಡೀನ್ ಅವರನ್ನೇ ಹದಿಯಾಳ ಪಾಲಕರನ್ನಾಗಿ ನೇಮಿಸಿ ಆದೇಶ ಹೊರಡಿಸಿತು. ಕಾಲೇಜಿನಲ್ಲಿ ಆಕೆಯ ಸಂಪೂರ್ಣ ಹೊಣೆ ಕಾಲೇಜ್‌ನ ಡೀನ್ ಅವರದ್ದು ಎಂದು ಕೋರ್ಟ್ ಹೇಳಿದೆ. ತಮಿಳುನಾಡು ಸರ್ಕಾರ ಹಾಸ್ಟೆಲ್ ಸೇರಿದಂತೆ ಎಲ್ಲ ಕಡೆ ಹದಿಯಾಳಿಗೆ ಮಹಿಳಾ ಪೊಲೀಸರನ್ನೂ ಒಳಗೊಂಡು ಸಂಪೂರ್ಣ ರಕ್ಷಣೆ ನೀಡಬೇಕೆಂದು ಆದೇಶಿಸಿದೆ. 'ಗಂಡಸು ಯಾವತ್ತೂ ಹೆಣ್ಣಿನ ಪಾಲನಲ್ಲ, ನಾನು ನನ್ನ ಹೆಂಡತಿಯ ಪಾಲಕನಲ್ಲ' ಎಂದು ಇದೇ ಸಂದರ್ಭದಲ್ಲಿ ನ್ಯಾಪೀಠದಲ್ಲಿದ್ದ ನ್ಯಾಯಮೂರ್ತಿ ಹೇಳಿದರು.

ಹದಿಯಾಳ ಪ್ರಕರಣದಲ್ಲಿ ಯಾವುದೇ ತೀರ್ಪು ನೀಡುವ ಮುನ್ನ ಎನ್‌ಐಎ ನೀಡಿದ ನೂರು ಪುಟಗಳ ವರದಿಯನ್ನು ಒಮೆ ಪರೀಶಿಲಿಸಬೇಕು ಎಂದು ಎನ್‌ಐಎ ಮತ್ತ್ತುಹದಿಯಾ ತಂದೆ ಅಶೋಕನ್ ಅವರ ವಕೀಲರು ನ್ಯಾಯಾಲಯಕ್ಕೆ ಮನವೈ ಮಾಡಿದರು. ಇದನ್ನು ಒಪ್ಪದ ಶೆಫಿನ್ ಜಹಾನ್ ಪರ ವಕೀಲ ಕಪಿಲ್ ಸಿಬಲ್ 'ಇಲ್ಲಿ ಹದಿಯಾ ಇದ್ದಾಳೆ, ಎನ್‌ಐಎ ಹೇಳುವುದನ್ನು ಕೇಳುವ ಬದಲು ಹದಿಯಾಳನ್ನೇ ಕೇಳಬೇಕು' ಎಂದು ಆಗ್ರಹಿಸಿದರು.

ಹದಿಯಾ ಮತ್ತು ಶೆಫಿನ್ ಜಹಾನ್ ಅವರ ಮದುವೆಯ ಬಗ್ಗೆ ಇಂದು ಯಾವುದೇ ತೀರ್ಪು ನೀಡದ ಸುಪ್ರೀಮ್ ಕೋರ್ಟ್ ಹದಿಯಾಳಿಗೆ ಸದ್ಯಕ್ಕೆ ಮುಂದಿನ ಹನ್ನೊಂದು ತಿಂಗಳ ಶಿಕ್ಷಣ ಪೂರೈಸಲು ಅವಕಾಶ ನೀಡಿದೆ. ಈ ಅವಧಿಯಲ್ಲಿ ಆಕೆ ತನ್ನ ತಂದೆ ಅಥವಾ ಪತಿಯನ್ನು ಭೇಟಿ ಮಾಡಬಹುದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಆದರೆ ಆಕೆ ತಾನು ಬಯಸಿದವರನ್ನು ಭೇಟಿಯಾಗಬಹುದು ಎಂದೇ ಈ ತೀರ್ಪು ಹೇಳುತ್ತದೆ ಎಂದು ಹದಿಯಾ ಪರ ವಕೀಲರು ಹೇಳಿದ್ದಾರೆ.ಪ್ರಕರಣದ ಸಂಪೂರ್ಣ ವಿವರ
ಹಿಂದೂ ಯುವತಿಯಾಗಿದ್ದ ಅಖಿಲಾ ಇಸ್ಲಾಂಗೆ ಮತಾಂತರಗೊಂಡು ಹದಿಯಾ ಎಂದು ಹೆಸರನ್ನು ಬದಲಿಸಿಕೊಂಡಿದ್ದಳು. ಆದರೆ ತನ್ನ ಬದುಕಿನಲ್ಲಿ ಮತಾಂತರದಂತಹ ಮಹತ್ವದ ನಿರ್ಧಾರವನ್ನು ಅಖಿಲಾ ತನ್ನ ಹೆತ್ತವರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕಾಗಿತ್ತು ಎಂದು ಕೇರಳ ಹೈಕೋರ್ಟ್ ಅಪರೂಪದ ಕಾರಣ ಹೇಳಿ ಈ ಮದುವೆಯನ್ನು ರದ್ದು ಮಾಡಿತ್ತು. ಮಾತ್ರವಲ್ಲ ಈ ಮದುವೆಯಲ್ಲಿ ಏನೋ ಅಸಹಜವಾದದ್ದು ಇದೆ ಎಂದು ಹೈಕೋರ್ಟ್ ಹೇಳಿತ್ತು.

ಶೆಫಿನ್ ಜಹಾನ್ ಒಂದು ಮುಸ್ಲಿಂ ವೈವಾಹಿಕ ಸಂಬಂಧಗಳ ಸೈಟ್ ಮೂಲಕ ಹದಿಯಾ(ಅಖಿಲಾ) ಅವರ ಪರಿಚಯ ಮಾಡಿಕೊಂಡಿದ್ದರು. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಾ ಇಸ್ಲಾಂಗೆ ಮತಾಂತಗೊಂಡಿದ್ದ ಅಖಿಲಾ ಬಳಿಕ ಜೆಹಾನ್ ಅವರನ್ನು ಭೇಟಿ ಮಾಡಿದ್ದರು. ಜೆಹಾನ್ಗೆ ಹದಿಯಾಳ ಹಿನ್ನೆಲೆ ಗೊತ್ತಿತ್ತು ಎಂದು ಜೆಹಾನ್ ಹೇಳಿದ್ದರು.

ಅಖಿಲಾ(ಹದಿಯಾ) ಮತಾಂತರಗೊಂಡ ನಂತರ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದಳು. ಆಕೆಯ ತಂದೆ ಅಶೋಕನ್ ಆಕೆಯನ್ನು ಹುಡುಕಿಕೊಡುವಂತೆ ಮೂರು ಬಾರಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. 

ಡಿಸೆಂಬರ್ 19ರಂದು ಜೆಹಾನ್ ಮತ್ತು ಹದಿಯಾ ಇಸ್ಲಾಂನ ಧಾರ್ಮಿಕ ವಿಧಿಗಳಂತೆ ಮದುವೆಯಾಗಿದ್ದರು. ಮದುವೆಯ ನೋಂದಣಿಗಾಗಿ ಓಡಾಡುತ್ತಿರುವಾಗಲೆ ಹದಿಯಾ ಹೈಕೋರ್ಟ್ಗೆ ಹಾಜರಾಗಬೇಕೆಂದು ಆದೇಶ ಹೊರಬಿದ್ದಿತ್ತು.

“ನನ್ನ ಮಗಳನ್ನು ಐಸಿಸ್ ಉಗ್ರಗಾಮಿ ಸಂಘಟನೆಯಲ್ಲಿ ಕೆಲಸ ಮಾಡಲು ಸಿರಿಯಾಕ್ಕೆ ಕಳುಹಿಸುವ ಸಲುವಾಗಿ ಮತಾಂತರಿಸಲಾಗಿದೆ” ಎಂದು ಅಖಿಲಾ ತಂದೆ ಅಶೋಕನ್ ದೂರಿಕೊಂಡಿದ್ದರು. ಆದರೆ ಪೊಲೀಸರು ಈ ಕುರಿತು ತನಿಖೆ ನಡೆಸಿ ಆಕೆ ಸಿರಿಯಾಕ್ಕೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.

ಅಖಿಲಾ ಕೂಡ ತನ್ನ ತಂದೆಗೆ ಈ ಕುರಿತು ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ತಾನು ಬಾರತದಲ್ಲೆ ಇರುತ್ತೇನೆ ಮತ್ತು ಇಲ್ಲಿಂದ ಎಲ್ಲೂ ಹೋಗುವುದಿಲ್ಲ ಎಂದು ಸಹ ಅಖಿಲಾ ಯಾನೆ ಹದಿಯಾ ಹೇಳಿದ್ದರು. ಆದರೆ ಹೈಕೋರ್ಟ್ ಇದೀಗ ಅಖಿಲಾ ಯಾನೆ ಹದಿಯಾ ಮತ್ತು ಜೆಹಾನ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿದೆ. ಆಕೆಯ ತಂದೆಯ ಜೊತೆ ಆಕೆ ಹೋಗಬೇಕೆಂದು ಹೈಕೋರ್ಟ್ ಹೇಳಿತ್ತು.

ಹೈಕೋರ್ಟ್ನ ಈ ತೀರ್ಮಾನದಿಂದ ಅನ್ಯಾಯವಾಗಿದ್ದು ತಮ್ಮ ಹಕ್ಕನ್ನು ಕೇಳಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅಖಿಲಾ ಯಾನೆ ಹದಿಯಾಳನ್ನು ಮದುವೆಯಗಿದ್ದ ಜೆಹಾನ್ ಹೇಳಿದ್ದರು. ಆಕೆ ತನ್ನ ಇಷ್ಟದ ಧರ್ಮವನ್ನು ಆಯ್ಕೆ ಮಾಡಿಕೊಂಡಿದ್ದಾಳೆ ತನ್ನಿಷ್ಟದಂತೆ ಮದುವೆಯಾಗಿದ್ದಾಳೆ. ಇದರಲ್ಲಿ ತಪ್ಪೇನಿದೆ ಎಂದು ಜೆಹಾನ್ ಪ್ರಶ್ನಿಸಿದ್ದರು.

ಸಂಬಂಧಿತ ಸುದ್ದಿಗಳು ಇಲ್ಲಿವೆ
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ http://bit.ly/2fMuHuz
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!: http://bit.ly/2hBmN7O
►►ನಾನು ಮತಾಂತರದ ವಿರೋಧಿ ಅಲ್ಲ. ಆದರೆ ಇದರಲ್ಲೇನೋ ಮೋಸವಿದೆ: ಅಶೋಕನ್: http://bit.ly/2wZczzX
►►ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ: http://bit.ly/2wk36DP
►►ಮರುಮತಾಂತರಕ್ಕೆ ಚಿತ್ರಹಿಂಸೆ. ಯೋಗ ಕೇಂದ್ರದ ವಿರುದ್ಧ ಆರೋಪ ನಿರಾಕರಿಸಿದ ಅದಿರಾ: http://bit.ly/2wj94Fj
►►ಇಸ್ಲಾಂ ಸ್ವೀಕರಿಸದಿದ್ದರೆ ನರಕಕ್ಕೆ ಹೋಗುತ್ತೇನೆಂದು ಭಯಗೊಂಡಿದ್ದೆ: ಅದಿರಾ: http://bit.ly/2fHnKYy
►►ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡೆ: ಮರಳಿ ಹಿಂದೂ ಧರ್ಮಕ್ಕೆ ಸೇರಿದ ಅದಿರಾ: http://bit.ly/2jQxiVH
►►ಬೇಲೂರಿನ ಬಾಲೆ, ಪ್ಲೇಟ್ ತಿರುವಿದ ಮೇಲೆ: http://bit.ly/1fIcvf6
►►ಮತಾಂತರಗೊಂಡ ಮಗನ ಕೊಲೆ ಮಾಡಿದ್ದ ಆರೆಸ್ಸೆಸ್: ಈಗ ತಂದೆಯೂ ಮತಾಂತರ: http://bit.ly/2hexdKB
►►ಲವ್ ಜಿಹಾದ್ ತನಿಖೆ: ಅಖಿಲಾ ಯಾನೆ ಹದಿಯಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ: http://bit.ly/2vDOIJ0
►►ಮತಾಂತರದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡ? ಎನ್ಐಎಯಿಂದ ಲವ್ ಜಿಹಾದ್ ತನಿಖೆ: http://bit.ly/2wLwsyD
►►ಮತಾಂತರದ ಮದುವೆ ಕೇಸ್: ‘ಲವ್ ಜಿಹಾದ್’ ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ: http://bit.ly/2i5tC1t
►►ಐಎಎಸ್ ಟಾಪರ್ಸ್ ಟೀನಾ-ಆಮೀರುಲ್ ವಿವಾಹಕ್ಕೆ ಹಿಂದೂ ಮಹಾಸಭಾ ಅಡ್ಡಿ: http://bit.ly/2gXx3WA
►►ಸಂಘಪರಿವಾರದಿಂದ "ಲವ್ ಜಿಹಾದ್" ಎಂದು ಕೋಲಾಹಲ: ಕೊನೆಗೂ ಒಂದಾದರು ಪ್ರೇಮಿಗಳು: http://bit.ly/2glfgpg
►►ಲವ್ ಜಿಹಾದ್, ಅಂತರ್ಜಾತಿ ವಿವಾಹ. 2 ನೈಜ ಘಟನೆಗಳು: http://bit.ly/1zth4z0
►►ಗುಜರಾತ್‌ನಲ್ಲಿ ಲವ್ ಜಿಹಾದ್‌ಗೆ ಲಕ್ಷಲಕ್ಷ ಆಫರ್. ಕಿಡಿಗೇಡಿಗಳ ಕೃತ್ಯ ಶಂಕೆ: http://bit.ly/1R10iRa
►►ಸಂಘಪರಿವಾರದ ಕೇಸರಿ ಲವ್ ಧೋಖಾ! ಪಿಎಫ್ಐ: http://bit.ly/2esfiPe
►►ಬಸ್ಸಿನಲ್ಲಿ ಭಿನ್ನ ಕೋಮಿನ ಜೋಡಿ. ದಾಳಿಗೆ ಹೊಂಚು. ಪೊಲೀಸರಿಂದ ಭದ್ರತೆ: http://bit.ly/2fBakzz
►►ಹಿಂದೂ ಹುಡುಗಿ ಮಾತಾಡಿದಳೆಂದು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಎಬಿವಿಪಿ ಕಾರ್ಯಕರ್ತ: http://bit.ly/2dDMfaP
►►ಬಾಡಿಗೆಗೆ ವಸತಿ ಸಿಗದೆ ಹಿಂದೂ ಹೆಸರಿಟ್ಟುಕೊಂಡು ಐಎಎಸ್ ಪಾಸ್ ಮಾಡಿದ ಮುಸ್ಲಿಂ ಯುವಕ: http://bit.ly/1T6DyBD
►►ಮಂಗಳೂರಿನಲ್ಲಿ ಇನ್ನೊಂದು ಅನೈತಿಕ ಪೊಲೀಸ್‌ಗಿರಿ. ಈ ಬಾರಿ ಮುಸ್ಲಿಂ ಹುಡುಗಿ-ಹಿಂದೂ: http://bit.ly/1OvglEF

ಇಂದು ಹೆಚ್ಚು ಓದಿದ ಸುದ್ದಿಗಳು
►►ಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟ.  ರೋಹಿತ್ ಶರ್ಮಾ ನಾಯಕ
http://bit.ly/2jqW3nT
►►ನಾನು ಹಿಂದೂ ವಿರೋಧಿಯಲ್ಲ. ಹಿಂದುತ್ವದ ವಿರೋಧಿ. ಅತಿರಥ ಚಿತ್ರಕ್ಕೆ ಅಡ್ಡಿಪಡಿಸಬೇಡಿ: http://bit.ly/2n8g4o3
►►ದಾರಿಯಲ್ಲಿ ಬಿದ್ದಿದ್ದ 36ಸಾವಿರ ರೂ. ಮರಳಿಸಿದ ಶಿಕ್ಷಕ: http://bit.ly/2joP0fv
►►ನಕ್ಸಲ್ ಗುಂಡಿಗೆ ಕರ್ನಾಟಕ ಯೋಧ ಬಲಿ: http://bit.ly/2k6uQLi
►►ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ 300 ವಿಕೆಟ್ ಗಳಿಕೆ. ಆರ್ ಅಶ್ವಿನ್ ವಿಶ್ವ ದಾಖಲೆ: http://bit.ly/2BgvJ70
►►ಸುಳ್ಯ: ಅಪಘಾತಕ್ಕೆ ಯುವಕ ಬಲಿ: http://bit.ly/2n6Xgpf
►►ಸ್ವಾಮಿಜಿಗಳ ನಡುವಿನ ಅಸಮಾನತೆ ಮೊದಲು ತೊಲಗಲಿ: ಮಾದಾರ ಚೆನ್ನಯ್ಯ ಸ್ವಾಮೀಜಿ  http://bit.ly/2Af2x1d
►►ಅಪಹೃತ ಸಫ್ವಾನ್ ಕೊಲೆ ಶಂಕೆ. ಇಬ್ಬರ ಬಂಧನ: http://bit.ly/2zGbROm
►►ಜಿಗ್ನೇಶ್ ಮೇವಾನಿ ಗುಜರಾತ್ ಚುನಾವಣಾ ಕಣಕ್ಕೆ: http://bit.ly/2BfGmHv
►►ಸಂಧಾನದ ಮಾತಿಲ್ಲ, ತೋಳಿನ ಶಕ್ತಿಯ ಮೇಲೆ ಮಂದಿರ ನಿರ್ಮಾಣ:  http://bit.ly/2n7XPiL
►►'ಗುಜರಾತ್ ಮಾದರಿಯನ್ನು' ಮಾದರಿ ಎನ್ನಲು ಸಾಕ್ಷ್ಯ ಇಲ್ಲ: http://bit.ly/2A9U5SU

Related Tags: Love Jehad, Hadiya, Akhila, Shefin Jahan, Supreme Court, NIA. Ashokan
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ